ನ್ಯೂಸ್ ನಾಟೌಟ್:ನಿಯಂತ್ರಣ ಕಳೆದುಕೊಂಡ ಕಾರು ಡಿವೈಡರ್ ಗೆ ಢಿಕ್ಕಿ ಹೊಡೆದು ಪಲ್ಟಿಯಾಗಿದ್ದು,ಕಾರಿನಲ್ಲಿದ್ದವರಿಗೆ ಗಂಭೀರ ಸ್ವರೂಪದ ಗಾಯಗಳಾಗಿರುವ ಘಟನೆ ಪುತ್ತೂರಿನ ಬೈಪಾಸ್ ತೆಂಕಿಲ ವಿವೇಕಾನಂದ ಶಾಲೆಯ ಬಳಿ ಗುರುವಾರ(ಡಿ.12) ನಡೆದಿದೆ.
ಉಡುಪಿ ನೋಂದಣಿಯ ಬ್ರೀಝಾ ಕಾರು ಅಪಘಾತಕ್ಕೊಳಗಾಗಿದ್ದು, ಕಾರಿನಲ್ಲಿದ್ದವರು ಉಡುಪಿ ಮೂಲದವರೆಂದು ತಿಳಿದು ಬಂದಿದೆ. ಗಾಯಗೊಂಡವರನ್ನು ಸ್ಥಳೀಯರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ವರದಿ ತಿಳಿಸಿದೆ.