ಕರಾವಳಿಪುತ್ತೂರು

ಪುತ್ತೂರು ವಕೀಲರ ಸಂಘದ ಕಚೇರಿಗೆ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಭೇಟಿ, ಕುಂದು-ಕೊರತೆಗಳ ಕುರಿತು ಚರ್ಚೆ

284

ನ್ಯೂಸ್ ನಾಟೌಟ್ : ಪುತ್ತೂರು ಕೋರ್ಟ್ ಆವರಣದಲ್ಲಿ ವಕೀಲರ ಸಂಘದ ಕಚೇರಿಗೆ ಬುಧವಾರ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಭೇಟಿ ನೀಡಿ ಮಾತಾಯಾಚನೆ ನಡೆಸಿದರು.

ವಕೀಲರ ಜೊತೆ ಮಾತಾಡಿದ ಅಶೋಕ್ ರೈ ಪಕ್ಷವನ್ನು ಬೆಂಬಲಿಸುವಂತೆ ಕೇಳಿಕೊಂಡರು. ಈ ವೇಳೆ ವಕೀಲರು ಆನಾಜೆಯಲ್ಲಿರುವ ನ್ಯಾಯಾಲಯ ಸಂಕೀರ್ಣದ ವರೆಗೆ ಸಿಟಿ ಬಸ್ ಕಲ್ಪಿಸಿದರೆ ಕಕ್ಷಿದಾರರಿಗೆ ಪ್ರಯೋಜನವಾಗಲಿದೆ ಮತ್ತು ಈ ಕೋರ್ಟ್ ಗೆ ಹೋಗುವ ರಸ್ತೆ ಅಗಲಿಕರಣವಾಗಬೇಕು ಎಂದು ಬೇಡಿಕೆ ಸಲ್ಲಿಸಿದರು.

ಸೋಲಾರ್ ಅಳವಡಿಕೆಯ ಕುರಿತು ಚರ್ಚಿಸಿದ್ದು, ನಾನು ಶಾಸಕನಾಗಿ ಆಯ್ಕೆ ಆದರೆ ತಮ್ಮ ಬೇಡಿಕೆಗಳಿಗೆ ಹೆಚ್ಚು ಪ್ರಧಾನ್ಯತೆ ಕೊಟ್ಟು ಈಡೇರಿಸುವುದಾಗಿ ಭರವಸೆ ನೀಡಿದರು. ಅನಿತಾ ಹೇಮಾನಾಥ ಶೆಟ್ಟಿ, ಕುಂಬ್ರ ದುರ್ಗಾಪ್ರಸಾದ್ ರೈ, ಭಾಸ್ಕರ ಗೌಡ ಕೊಡಿ ಅಂಬಲ ಸೇರಿದಂತೆ ವಕೀಲರ ಸಂಘದ ಸದಸ್ಯರು ಮತ್ತು ಕಾರ್ಯಕರ್ತರು ಈ ವೇಳೆ ಉಪಸ್ಥಿತರಿದ್ದರು.

See also  ರವಿ ಡಿ ಚನ್ನಣ್ಣವರ್ ಸಹೋದರ ಅರೆಸ್ಟ್ ಸಾಧ್ಯತೆ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget