ಕರಾವಳಿವಿಡಿಯೋವೈರಲ್ ನ್ಯೂಸ್

ಪುತ್ತೂರು: ಅದ್ಧೂರಿಯಾಗಿ ಹಿಂದೂ ಗೆಳೆಯನ ‘ಬರ್ತ್ ಡೇ’ ಆಚರಿಸಿದ ಮುಸ್ಲಿಂ ಯುವಕರು, ದಕ್ಷಿಣ ಕನ್ನಡದ ಕೋಮು ಸೌಹಾರ್ದತೆಗೆ ಎಲ್ಲೆಡೆ ಮೆಚ್ಚುಗೆ, ಇಲ್ಲಿದೆ ವೈರಲ್ ವಿಡಿಯೋ

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆ ತನ್ನ ಕೋಮು ಗಲಬೆಗಳಿಗೆ ಮಾತ್ರವಲ್ಲದೆ ಕೋಮು ಸೌಹಾರ್ದತೆಗೂ ಸಾಕ್ಷಿಯಾಗುತ್ತವೆ. ಆದರೆ, ಸುದ್ದಿಯಾಗುವುದು ಮಾತ್ರ ಕೋಮು ಸಂಘರ್ಷಣೆ ಬಗ್ಗೆ, ಆದರೆ, ಸಾರ್ವಜನಿಕರು ಮೆಚ್ಚುವ ಕೋಮು ಸೌಹಾರ್ದತೆಯ ಘಟನೆಯೊಂದು ದಕ್ಷಿಣ ಕನ್ನಡದಲ್ಲಿ ವರದಿಯಾಗಿದೆ.

ಶಾಂತಿ ಸೌಹಾರ್ದತೆಗೆ ಸಾಕ್ಷಿಯಾದ ಗೆಳೆಯನ ಹುಟ್ಟು ಹಬ್ಬ ಈಗ ಎಲ್ಲೆಡೆ ಸುದ್ದಿಯಾಗುತ್ತಿದೆ, ಹಿಂದೂ ಗೆಳೆಯನ ಹುಟ್ಟು ಹಬ್ಬವನ್ನ ಅದ್ದೂರಿಯಾಗಿ ಆಚರಿಸಿದ ಮುಸ್ಲಿಂ ಯುವಕರು ಮಾದರಿಯಾಗಿದ್ದು, ಪುತ್ತೂರಿನ ಪುಣಚದಲ್ಲಿ ಈ ಘಟನೆ ನಡೆದಿದೆ.

ದ.ಕ. ಜಿಲ್ಲೆಯ ಪುತ್ತೂರಿನ ಪುಣಚದಲ್ಲಿ ಸೌಹಾರ್ದತೆಯ ಹುಟ್ಟುಹಬ್ಬ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಈ ಬರ್ತ್ ಡೇ ವೀಡಿಯೋ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.

ಪುಣಚದ ದಿವಾಕರ ಎಂಬವರ ಹುಟ್ಟು ಹಬ್ಬವನ್ನ ಆಚರಿಸಿದ ‘ಪಿರ್ಸತೆ ಚಂಹಿಮಾರ್’ ಮುಸ್ಲಿಂ ಗ್ರೂಪ್ ಕರಾವಳಿಯ ಕೋಮುವಾದದ ಕಿಚ್ಚಿನ ನಡುವೆ ಪುತ್ತೂರಲ್ಲೊಂದು ಸೌಹಾರ್ದತೆಯ ಪಾಠಮಾಡಿದೆ.

ಶಾಂತಿ ಸೌಹಾರ್ದತೆಗೆ ಹುಟ್ಟು ಹಬ್ಬದ ಮೂಲಕ ಸಂದೇಶ ರವಾನಿಸಿರುವ ಈ ಗೆಳೆಯರು ಕರಾವಳಿಯಲ್ಲಿ ಹಿಂದೂ-ಮುಸ್ಲಿಂ ಯುವಕರ ಸೌಹಾರ್ದತೆಗೆ ಸಾಕ್ಷಿಯಾಗಿದ್ದಾರೆ.
ಹಿಂದೂ-ಮುಸ್ಲಿಂ ಯುವಕರ ಸೌಹಾರ್ದತೆಗೆ ಕರಾವಳಿಯಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Related posts

ಸಂಗಾತಿ ಜತೆ ಸ್ನಾನ ಮಾಡಿ ನೀರು ಉಳಿಸಿ ಎಂದು ಕರೆ ನೀಡಿದ ಮೇಯರ್‌..! ಏನಿದು ಘಟನೆ..?

ಸುಳ್ಯ: ಪತ್ನಿಯನ್ನು ಕೊಂದು ಗೋಣಿ ಚೀಲದಲ್ಲಿಟ್ಟವ ಪಶ್ಚಿಮ ಬಂಗಾಳದಲ್ಲಿ ಸೆರೆ?

ಆ್ಯಂಬುಲೆನ್ಸ್ ನೊಳಗೆ ಮಹಿಳೆಗೆ ಲೈಂಗಿಕ ಕಿರುಕುಳ..! ವಿರೋಧಿಸಿದ್ದಕ್ಕೆ ಪತಿಯ ಜೊತೆಗೆ ಆಕೆಯನ್ನು ವಾಹನದಿಂದ ಹೊರ ತಳ್ಳಿದ ಸಿಬ್ಬಂದಿ..!