ಕರಾವಳಿಪುತ್ತೂರು

ಪುತ್ತೂರು: Pixel Creatives ಸಂಸ್ಥೆಯ ಸಹ ಮಾಲಕ ಪ್ರಶಾಂತ್ ಪಲ್ಲತ್ತಡ್ಕ ನಿಧನ

200

ನ್ಯೂಸ್‌ ನಾಟೌಟ್‌: ಪುತ್ತೂರಿನ Pixel Creatives ಸಂಸ್ಥೆಯ ಸಹ ಮಾಲಕ ಪ್ರಶಾಂತ್ ಪಲ್ಲತ್ತಡ್ಕ (32) ಅನಾರೋಗ್ಯದಿಂದ ಮಂಗಳವಾರ ನಿಧನ ಹೊಂದಿದ್ದಾರೆ.

ಎಲ್ಲರೊಂದಿಗೆ ಅನ್ಯೋನ್ಯದಿಂದಿದ್ದ ಪ್ರಶಾಂತ್ ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೀಡಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಮುಂಜಾನೆ ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತರು ಪತ್ನಿ, ತಂದೆ ತಾಯಿ, ಸಹೋದರಿಯರು, ಸಿಬ್ಬಂದಿ ವರ್ಗ ಹಾಗೂ ಹಿತೈಷಿಗಳನ್ನುಅಗಲಿದ್ದಾರೆ.

ಸುಳ್ಯ, ಪುತ್ತೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಹೊರ ಜಿಲ್ಲೆಗಳ ಕಾರ್ಯಕ್ರಮಗಳಿಗೆ ಎಲ್ಇಡಿ ಹಾಗೂ ನೇರಪ್ರಸಾರಕ್ಕೆ ಬೇಕಾಗುವ ಪರಿಕರಗಳನ್ನು Pixel Creatives ಸಂಸ್ಥೆ ಒದಗಿಸುತ್ತಿತ್ತು. ಪ್ರಶಾಂತ್‌ ಅಗಲಿಕೆಗೆ ಅವರ ಹಿತೈಷಿಗಳು ಮತ್ತು ಗ್ರಾಹಕರು ಕಂಬನಿ ಮಿಡಿದಿದ್ದಾರೆ.

See also  ಶಿಷ್ಯನಿಗೆ ಚಾಕು ಇರಿದ ಬಿಜೆಪಿ ಮುಖಂಡ..! ತಾನೇ ಬೆಳಸಿದ್ದ ಶಿಷ್ಯನ ಮೇಲೆ ಹಗೆತನ ಬೆಳೆದದ್ದು ಹೇಗೆ..?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget