ಕರಾವಳಿ

ಪುತ್ತೂರು:ನವವಿವಾಹಿತ ಹೃದಯಾಘಾತಕ್ಕೆ ಬಲಿ,ಎರಡು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಯುವಕ

378


ನ್ಯೂಸ್ ನಾಟೌಟ್ : ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ನವ ವಿವಾಹಿತನೋರ್ವ ಹೃದಯಾಘಾತದಿಂದ ನಿಧನರಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ನರಿಮೊಗರು ಗ್ರಾಮದ ಧರ್ಮನಗರದ ನಿವಾಸಿ ಸುರೇಶ್‌ (30) ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿ.


ಕಳೆದ ಕೆಲ ವರ್ಷಗಳಿಂದ ಬೆಂಗಳೂರಿನ ಗ್ಲೋಬಲ್ ಲಿಫ್ಟ್ ಸರ್ವೀಸ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಸುರೇಶ್ ಎರಡು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದರು.ಇನ್ನು ಸುರೇಶ್‌ ಅವರು ಕೆಲಸ ಮುಗಿಸಿಕೊಂಡು ಮನೆಗೆ ವಾಪಸ್ ಆಗಿದ್ದಾಗ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಅವರನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

See also  ಉಡುಪಿ: Daijiworld TV ಚಾನೆಲ್ ನ “ಈ ಬಂಧನ” ಕಾರ್ಯಕ್ರಮಕ್ಕೆ ಸುಳ್ಯದ ಜೋಡಿ ಆಯ್ಕೆ, ಡಾ. ಅನುರಾಧಾ ಕುರುಂಜಿ ಮತ್ತು ಚಂದ್ರಶೇಖರ ಬಿಳಿನೆಲೆ ದಂಪತಿಗಳ ಮನದ ಮಾತು
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget