ಕರಾವಳಿಕ್ರೈಂಪುತ್ತೂರು

ಪುತ್ತೂರಿನಲ್ಲಿ ಕಾಣಿಸಿಕೊಂಡ ಖತರ್ನಾಕ್ ಚಡ್ಡಿ ಗ್ಯಾಂಗ್ ..? ರಾತ್ರಿ ಮನೆಯಂಗಳಕ್ಕೆ ಬಂದು ತಲವಾರು ತೋರಿಸಿ ಹಣ, ಚಿನ್ನ ನೀಡುವಂತೆ ಬೆದರಿಕೆ

223

ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಖತರ್ನಾಕ್ ಡಕಾಯಿತಿ ಗ್ಯಾಂಗ್ ಆಗಿ ಜನರಲ್ಲಿ ಆತಂಕ ಮೂಡಿಸಿರುವ ಚಡ್ಡಿ ಗ್ಯಾಂಗ್ ಬಗ್ಗೆ ಸಾಕಷ್ಟು ಚರ್ಚೆಗಳು ಆಗಿದ್ದವು, ಮಂಗಳೂರು ಪೊಲೀಸರಿಗೆ ದೊಡ್ಡ ತಲೆನೋವಾಗಿದ್ದ ಈ ಗ್ಯಾಂಗ್ ನ ಅಟ್ಟಹಾಸಕ್ಕೆ ಕಡಿವಾಣ ಹಾಕಲು ಬಿಗಿ ಕ್ರಮ ತೆಗೆದುಕೊಳ್ಳಲಾಗಿತ್ತು. ಇದೀಗ ಪುತ್ತೂರಿನ ಕೆಯ್ಯೂರು ಎಂಬಲ್ಲಿ ಚಡ್ಡಿ ಗ್ಯಾಂಗ್ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.

ಕೆಯ್ಯೂರಿನ ಸಣಂಗಳ ಎಂಬಲ್ಲಿ ನ.5 ರಂದು ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ಮನೆಯಂಗಳದಲ್ಲಿ ಚಡ್ಡಿ ಬನಿಯನ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿದ್ದ ಸುಮಾರು ನಾಲ್ಕು ಮಂದಿಯ ತಂಡವೊಂದು ಕಾಣಸಿಕೊಂಡಿದೆ. ರಬ್ಬರ್ ಟ್ಯಾಪಿಂಗ್ ವೃತ್ತಿಯಲ್ಲಿರುವ ಮಾರ್ಗರೇಟ್ ಎಂಬವರ ಬಾಡಿಗೆ ಮನೆಯ ಅಂಗಳಕ್ಕೆ ಬಂದ ಈ ಗ್ಯಾಂಗ್ ಬೆದರಿಕೆ ಹಾಕಿದೆ. ಹಣ, ಒಡವೆ ನೀಡುವಂತೆ ಹೆದರಿಸಿದ್ದಾರೆ. ಇದೇ ವೇಳೆಗೆ ಮನೆಯಲ್ಲಿ ಇತರರು ಇರುವುದರನ್ನು ಕಂಡ ಗ್ಯಾಂಗ್ ಸ್ಥಳದಿಂದ ಕಾಲ್ಕಿತ್ತಿದೆ ಎಂದು ತಿಳಿದು ಬಂದಿದೆ. ಮಾರ್ಗರೇಟ್ ಅವರು ಮೆನೆಯೊಳಗೆ ಓಡಿ ಅಲ್ಲಿಂದಲೇ ಚಡ್ಡಿ ಗ್ಯಾಂಗ್ ನ ಫೋಟೋ ಕ್ಲಿಕ್ಕಿಸಿದ್ದಾರೆ. ಈ ಫೋಟೋ ಈಗ ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿದೆ.

Click

https://newsnotout.com/2024/11/sowthadka-mahaganapathi-temple-kannada-news-viral-news/
See also  ದಿಢೀರ್ ನಿಮ್ಮ ನ್ಯೂಸ್ ನಾಟೌಟ್ ವಾಟ್ಸ್ಅಪ್ ಗ್ರೂಪ್ ಗಳಲ್ಲಿ ಬದಲಾವಣೆ ಆಗಿದ್ದು ಏಕೆ? ಕಮ್ಯುನಿಟಿ ಗ್ರೂಪ್ ಮಾಡಿದ್ಯಾಕೆ?
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget