ಕರಾವಳಿಕ್ರೈಂ

ಪುತ್ತೂರು: ಯುವತಿಯ ಕೊಲೆಗೂ ಮುನ್ನ ಅಂಗಡಿಯಲ್ಲಿ ಜಗಳವಾಡಿ ಮೊಬೈಲ್‌ ಕಿತ್ತುಕೊಂಡಿದ್ದ ಆರೋಪಿ ಪದ್ಮರಾಜ್‌, ಅಂಗಡಿಯ ಸಿಸಿ ಕ್ಯಾಮರಾದಲ್ಲಿ ಜಗಳದ ದೃಶ್ಯ ಸೆರೆ

321

ನ್ಯೂಸ್‌ ನಾಟೌಟ್‌: ಪುತ್ತೂರಿನಲ್ಲಿ ಗುರುವಾರ ಹಾಡಹಗಲೇ ಯುವಕನೋರ್ವ ಯುವತಿಯ ಕತ್ತು ಸೀಳಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದ ಅಂಗಡಿಯ ಸಿಸಿ ಕ್ಯಾಮರಾ ದೃಶ್ಯ ಪತ್ತೆಯಾಗಿದೆ.

ಯುವತಿಯ ಕತ್ತು ಸೀಳಿ ಕೊಲೆಗೈಯುವ ಮೊದಲು ಸಾವಿಗೀಡಾದ ಗೌರಿ ಕೆಲಸ ಮಾಡುತ್ತಿದ್ದ ಫ್ಯಾನ್ಸಿ ಅಂಗಡಿಯಲ್ಲಿ ಆರೋಪಿ ಪದ್ಮರಾಜ್ ಜಗಳ ಮಾಡಿ ಆಕೆಯನ್ನು ಹಿಡಿದು ಎಳೆಯುತ್ತಿರುವ ದೃಶ್ಯ ಸೆರೆಯಾಗಿದೆ. ಬಳಿಕ ಗೌರಿಯ ಮೊಬೈಲ್ ಕಸಿದುಕೊಂಡು ಪದ್ಮರಾಜ್‌ ಹೊರ ನಡೆಯುತ್ತಾನೆ.

ಬಳಿಕ ಮೊಬೈಲ್ ಕೊಡುವಂತೆ ಆರೋಪಿ ಪದ್ಮರಾಜ್‌ಗೆ ಗೌರಿ ಕರೆ ಮಾಡಿದಾಗ ಮಾಡಿದಾಗ ಆತ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಕೆರೆ ಬಳಿ ಬರುವಂತೆ ಕರೆದಿದ್ದಾನೆ ಎಂದು ತಿಳಿದುಬಂದಿದೆ.

ಆದರೆ ಆರೋಪಿ ಪದ್ಮರಾಜ್‌ ಮಾಣಿ ಕಡೆಗೆ ತೆರಳಿದ್ದವ ವಾಪಾಸು ಬೈಕ್‌ನಲ್ಲಿ ಪುತ್ತೂರಿಗೆ ಬಂದು ದೇವಸ್ಥಾನದ ಕೆರೆ ಸಮೀಪದಲ್ಲಿ ಯುವತಿ ಗೌರಿ ಜತೆ ಮತ್ತೆ ಜಗಳ ಮಾಡಿದ್ದಾನೆ. ಈ ವೇಳೆ ತನ್ನ ಬಳಿ ಇದ್ದ ಚೂರಿಯಿಂದ ಗೌರಿಯ ಕತ್ತು ಸೀಳಿ ಪರಾರಿಯಾಗಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಗೌರಿ ಮಂಗಳೂರು ಆಸ್ಪತ್ರೆಗೆ ಸಾಗಿಸುವ ವೇಳೆ ಸಾವಿಗೀಡಾಗಿದ್ದಾಳೆ.

See also  ಮದ್ಯ ಸೇವಿಸಿ ಕೊಳವೊಂದಕ್ಕೆ ಸ್ನಾನಕ್ಕಿಳಿದ ವ್ಯಕ್ತಿ ದುರಂತ ಅಂತ್ಯ,ಏನಿದು ಘಟನೆ?
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget