ಕರಾವಳಿಕ್ರೈಂಪುತ್ತೂರು

ಪುತ್ತೂರು: ತಡರಾತ್ರಿ ಗೂಡಂಗಡಿಗೆ ಬೆಂಕಿ ಇಟ್ಟ ಕಿಡಿಗೇಡಿಗಳು..! ವಸ್ತುಗಳು ಸಂಪೂರ್ಣ ಸುಟ್ಟು ಕರಕಲು..!

ನ್ಯೂಸ್ ನಾಟೌಟ್: ಅಂಗಡಿಯೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ಸೊತ್ತುಗಳಿಗೆ ಹಾನಿ ಮಾಡಿದ ಘಟನೆ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ದೊಡ್ಡಡ್ಕ ಎಂಬಲ್ಲಿ ತಡರಾತ್ರಿ ನಡೆದಿದೆ.

ದೊಡ್ಡಡ್ಕ ನಿವಾಸಿ ಸಂಕಪ್ಪ ಪೂಜಾರಿ ಎಂಬವರಿಗೆ ಸೇರಿದ ಅಂಗಡಿಗೆ ಬೆಂಕಿ ಹಚ್ಚಿ ಹಾನಿಗೊಳಿಸಲಾಗಿದೆ. ಸಂಕಪ್ಪ ಪೂಜಾರಿ ಅವರು ಇಲ್ಲಿ ಸಣ್ಣ ಗೂಡಂಗಡಿ ಮತ್ತು ಟೀ ಸ್ಟಾಲ್ ಜೊತೆಯಾಗಿ ನಡೆಸುತ್ತಿದ್ದರು. ಪ್ರತಿದಿನ ಸಂಜೆಯ ತನಕ ವ್ಯಾಪಾರ ನಡೆಸುತ್ತಿದ್ದ, ಬಳಿಕ ಅಂಗಡಿ ಬಂದ್ ಮಾಡಿ ಮನೆಗೆ ತೆರಳುತ್ತಿದ್ದರು. ಎಂದಿನಂತೆ ಗುರುವಾರವೂ ಸಂಜೆಗೆ ಅಂಗಡಿ ಬಂದ್ ಮಾಡಿ ಮನೆಗೆ ತೆರಳಿದ್ದರು. ತಡರಾತ್ರಿ ಯಾರೋ ಅಂಗಡಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಅಂಗಡಿಯಲ್ಲಿನ ಸೊತ್ತುಗಳು ಸಂಪೂರ್ಣ ಸುಟ್ಟು ಹೋಗಿದ್ದು ಹಾನಿಯಾಗಿದೆ ಎಂದು ವರದಿ ತಿಳಿಸಿದೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Click

https://newsnotout.com/2024/08/karkala-kannada-news-viral-issue-police-complaint-kannada-news/
https://newsnotout.com/2024/08/karkala-kannada-news-case-sp-statement-and-accusedd/
https://newsnotout.com/2024/08/shikar-dawan-kannada-news-retairment-announced-a-cricketer-kananda-news/

Related posts

ಕಡಬ: ಬಸ್ ನಲ್ಲಿ ಸಿಕ್ಕಿದ್ದ ಐಫೋನನ್ನು ಪ್ರಾಮಾಣಿಕವಾಗಿ ಹಿಂತಿರುಗಿಸಿದ ವ್ಯಕ್ತಿ,ಮೊಬೈಲ್ ಪಡೆಯಲು ಮೈಸೂರಿನಿಂದ ಓಡೋಡಿ ಬಂದ ಯುವತಿ

ಬೆಂಕಿ ದುರಂತ ನಡೆದ ಸ್ಥಳಕ್ಕೆ ಸಚಿವ ಎಸ್ .ಅಂಗಾರ ಭೇಟಿ, ಪರಿಶೀಲನೆ

ಉಜಿರೆ: ಬೈಕ್ -ಕಾರು ನಡುವೆ ಭೀಕರ ಅಪಘಾತ, ಎರಡು ತುಂಡಾಗಿ ರಸ್ತೆಗೆ ಎಸೆಯಲ್ಪಟ್ಟ ಬೈಕ್..!