ಕ್ರೈಂಪುತ್ತೂರು

ಪುತ್ತೂರು: ಹಿಂದೂ ಯುವಕನ ಅಡ್ಡಗಟ್ಟಿ ನಾಲ್ವರಿಂದ ಹಲ್ಲೆ, ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ನಡೆದಿದ್ದೇನು..?

245

ನ್ಯೂಸ್ ನಾಟೌಟ್: ಹಿಂದೂ ಯುವಕನೊಬ್ಬ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ನಾಲ್ವರು ಅಪರಿಚಿತರು ಬಂದು ಸ್ಕೂಟಿ ಅಡ್ಡಗಟ್ಟಿ ಹಲ್ಲೆ ನಡೆಸಿರುವ ದುರ್ಘಟನೆ ವರದಿಯಾಗಿದೆ. ಹಲ್ಲೆಗೊಳಗಾದ ವ್ಯಕ್ತಿ ಪುತ್ತೂರಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಟ್ಲ ಸಮೀಪದ ಕನ್ಯಾನದ ಒಡಿಯೂರು ಐಟಿಐ ಕಾಲೇಜು ಬಳಿ ಈ ಘಟನೆ ನಡೆದಿದೆ.

ಪ್ರಕಾಶ್ ತಮ್ಮ ಸ್ಕೂಟಿಯಲ್ಲಿ ತೆರಳುತ್ತಿದ್ದಾಗ ಕೇರಳ ನೋಂದಾಯಿತ ರಿಜಿಸ್ಟರ್ ನಂಬರ್ ನ ಕಾರೊಂದು ಇವರ ಎದುರಿಗೆ ಬಂದಿದೆ. ನಂತರ ಅದರಲ್ಲಿದ್ದವರು ಇವರ ಸ್ಕೂಟಿಯನ್ನು ಓವರ್ ಟೇಕ್ ಮಾಡಿಕೊಂಡು ಗುರಾಯಿಸಿ ನೋಡಿಕೊಂಡು ಮುಂದಕ್ಕೆ ಹೋಗಿದ್ದಾರೆ. ಸ್ವಲ್ಪ ಮುಂದಕ್ಕೆ ಹೋದ ಬಳಿಕ ಕಾರನ್ನು ಅಡ್ಡ ಇಟ್ಟು ಕೆಳಕ್ಕಿಳಿದು ಬಂದು ಪ್ರಕಾಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಬಳಿಕ ಜಾತಿ ನಿಂದನೆ ಮಾಡಿ ಬೆದರಿಕೆ ಹಾಕಿದ್ದಾರೆಂದು ತಿಳಿದು ಬಂದಿದೆ.

See also  ದರ್ಶನ್ ಗ್ಯಾಂಗ್ ನ​ ಜಾಮೀನು ಅರ್ಜಿ ವಿಚಾರಣೆ ಡಿಸೆಂಬರ್​ 6 ಕ್ಕೆ ಮುಂದೂಡಿಕೆ..! ಪವಿತ್ರಾ ಗೌಡ ಪರ ವಕೀಲರ ವಾದವೇನು..?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget