ಕರಾವಳಿಪುತ್ತೂರು

ಪುತ್ತಿಲ ಮನವಿಗೆ ಮಿಡಿದ ಪುತ್ತೂರಿನ ಜನತೆ

291

ನ್ಯೂಸ್‌ ನಾಟೌಟ್‌: ಪುತ್ತೂರು ವಿಧಾನ ಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರ ಮನವಿಗೆ ಜನತೆ ಭಾರಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿಸ್ಪರ್ಧಿ ಪಕ್ಷಗಳ ಹಲವು ಆರೋಪಗಳ ನಡೆಯಿಂದ ಬೇಸತ್ತ ಅರುಣ್ ಕುಮಾರ್ ಪುತ್ತಿಲ ಅವರು ಇತ್ತೀಚೆಗೆ ಆಯೋಜಿಸಿದ ಮಹಿಳಾ ಸಮಾವೇಶ ಸೀತಾ ಪರಿವಾರದಲ್ಲಿ ಚುನಾವಣೆ ಎದುರಿಸುವುದು ಕಷ್ಟಸಾಧ್ಯ. ಅದಕ್ಕೆ ಅಧಿಕಾರ ಹಾಗೂ ಹಣ ಬಲ ಬೇಕು. ನಿಮ್ಮ ಓಟಿನ ಜತೆಗೆ 10 ರೂಪಾಯಿಯಂತೆ ನೀಡಿ ನಿಮ್ಮ ಮನೆ ಮಗನ ರೀತಿ ಬೆಂಬಲಿಸಿ ಎಂದು ಮನವಿ ಮಾಡಿದ್ದರು.

ಈ ವಿಡಿಯೋ ಭಾರಿ ವೈರಲ್ ಆಗಿತ್ತು. ಬಳಿಕ ಪುತ್ತಿಲರ ಚುನಾವಣ ನಿರ್ವಹಣೆಯ ಐಟಿ ಸೆಲ್ ವತಿಯಿಂದ ಎ.29ರ ಮಧ್ಯಾಹ್ನ ಖಾತೆ ಸಂಖ್ಯೆ , ಕ್ಯೂ ಆರ್ ಕೋಡ್, ಯುಪಿಐ ನಂಬರ್‌ನ ಅಧಿಕೃತ ಪೋಸ್ಟರ್ ಬಿಡುಗಡೆ ಮಾಡಲಾಯಿತು.

ಈ ಪೋಸ್ಟರ್ ರಿಲೀಸ್ ಮಾಡಿದ ಕೆಲವೇ ಗಂಟೆಗಳಲ್ಲಿ ಲಕ್ಷದಷ್ಟು ಮೊತ್ತ ಸಂಗ್ರಹವಾಗಿದೆ. ಕುರಿಯದ ಬೆನ್ನುಮೂಲೆ ಮುರಿತಕ್ಕೊಳಕ್ಕಾದ ಸತೀಶ್ ಎನ್ನುವವರು 5 ಸಾವಿರ ಹಣ ನೀಡಿಅರುಣ್ ಪುತ್ತಿಲರಿಗೆ ಬೆಂಬಲ ಸೂಚಿಸಿ ನೀವು ಯಾವತ್ತೂ ಸೋಲಬಾರದು ಎನ್ನುವ ಸಂದೇಶ ಹಾಕಿದ್ದಾರೆ. ಮಹಿಳೆಯೋರ್ವರು 30000 ಹಣ ಕಳುಹಿಸುತ್ತಿದ್ದಾರೆ. ಹೀಗೆ ಹಲವು ಮಂದಿ ದಾನಿಗಳು ಪುತ್ತಿಲ ಅವರಿಗೆ ಆರ್ಥಿಕವಾಗಿ ಶಕ್ತಿ ತುಂಬಿದ್ದಾರೆ.

ಪುತ್ತೂರು ವಿಧಾನಸಭಾ ಕ್ಷೇತ್ರದ ಮನೆ ಮನೆಯಿಂದ 10, 50, 100, 500, 1000 ದಂತೆ ಹಣ ಸಂದಾಯವಾಗಿದೆ. ಹೊರ ತಾಲೂಕಿನವರೂ ಸ್ಪಂದಿಸಿದ್ದಾರೆ. 12 ಗಂಟೆ ಅವಧಿಯಲ್ಲಿ ಈ ಖಾತೆಗೆ 7.80 ಲಕ್ಷ ರೂಪಾಯಿ ಹಣ ಹರಿದು ಬಂದಿದೆ ಎಂದು ತಿಳಿದು ಬಂದಿದೆ.

See also  ಪಿಯುಸಿ ಫಲಿತಾಂಶ : ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯ ವಾಣಿಜ್ಯ ವಿಭಾಗದಲ್ಲಿ ಶೇ.100 ಫಲಿತಾಂಶ, ಇಲ್ಲಿದೆ ಸಂಪೂರ್ಣ ವಿವರ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget