ಕರಾವಳಿಪುತ್ತೂರು

ಪುತ್ತೂರು: 3 ದಶಕದಿಂದ ಕ್ಷೀರ ಕ್ರಾಂತಿಯ ಸಂಕೇತವಾಗಿದ್ದ ಹಾಲಿನ ಶೀಥಲೀಕರಣ ಘಟಕ ದಿಢೀರ್‌ ಬಂದ್‌, ಕಾರ್ಮಿಕರು ಬೀದಿಪಾಲು..!

251

ನ್ಯೂಸ್ ನಾಟೌಟ್: ಮೂರು ದಶಕಗಳಿಂದ ಕ್ಷೀರ ಕ್ರಾಂತಿಯನ್ನು ಮಾಡಿ ಪುತ್ತೂರಿನಲ್ಲಿ ಜನಮನ್ನಣೆಗೆ ಪಾತ್ರವಾಗಿದ್ದ ಪುತ್ತೂರಿನ ಜಿಡೆಕಲ್ಲಿನಲ್ಲಿರುವ ದಕ್ಷಿಣಕನ್ನಡ ಜಿಲ್ಲಾ ಹಾಲು ಸಹಕಾರಿ ಒಕ್ಕೂಟದ ಹಾಲು ಶೀಥಲೀಕರಣ ಘಟಕ ದಿಢೀರ್ ಬಂದ್ ಆಗಿದೆ. ಏಕಾಏಕಿ ಈ ಘಟಕ ಮುಚ್ಚಿದ ಕಾರಣ ಘಟಕದಲ್ಲಿ ದುಡಿಯುತ್ತಿದ್ದ ಕಾರ್ಮಿಕರು ಬೀದಿ ಪಾಲಾಗುವಂತಹ ಪರಿಸ್ಥಿತಿ ಎದುರಾಗಿದೆ. ಈ ಘಟಕವನ್ನೇ ನಂಬಿಕೊಂಡು 10ಕ್ಕೂ ಮಿಕ್ಕಿದ ಹಾಲು ಸಾಗಾಟದ ವಾಹನಗಳ ಚಾಲಕರಿಗೂ ಘಟಕ ಮುಚ್ಚಿರುವುದರಿಂದ ತೊಂದರೆಯಾಗಿದೆ. ಪರ್ಯಾಯ ವ್ಯವಸ್ಥೆಯಿಲ್ಲದೆ ಚಿಂತೆಗೀಡಾಗಿದ್ದಾರೆ.

ಒಕ್ಕೂಟದ ಮೇಲೆ ಹಣಕಾಸಿನ ಹೊರೆ ಬಿದ್ದ ಹಿನ್ನೆಲೆಯಲ್ಲಿ ಈ ಘಟಕ ಮುಚ್ಚಲು ಒಕ್ಕೂಟ ತೀರ್ಮಾನಿಸಿದ ಕಾರಣ ಮೇ 31ಕ್ಕೆ ಶೀಥಲೀಕರಣ ಕೆಲಸ ನಿಲ್ಲಿಸಿದೆ. ಇದರಿಂದಾಗಿ ಈ ಘಟಕದಲ್ಲಿ ಕಳೆದ 25ಕ್ಕೂ ಹೆಚ್ಚು ವರ್ಷಗಳಿಂದ ಘಟಕದಲ್ಲಿ ದುಡಿಯುತ್ತಿದ್ದ ಗುತ್ತಿಗೆ ಕಾರ್ಮಿಕರು ಬೀದಿ ಪಾಲಾಗುತ್ತಿದ್ದಾರೆ. ಈ ನಾಲ್ಕು ತಾಲೂಕುಗಳಲ್ಲಿ ಇದೀಗ ಬಲ್ಕ್ ಕೂಲರ್‌ ಕಾರ್ಯಾಚರಿಸುತ್ತಿರುವ ಹಿನ್ನೆಲೆಯಲ್ಲಿ ಪುತ್ತೂರಿನ ಈ ಘಟಕಕ್ಕೆ ಇತ್ತೀಚೆಗೆ ಬರುವ ಹಾಲಿನ ಪ್ರಮಾಣವೂ ಕಡಿಮೆಯಾಗಿತ್ತು. ಈ ಘಟಕ ಆರಂಭಗೊಂಡ ಸಮಯದಲ್ಲಿ ದಿನಕ್ಕೆ 60 ಸಾವಿರ ಲೀಟರ್ ಹಾಲನ್ನು ಶೀಥಲೀಕರಣಗೊಳಿಸಿ ಮಂಗಳೂರಿನ ಘಟಕಕ್ಕೆ ಕಳುಹಿಸಲಾಗುತ್ತಿತ್ತು. ಪುತ್ತೂರು, ಸುಳ್ಯ, ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕಿನ ಹಾಲು ಉತ್ಪಾದಕ ಸಂಘಗಳು ಸಂಗ್ರಹಿಸಿದ ಹಾಲನ್ನು ಪುತ್ತೂರಿನ ಈ ಘಟಕದಲ್ಲಿ ಶೀಥಲೀಕರಿಸಿ ಮಂಗಳೂರಿಗೆ ಸಾಗಿಸಲಾಗುತ್ತಿತ್ತು. ಆ ಸಮಯದಲ್ಲಿ 30ಕ್ಕೂ ಮಿಕ್ಕಿದ ಕಾರ್ಮಿಕರು ಈ ಘಟಕದಲ್ಲಿ ದುಡಿಯುತ್ತಿದ್ದು, ಇದೀಗ ಈ ಸಂಖ್ಯೆ 17 ಕ್ಕೆ ಇಳಿದಿದೆ. ಇದರಲ್ಲಿ ಕೇವಲ 4 ಮಂದಿ ಮಾತ್ರ ಖಾಯಂ ಕಾರ್ಮಿಕರಾಗಿದ್ದು, ಇವರನ್ನು ಮಂಗಳೂರಿನ ಘಟಕದಲ್ಲಿ ನಿಯೋಜಿಸಲಾಗಿದೆ.

See also  ದಕ ಜಿಲ್ಲಾ ಜೆಡಿಎಸ್ ಕಾರ್ಯರ್ಶಿ ಸುಶೀಲ್ ನೊರೊನ್ಹಾ ನಿಧನ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget