Latestಕರಾವಳಿಕ್ರೈಂದಕ್ಷಿಣ ಕನ್ನಡ

ಪುತ್ತೂರಿನಲ್ಲಿ ಕಂಡಕ್ಟರ್ ಒಬ್ಬರು ಅಮಾನವೀಯವಾಗಿ ನಡೆದುಕೊಂಡ ಬಗ್ಗೆ ಸ್ಪಷ್ಟನೆ ನೀಡಿದ KSRTC..! ಇಲ್ಲಿದೆ ವೈರಲ್ ವಿಡಿಯೋ

2k
Spread the love

ನ್ಯೂಸ್ ನಾಟೌಟ್: KSRTC ಬಸ್ ಕಂಡಕ್ಟರ್ ಒಬ್ಬರು ವ್ಯಕ್ತಿಯೊಬ್ಬನ ಜೊತೆ ಅಮಾನವೀಯವಾಗಿ ನಡೆದುಕೊಂಡು ಆತನನ್ನು ಒದ್ದು ಬಸ್‌ ನಿಂದ ಕೆಳಗೆ ಇಳಿಸಿದ್ದಾರೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಬಗ್ಗೆ ಸ್ವತಃ KSRTC ಅಧಿಕಾರಿಗಳು ಇಂದು( ಫೆ.23) ಸ್ಪಷ್ಟನೆ ನೀಡಿದ್ದಾರೆ.
“ಹೌದು ಈ ಘಟನೆ ನಡೆದಿರುವುದು ನಿಜ. ಆದರೆ, ಇದು ಎರಡು ವರ್ಷದ ಹಳೆಯ ವಿಡಿಯೋ” ಎಂದು ಎಕ್ಸ್‌ ನಲ್ಲಿ ಇಂದು (ಫೆ.23) ಪೋಸ್ಟ್ ಮಾಡುವ ಮೂಲಕ ತಿಳಿಸಿದ್ದಾರೆ.

“ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸದರಿ ವಿಡಿಯೊ ತುಣುಕು ಎರಡೂವರೆ ವರ್ಷಗಳ ಹಿಂದಿನದ್ದಾಗಿದೆ. ಈ ಘಟನೆಯು ದಿನಾಂಕ 07-09-2022 ರ ಸಂಜೆ ನಡೆದಿತ್ತು. ಬಸ್ ಸಂಖ್ಯೆ ಎಫ್ 0002 ಅನುಸೂಚಿ ಸಂಖ್ಯೆ 159/160 ರಲ್ಲಿ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸಿದ ಸುಖರಾಜ ರೈ ಅವರು ಪುತ್ತೂರು ತಾಲೂಕಿನ ಈಶ್ವರ ಮಂಗಲದಲ್ಲಿ ಓರ್ವ ಮಧ್ಯಪಾನ ಮಾಡಿದ ಪ್ರಯಾಣಿಕರನ್ನು ವಾಹನದಿಂದ ಕೆಳಗಡೆಗೆ ಇಳಿಸುವಾಗ ಅಮಾನವೀಯವಾಗಿ ವರ್ತಿಸಿದ್ದರು. ಅವರಿಗೆ ಹೊಡೆದು ಕಾಲಿನಿಂದ ಒದ್ದು ಬೀಳಿಸಿರುತ್ತಾರೆ. ನಿರ್ವಾಹಕರ ಈ ರೀತಿಯ ವರ್ತನೆಗೆ ಸಂಸ್ಥೆಯು ಕಠಿಣ ಶಿಸ್ತಿನ ಕ್ರಮ ತೆಗೆದುಕೊಂಡು ಅಮಾನತ್ತು ಶಿಕ್ಷೆಯನ್ನು ಸಹ ವಿಧಿಸಿತ್ತು. ನಿಗಮವು ಈ ಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸಿ, ಇತರೆ ಸಿಬ್ಬಂದಿಗಳಿಗೆ ಪ್ರಯಾಣಿಕರೊಡನೆ ಸೌಹಾರ್ದತೆಯಿಂದ ವರ್ತಿಸುವಂತೆ ಎಚ್ಚರಿಕೆ ನೀಡಲಾಗಿತ್ತು ಎಂದು ತಿಳಿಸಿದೆ.

 

See also  ಕಾಂತಮಂಗಲದ ಅವಿವಾಹಿತ ಯುವಕ ದಿಢೀರ್ ನಾಪತ್ತೆ, ಮನೆಯವರಿಂದ ಪೊಲೀಸ್ ದೂರು ಕೊಡುವುದಕ್ಕೆ ನಿರ್ಧಾರ
  Ad Widget   Ad Widget   Ad Widget   Ad Widget