ಕರಾವಳಿಪುತ್ತೂರು

ಪುತ್ತೂರು : ಮೈಮೇಲೆ ಬಿದ್ದ ಮರದ ದಿಮ್ಮಿ: ಕಾಂಗ್ರೆಸ್ ಅಧ್ಯಕ್ಷ ಸಾವು!

267

ನ್ಯೂಸ್ ನಾಟೌಟ್ :  ಪಿಕಪ್ ವಾಹನಕ್ಕೆ ಮರ ತುಂಬಿಸುವ ವೇಳೆ ಮೈಮೇಲೆ ಬಿದ್ದು ಸುಳ್ಯಪದವು ವಲಯ ಕಾಂಗ್ರೆಸ್ ಅಧ್ಯಕ್ಷ ಗೋಪಾಲಕೃಷ್ಣ ಮೃತಪಟ್ಟಿರುವ ಘಟನೆ ಇಂದು(ಜೂನ್ 5) ನಡೆದಿದೆ.

ಬಡಗನ್ನೂರು ಗ್ರಾಮದ ಬಟ್ಯಂಗಲ ದಿ. ಕೊಲ್ಲಯ್ಯ ಒಕ್ಕಲಿಗ ಎಂಬವರ ಪುತ್ರ ಗೋಪಾಲಕೃಷ್ಣ ಮೃತರಾಗಿದ್ದು, ಮನೆಯ ಜಾಗದಲ್ಲಿ ಮರದ ದಿಮ್ಮಿಯನ್ನು ಪಿಕಪ್ ಗೆ ತುಂಬಿಸುವ ವೇಳೆ ಮರದ ದಿಮ್ಮಿ ಹಿಂದಕ್ಕೆ ಬಂದು ಗೋಪಾಲಕೃಷ್ಣ ರವರ ಮೈಮೇಲೆ ಬಿದ್ದು ತೀವ್ರ ಗಾಯಗೊಂಡಿದ್ದರು ಎನ್ನಲಾಗಿದೆ.

ಮೃತ ಗೋಪಾಲಕೃಷ್ಣ ರವರು ಬಡಗನ್ನೂರು ಗ್ರಾ.ಪಂ ಸದಸ್ಯ ಹಾಗೂ ಸುಳ್ಯಪದವು ಯುವ ಶಕ್ತಿ ಬಳಗದ ಗೌರವಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರನ್ನು ಆಸ್ಪತ್ರೆಗೆ ಕರೆತರುವ ವೇಳೆ ಅವರು ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತರು ತಾಯಿ, ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ ಎನ್ನಲಾಗಿದೆ.

See also  ಅಪ್ಪು ಬಳಿಕ ಸ್ಪಂದನಾ ವಿಜಯ್ ರಾಘವೇಂದ್ರ ಅವರಿಗೂ ಹೃದಯಾಘಾತ!, ದೊಡ್ಮನೆಯಲ್ಲೇ ಇಬ್ಬರ ಬಲಿ ಪಡೆದ ಹಾರ್ಟ್ ಅಟ್ಯಾಕ್!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget