ಕರಾವಳಿಪುತ್ತೂರು

ಪುತ್ತೂರು:ಮಹಿಳೆಯರಿಬ್ಬರ ಮೇಲೆ ಅಪರಿಚಿತ ವ್ಯಕ್ತಿಯಿಂದ ಮಾರಣಾಂತಿಕ ಹಲ್ಲೆ,ಆಸ್ಪತ್ರೆಯಲ್ಲಿ ಚಿಕಿತ್ಸೆ:ಗುಡ್ಡೆಯಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಏಕಾಏಕಿ ದಾಳಿ ನಡೆಸಿದ್ದೇಕೆ?

218

ನ್ಯೂಸ್ ನಾಟೌಟ್ :  ಮಹಿಳೆಯರಿಬ್ಬರ ಮೇಲೆ ಅಪರಿಚಿತ ವ್ಯಕ್ತಿಯೋರ್ವ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಪುತ್ತೂರಿನ ಬಡಗನ್ನೂರು ಎಂಬಲ್ಲಿಂದ ವರದಿಯಾಗಿದೆ.ಗಿರಿಜಾ ಮತ್ತು ಸುಲೇಖ ಹಲ್ಲೆಗೊಳಗಾದ ಮಹಿಳೆಯರೆಂದು ತಿಳಿದು ಬಂದಿದೆ.

ಬಡಗನ್ನೂರು ಸಮೀಪದ ಗುಡ್ಡೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮಹಿಳೆಯರಿಬ್ಬರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬರು ಬಂದು ಏಕಾಏಕಿ ದಾಳಿ ನಡೆಸಿದ್ದಾರೆ. ಈ ವೇಳೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಇಬ್ಬರೂ ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ.ಅಪರಿಚಿತ ವ್ಯಕ್ತಿ ಕೂಡಲೇ ಅಲ್ಲಿಂದ ಕಾಲ್ಕಿತ್ತಿದ್ದಾನೆ.ಮಹಿಳೆಯರು ಗುಡ್ಡದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡ ಸ್ಥಳೀಯರು ಸುಲೇಖ ಎಂಬುವವರ ಮಗನಿಗೆ ಮಾಹಿತಿ ನೀಡಿದ್ದಾರೆ.

ಈ ಸಂದರ್ಭ ಈಶ್ವರಮಂಗಲದ ಹಿಂದೂ ಜಾಗರಣ ವೇದಿಕೆ ಆಂಬ್ಯುಲೆನ್ಸ್ ಮೂಲಕ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆತರಲಾಗಿದ್ದು, ಇಬ್ಬರಿಗೂ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.

ಗೋಳಿತ್ತೊಟ್ಟು ಮೂಲದ ಗಿರಿಜಾ ಎಂಬುವವರು ಬಡಗನ್ನೂರು ನಿವಾಸಿ ಸುಲೇಖ ರವರ ಮನೆಯಲ್ಲಿದ್ದುಕೊಂಡು ಕೂಲಿ ಕೆಲಸಕ್ಕೆ ತೆರಳುತ್ತಿದ್ದರೆನ್ನಲಾಗಿದೆ. ವಾರಕ್ಕೊಂದು ಬಾರಿ ಗೋಳಿತ್ತೊಟ್ಟುವಿನಲ್ಲಿರುವ ತಮ್ಮ ಮನೆಗೆ ಹೋಗಿ ಬರುತ್ತಿದ್ದರು ಎಂದು ತಿಳಿದು ಬಂದಿದೆ. ಸುಲೇಖ ಎಂಬುವವರು ಮಗನ ಜೊತೆ ವಾಸವಿದ್ದು, ಆತ ಗುಡ್ಡೆಯಲ್ಲಿ ಬಿದ್ದಿದ್ದ ತಾಯಿ ಹಾಗೂ ಮತ್ತೋರ್ವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾಗಿ ತಿಳಿದು ಬಂದಿದೆ.ಈ ಘಟನೆ ಯಾಕಾಯ್ತು ಎಂಬ ಕಾರಣಕ್ಕೆ ಉತ್ತರ ತನಿಖೆ ನಂತರವಷ್ಟೇ ತಿಳಿದು ಬರಬೇಕಿದೆ.

See also  ಕರಾವಳಿಯಲ್ಲಿ ತಪ್ಪಿದ ಭಾರಿ ರೈಲು ದುರಂತ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget