ಕರಾವಳಿಕ್ರೈಂಪುತ್ತೂರು

ಪುತ್ತೂರು: ಗೃಹಪ್ರವೇಶ ಮುಗಿಸಿ ಎರಡೇ ದಿನಕ್ಕೆ ಯಜಮಾನ ನೇಣಿಗೆ ಶರಣು! ಪತ್ನಿಯೊಂದಿಗಿನ ಗಲಾಟೆ ಸಾವಿನಲ್ಲಿ ಅಂತ್ಯ..!

289

ನ್ಯೂಸ್‌ ನಾಟೌಟ್‌: ಗೃಹಪ್ರವೇಶ ಮುಗಿಸಿ ಎರಡೇ ದಿನಕ್ಕೆ ಮನೆ ಯಜಮಾನ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಕರುಣಾಜನಕ ಘಟನೆ ಚಿಕ್ಕಮುಟ್ನೂರು ಗ್ರಾಮದ ಬೀರ್ನಹಿತ್ಲಿನಲ್ಲಿ ಮೇ 29ರಂದು ಸಂಭವಿಸಿದೆ.

ಬೀರ್ನಹಿತ್ಲು ನಿವಾಸಿ ವಿಜಯ ಕುಮಾರ್‌ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು. ಮನೆಯ ಹಿಂದುಗಡೆಯ ಶೆಡ್‌ನ‌ ಮೇಲ್ಛಾವಣಿಗೆ ಅಳವಡಿಸಿದ ಕಬ್ಬಿಣದ ರಾಡ್‌ಗೆ ಲುಂಗಿಯನ್ನು ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೇ 27ರಂದು ಮನೆಯ ಗೃಹಪ್ರವೇಶ ನಡೆದಿತ್ತು. ಮೇ 28ರಂದು ಅಮಲು ಪದಾರ್ಥ ಸೇವಿಸಿ ಕ್ಷುಲ್ಲಕ ಕಾರಣಕ್ಕೆ ಪತ್ನಿಯೊಂದಿಗೆ ಗಲಾಟೆ ಮಾಡಿದ್ದರು ಎನ್ನಲಾಗಿದೆ. ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

See also  ಕಾರಿನ ರೂಫ್ ಮೇಲೆ ನಾಯಿ ಮರಿಗಳನ್ನು ಕೂರಿಸಿ ಅಡ್ಡಾದಿಡ್ಡಿಯಾಗಿ ಕಾರು ಚಾಲನೆ..! ಪ್ರಶ್ನಿಸಿದವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ..! ಇಲ್ಲಿದೆ ವಿಡಿಯೋ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget