ಕ್ರೈಂದಕ್ಷಿಣ ಕನ್ನಡದೇಶ-ಪ್ರಪಂಚದೇಶ-ವಿದೇಶಪುತ್ತೂರು

ಪುತ್ತೂರಿನ ಯುವಕ ಆವಿಷ್ಕರಿಸಿದ ಡ್ರೋನ್‌ ಸೇನೆ ಆಯ್ಕೆ..! ಮೆಷಿನ್‌ ಗನ್‌ ಸಹಿತ ಆಗಸದಲ್ಲಿ ಹಾರಾಟ ಮಾಡುವ ಸಾಮರ್ಥ್ಯ..!

ನ್ಯೂಸ್ ನಾಟೌಟ್: ಒಬ್ಬ ವ್ಯಕ್ತಿ ಸಾಗಾಟ ಮಾಡುವಂತಹ ಮತ್ತು ಮೆಷಿನ್‌ ಗನ್‌ ಸಹಿತ ಆಗಸದಲ್ಲಿ ಹಾರಾಟ ಮಾಡುವ ಸಾಮರ್ಥ್ಯ ಹೊಂದಿರುವ ಡ್ರೋನ್‌ ಅನ್ನು ಪುತ್ತೂರಿನ ಯುವಕ ಆವಿಷ್ಕರಿಸಿ ಭಾರತೀಯ ಸೇನೆಗೆ ನೀಡಿದ್ದಾರೆ.

ಪುತ್ತೂರು ತಾಲೂಕಿನ ತಿಂಗಳಾಡಿ ಕಜೆಮಾರು ನಿವಾಸಿ ಕೊನಾರ್ಕ್‌ ರೈ ಈ ಸಾಧಕ ಎಂದು ಗುರುತಿಸಲಾಗಿದೆ.. ಸೈನಿಕರ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸುವ ಗುರಿಯೊಂದಿಗೆ ಅಭಿವೃದ್ಧಿಪಡಿಸಲಾಗಿರುವ ಈ ಶಸ್ತ್ರಸಜ್ಜಿತ ಡ್ರೋನ್‌ ಭಯೋತ್ಪಾದನೆ ಮತ್ತು ನಕ್ಸಲ್‌ ನಿಗ್ರಹ ಕಾರ್ಯಾಚರಣೆಗಳನ್ನು ಸಮರ್ಥವಾಗಿ ಎದುರಿಸಲು ಪೂರಕವಾಗಿರುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ವರದಿ ತಿಳಿಸಿದೆ.

. “ಮೇಕ್‌ ಇನ್‌ ಇಂಡಿಯಾ’ ಉಪಕ್ರಮವನ್ನು ಗಮನದಲ್ಲಿಟುಕೊಂಡು ಅಭಿವೃದ್ಧಿಪಡಿಸಲಾಗಿದೆ. ಪ್ರಸ್ತುತ ಡ್ರೋನ್‌ ಮೂಲಕ ಶಸ್ತ್ರ ಸಾಗಾಟ ನಡೆಸಲಾಗುತ್ತದೆ. ಡ್ರೋನ್‌ ಅತ್ಯಧಿಕ ಸಾಮರ್ಥ್ಯದ 9 ಎಂಎಂ “ಅಸ್ಮಿ’ ಮೆಷಿನ್‌ ಗನ್‌ ಅಳವಡಿಸಬಹುದಾಗಿದ್ದು, ಇದು ನಿಖರ ಗುರಿಯೊಂದಿಗೆ ಸ್ಥಿರತೆಯನ್ನು ಕಾಯ್ದುಕೊಳ್ಳುವಂತಹ ವಿಶೇಷತೆಯನ್ನು ಹೊಂದಿದೆ.

2025ರ ಜ. 26 ಮತ್ತು 27ರಂದು ನಡೆದ ಪರೀಕ್ಷಾರ್ಥ ಪ್ರದರ್ಶನದಲ್ಲಿ ಡ್ರೋನ್‌ 45ರಿಂದ 60 ನಿಮಿಷಗಳ ಕಾಲ 15ರಿಂದ 30 ಕಿ.ಮೀ. ದೂರದವರೆಗೆ ಹಾರಾಟ ನಡೆಸಿತು. ಕಾಶ್ಮೀರದಲ್ಲಿ ನಡೆಯಲಿರುವ ರಾಷ್ಟ್ರೀಯ ರೈಫಲ್ಸ್‌ ವಿಭಾಗದ ಜತೆ ಇದರ ಪ್ರದರ್ಶನ-ಪರೀಕ್ಷೆ ನಡೆಯಲಿದೆ ಎನ್ನಲಾಗಿದೆ.

Click

ಕುಟುಂಬ ಸಮೇತರಾಗಿ ಮಹಾ ಕುಂಭಮೇಳಕ್ಕೆ ತೆರಳಿದ ಡಿಕೆಶಿ, ಮುಂಜಾನೆ ಪ್ರಯಾಗ್‌ ರಾಜ್‌ ಕಡೆ ಪ್ರಯಾಣ

Related posts

ಪುತ್ತೂರು: ವಿಶ್ವ ಹಿಂದೂ ಪರಿಷತ್ ಮತ್ತು ಪುತ್ತಿಲ ಪರಿವಾರದ ನಡುವೆ ಜಟಾಪಟಿ..! ಕಟ್ಟಡ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಗಮಿಸಿದ ಅರುಣ್ ಕುಮಾರ್ ಪುತ್ತಿಲರನ್ನು ತಡೆದ ಹಿಂದೂ ಕಾರ್ಯಕರ್ತರು..! ಮುಂದೇನಾಯ್ತು..?

ಕಣ್ಣೆದುರಿಗೆ ಸಿಂಹವಿದ್ದರೂ ಈ ವ್ಯಕ್ತಿಗೆ ಡೋಂಟ್ ಕೇರ್,ಸಿಂಹವನ್ನೇ ಬೆದರಿಸಿ ಓಡಿಸಿದ ವಿಡಿಯೋ ವೈರಲ್

ಉಪ್ಪಿನಂಗಡಿ: ನಡು ರಸ್ತೆಯಲ್ಲೇ ಎರಡು ಕಾರು ಪಾರ್ಕ್ ಮಾಡಿ ಸಂತೆಗೆ ಹೋದ ಅಣ್ತಮ್ಮ..!, ಅರ್ಧಗಂಟೆ ಕಾದು..ಕಾದು ಎರಡು KSRTC ಸಿಟಿ ಬಸ್ ನಲ್ಲಿದ್ದ ಜನ ಸುಸ್ತೋ…ಸುಸ್ತು..!