ಕರಾವಳಿಕ್ರೈಂಪುತ್ತೂರುವೈರಲ್ ನ್ಯೂಸ್

ಪುತ್ತೂರು : ಕಾಲೇಜು ವಿದ್ಯಾರ್ಥಿನಿ ನೇಣಿಗೆ ಶರಣು..! ಆತ್ಮಹತ್ಯೆಗೆ ಕಾರಣವೇನು..?

ನ್ಯೂಸ್ ನಾಟೌಟ್ : ಕಾಲೇಜು ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರಿನ ಈಶ್ವರಮಂಗಲ ಸಮೀಪದ ಸುಳ್ಯಪದವಿನ ಕನ್ನಡ್ಕ ಎಂಬಲ್ಲಿ ನಡೆದ ಬಗ್ಗೆ ಸೋಮವಾರ(ಜ.8) ಬೆಳಕಿಗೆ ಬಂದಿದೆ.

ಕನ್ನಡ್ಕ ನಿವಾಸಿ, ಪುತ್ತೂರಿನ ಪ್ರತಿಷ್ಠಿತ ಖಾಸಗಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ದೀಕ್ಷಾ (16ವ) ಮೃತ ಯುವತಿ ಎಂದು ವರದಿ ತಿಳಿಸಿದೆ.

ದೀಕ್ಷಾ ಮನೆಯ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ದೀಕ್ಷಾ ವಾಣಿಜ್ಯ ವಿಭಾಗದಲ್ಲಿ ಕಲಿಯುತ್ತಿದ್ದು, ನಾಳೆ ಆಕೆಗೆ ಲ್ಯಾಬ್ ಪರೀಕ್ಷೆಯಿತ್ತು ಎಂದು ಮಾಹಿತಿ ತಿಳಿದಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

https://newsnotout.com/2024/01/rama-mandira-news-live/

Related posts

ಬಿಜೆಪಿಗೆ ಪರ್ಯಾಯವಾಗಿ ಹಿಂದೂಗಳ ಪ್ರತ್ಯೇಕ ಪಕ್ಷ ಬೇಕಾ? ಬೇಡ್ವಾ?

ವಿಧಾನಸೌಧದಲ್ಲೇ ಶಾಸಕರಿಗೆ ಮಧ್ಯಾಹ್ನದ ಬಿಸಿಯೂಟ ಫ್ರೀ..! ಸ್ಪೀಕರ್ ಯು.ಟಿ ಖಾದರ್ ಈ ನಿರ್ಧಾರಕ್ಕೆ ಕಾರಣವೇನು..?

ನಾಳೆಯಿಂದ ಎಂದಿನಂತೆ ಅಂಗನವಾಡಿ, ಶಾಲೆ, ಕಾಲೇಜು