ಕರಾವಳಿಕ್ರೈಂಪುತ್ತೂರು

ಪುತ್ತೂರು: ಅಡ್ಡಾದಿಡ್ಡಿ ಓಡಿಸಿ ಲಾರಿಗೆ ಗುದ್ದಿದ ಸ್ಕೂಟರ್..! ಪೊಲೀಸ್ ಠಾಣೆ ಮೆಟ್ಟಿಲೇರಿದ ಲಾರಿ ಚಾಲಕ

229

ನ್ಯೂಸ್ ನಾಟೌಟ್: ಪುತ್ತೂರು ತಾಲೂಕು ಬಜತ್ತೂರು ಗ್ರಾಮದ ವಳಾಲು ಎಂಬಲ್ಲಿ ಸ್ಕೂಟರ್ ಮತ್ತು ಲಾರಿ ಮಧ್ಯೆ ಅಪಘಾತ ಸಂಭವಿಸಿದೆ. ಈ ಬಗ್ಗೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಳಾಲು ಎಂಬಲ್ಲಿ ಸ್ಕೂಟರ್ ಚಾಲಕ ತುಫೈಲ್ ಅಹಮ್ಮದ್ ಎಂಬುವವರು ಸ್ಕೂಟರ್ ಚಲಾಯಿಸಿಕೊಂಡು ಬಂದಿದ್ದಾರೆ. ಅತ್ಯಂತ ವೇಗ ಮತ್ತು ಅಜಾಗರೂತೆಯಿಂದ ಬಂದು ತನ್ನ ಲಾರಿಗೆ ಗುದ್ದಿದ್ದಾರೆ ಎಂದು ಬೆಂಗಳೂರು ಮೂಲದ ಲಾರಿ ಚಾಲಕ ದೇವರಾಜ್ ಜಿ ಅನ್ನುವವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗಾಯಾಳು ಸ್ಕೂಟರ್ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 158/2023 ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

https://newsnotout.com/2023/12/news-banana-tree-form-news/
See also  ಬಳ್ಪ:ಮನೆಗೆ ಅಪರಿಚಿತರು ಬಂದಿರೋದನ್ನು ಕಂಡು ಮಹಿಳೆ ಮಾಡಿದ್ದೇನು?ಈ ಪ್ಲ್ಯಾನ್‌ ಗೆ ಮನೆ ಕಡೆ ಬಂದವರು ಅಲ್ಲಿಂದ ಜಾಗ ಖಾಲಿ ಮಾಡಿದ್ರು!!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget