ಕರಾವಳಿಕ್ರೈಂಪುತ್ತೂರುರಾಜಕೀಯ

ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕರ ವಿಡಿಯೋ ಪ್ರಸಾರ; ಕಾಂಗ್ರೆಸ್‌ ಅಭ್ಯರ್ಥಿಯಿಂದ ದೂರು

291

ನ್ಯೂಸ್ ನಾಟೌಟ್ ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ಸಂದರ್ಶನದ ಮೂಲಕ ಮಾನಹಾನಿಕರ ವಿಡಿಯೋ ಪ್ರಸಾರ ಮಾಡಿ ಬೆದರಿಕೆ ಹಾಕಿರುವ ಬಗ್ಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್ ಕುಮಾರ್ ರೈ ಮಂಗಳೂರು ಪೂರ್ವ ಠಾಣೆಗೆ ದೂರು ನೀಡಿದ್ದಾರೆ.

ಆರೋಪಿಗಳಾದ ಶಿವಶಂಕರ ಶೆಟ್ಟಿ ಮತ್ತು ವಿಜೆ ಅಜಯ್ ಅಂಚನ್ ಮಾನಹಾನಿಕಾರಕ ವರದಿ ಬಿತ್ತರಿಸುವುದಾಗಿ ಬೆದರಿಕೆ ಹಾಕಿ 25 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ಹಣ ನೀಡದ ಕಾರಣ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕಾರಕ ವಿಡಿಯೋ ಪ್ರಸಾರ ಮಾಡಿದ್ದಾರೆ. ಅಲ್ಲದೇ ಈಡೇರಿಸದಿದ್ದರೆ ಮತ್ತಷ್ಟು ವಿಡಿಯೋಗಳನ್ನು ಪ್ರಸಾರ ಮಾಡುವ ಬೆದರಿಕೆ ಹಾಕಿದ್ದಾರೆ.

ಏಪ್ರಿಲ್ 28ರಂದು ವಿಜೆ ಅಜಯ ಅಂಚನ್ ಮಾಲಕತ್ವದ ಯೂಟ್ಯೂಬ್ ಚಾನೆಲ್‌ನಲ್ಲಿ ಒಂದು ವಿಡಿಯೋ ಹಾಕಿದ್ದು, ಇದರಲ್ಲಿ ಅಜಯ ಅಂಚನ್ ಮತ್ತು ಶಿವಶಂಕರ್ ಶೆಟ್ಟಿ ಅವರನ್ನು ಸಂದರ್ಶಿಸುವ ರೀತಿಯಲ್ಲಿ ತೋರಿಸಲಾಗಿದೆ. ಅದರಲ್ಲಿ ಅಶೋಕ್ ರೈ ಜನರಿಗೆ ಮೋಸ ಮಾಡಿದ್ದಾರೆ ಎಂಬುದಾಗಿ ಸುಳ್ಳು ಹೇಳಿಕೆ ನೀಡಲಾಗಿದೆ ಎಂದು ಪ್ರಕರಣ ದಾಖಲಾಗಿದೆ.

See also  ಕಾಂಗ್ರೆಸ್ ಶಾಸಕರು, ಸಂಸದರ ಮೇಲಿನ ಇ.ಡಿ ದಾಳಿ ಕಾನೂನುಬಾಹಿರ ಎಂದ ಪೊನ್ನಣ್ಣ ..! ಸಿಎಂ ಕಾನೂನು ಸಲಹೆಗಾರರಿಂದ ಸಾಲು-ಸಾಲು ಪ್ರಶ್ನೆ..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget