ಪುತ್ತೂರು

ಯುವತಿಯೊಂದಿಗೆ ಪುತ್ತೂರು ಶಾಸಕನ ಪೋಟೋ ವೈರಲ್ ಪ್ರಕರಣ,ಈ ಬಗ್ಗೆ ಪೊಲೀಸ್ ತನಿಖೆಯಾಗಬೇಕು-ಕೆಪಿಸಿಸಿ ವಕ್ತಾರ ಅಮಲಾ ರಾಮಚಂದ್ರ ಭಟ್

301

ನ್ಯೂಸ್ ನಾಟೌಟ್ :ಶಾಸಕ ಸಂಜೀವ ಮಠದೂರು ಬಗ್ಗೆ ವಿವಾದ ಹುಟ್ಟಿಕೊಂಡ ಬೆನ್ನಲ್ಲೇ ಇದೀಗ ಕೆಪಿಸಿಸಿ ವಕ್ತಾರ ಅಮಲಾ ರಾಮಚಂದ್ರ ಭಟ್ ಧ್ವನಿಯೆತ್ತಿದ್ದಾರೆ. ಅಭ್ಯರ್ಥಿ ಆಯ್ಕೆಗೆ ಮುಂಚೆಯೇ ಚುನಾವಣಾ ಸಂದರ್ಭದಲ್ಲಿ ಯುವತಿಯೊಂದಿಗೆ ಫೋಟೋ ವೈರಲ್ ಮಾಡಿದ್ದು ಅಕ್ಷಮ್ಯ ಅಪರಾಧ ಎಂದಿದ್ದಾರೆ.ಇದು ಮಹಿಳೆಗೆ ಅಗೌರವ ತೋರಿಸಿದಂತೆ ಎಂದ ಅವರು ಈ ಬಗ್ಗೆ ಸೂಕ್ತ ಪೊಲೀಸ್ ತನಿಖೆಯಾಗಬೇಕು.ಸತ್ಯಾಂಶ ಏನೆಂದು ಹೊರಗೆ ಬರಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಪುತ್ತೂರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಫೊಟೋದಲ್ಲಿ ಮಹಿಳೆಯನ್ನು ತೋರಿಸಿದ್ದು,ಫೋಟೋವನ್ನು ಸೋಶಿಯಲ್ ಮೀಡಿಯಾ ಮೂಲಕ ವೈರಲ್ ಮಾಡಲಾಗಿದೆ.ಇದು ಮಹಿಳೆಯ ಮರ್ಯಾದೆಗೆ ಧಕ್ಕೆಯನ್ನುಂಟು ಮಾಡಿದೆ.ಮಹಿಳೆಯನ್ನು ಮಾತೆಯರು ಎಂದು ಕರೆಯಲಾಗುತ್ತದೆ.ನಮ್ಮ ದೇಶದಲ್ಲಿ ಮಹಿಳೆಯನ್ನು ಪೂಜನೀಯ ಭಾವದಲ್ಲಿ ನೋಡಲಾಗುತ್ತದೆ.ಆದರೆ ಈ ಕೃತ್ಯವನ್ನು ಯಾರು ಮಾಡಿದ್ದಾರೋ ಅವರು ದೊಡ್ಡ ಅಪರಾಧವನ್ನೇ ಮಾಡಿದ್ದಾರೆ ಎಂದರು.

ಬಿಜೆಪಿಯಲ್ಲಿ ಇಂತಹ ಘಟನೆ ರೇಣುಕಾಚಾರ್ಯರರಿಂದ ಪ್ರಾರಂಭವಾಗಿ ಮರುಕಳಿಸುತ್ತಲೇ ಇದೆ. ಈ ಹಿಂದೆಯೇ ಸಂಜೀವ ಮಠಂದೂರು ಅವರು ರಾಜಕೀಯ ಶತ್ರುಗಳಿದ್ದಾರೆಂದು ಹೇಳಿದ್ದರು. ಅವರು ಇದನ್ನು ಕಾಂಗ್ರೆಸ್ ಕಡೆ ಬೆರಳು ತೋರಿಸಿ ಹೇಳುತ್ತಿಲ್ಲ.ಹಾಗಾದರೆ ಶತ್ರುಗಳು ಎಲ್ಲಿದ್ದಾರೆಂದು ಪತ್ತೆ ಮಾಡಿ ಘಟನೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು. ಬಿಜೆಪಿ ಇಂತಹ ವಿಚಾರಗಳಲ್ಲಿ ಮೌನವಹಿಸಿದೆ.ಈ ಘಟನೆಗಳಾದಾಗ ಬಿಜೆಪಿ ಮೌನ ಮುರಿದು ಮಾತಾಡಬೇಕಾಗಿದೆ ಎಂದು ಅಭಿಪ್ರಾಯ ಪಟ್ಟರು.

ಈ ವೇಳೆ ಎಸ್.ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಜಯಂತಿ ಬಲ್ನಾಡ್, ಮಹಮ್ಮದ್ ರಿಯಾಜ್ ಉಪಸ್ಥಿರಿದ್ದರು.

See also  ಬೈಕ್‌ಗಳ ನಡುವೆ ಅಪಘಾತ ಓರ್ವನಿಗೆ ಗಾಯ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget