ಕರಾವಳಿಪುತ್ತೂರುರಾಜಕೀಯ

ಪುತ್ತೂರಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಅಣಿಯಾಗುತ್ತಿರುವ ಬಿಜೆಪಿ! ಆಶಾ ತಿಮ್ಮಪ್ಪ ಪರ ಭರ್ಜರಿ ಪ್ರಚಾರ ಸಭೆ

345

ನ್ಯೂಸ್ ನಾಟೌಟ್: ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರವಾಗಿ ಕೇಪುವಿನ ಬಿಜೆಪಿ ಶಕ್ತಿ ಕೇಂದ್ರದಲ್ಲಿ ಶುಕ್ರವಾರ ಪ್ರಚಾರ ಸಭೆ ನಡೆಯಿತು.

ಸಭೆಯ ಬಳಿಕ ಮಾತಾಡಿದ ಆಶಾ ತಿಮ್ಮಪ್ಪ ಹಿಂದುತ್ವ ಹಾಗೂ ಅಭಿವೃದ್ದಿಯ ನೆಲೆಯಲ್ಲಿ ಕೆಲಸ ಮಾಡುತ್ತಿರುವ ಪಕ್ಷ ಬಿಜೆಪಿಯಾಗಿದೆ. ಹಿಂದುತ್ವದ ಪರವಾಗಿ ಸಾಕಷ್ಟು ಯೋಜನೆಗಳನ್ನು ತಂದಿರುವ ಬಿಜೆಪಿ ಸರ್ಕಾರ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಸಾವಿರ ಕೋಟಿಗೂ ಅಧಿಕ ಅನುದಾನವನ್ನು ನೀಡಿದೆ. ಈ ಕಾರಣದಿಂದ ಬಿಜೆಪಿ ಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂದು ತಿಳಿಸಿದರು.

ಅಭ್ಯರ್ಥಿ ಆಶಾ ತಿಮ್ಮಪ್ಪ ಮತ್ತು ರಾಷ್ಟ್ರೀಯ ಮಹಿಳಾ ಮೋರ್ಚಾ ಕಾರ್ಯಕಾರಿಣಿ ಸದ ಸ್ಯೆ ಬಿಂದು ಸುರೇಶ ನೇತೃತ್ವದಲ್ಲಿ ಕಾಂಗ್ರೆಸ್ ಕೇಪು ವಲಯ ಕಾರ್ಯದರ್ಶಿ ಧನಂಜಯ ಮತ್ತು ಕಾಂಗ್ರೆಸ್ ಕಾರ್ಯಕರ್ತರಾದ ರವಿ ಕೊರತಿಗದ್ದೆ, ನಿತಿನ್ ನವೀನ್, ಲೋಕೇಶ್, ಸೃಜನ್, ನಿಖಿಲ್ ಮೊದಲಾದವ್ರು ಬಿಜೆಪಿ ಸೇರ್ಪಡೆಗೊಂಡರು.

ಪುತ್ತೂರು ಬಿಜೆಪಿ ಉಪಾಧ್ಯಕ್ಷಹರಿಪ್ರಸಾದ್ ಯಾದವ್, ಕೇಪು ಶಕ್ತಿ ಕೇಂದ್ರದ ಸಂಚಾಲಕರಾಧಾ ಕೃಷ್ಣ ಶೆಟ್ಟಿ ಕೇಪು ಗ್ರಾಮ ಪಂಚಾಯತ್ ಉಪ ಅಧ್ಯಕ್ಷ ರಾಘವ ಸಾರಡ್ಕ, ಸದಸ್ಯರಾದ ಪುರುಷೋತ್ತಮ ಕಲ್ಲಂಗಳ, ಪಕ್ಷದ ಪ್ರಮುಖರಾದ ತಾರಾನಾಥ ಆಳ್ವ ಬೂತ್ ಅಧ್ಯಕ್ಷ ಅಶೋಕ್ ಮತ್ತೆ ಉಮೇಶ್ ಗೌಡ, ಶ್ರೀಕೃಷ್ಣ ಮಣಿ ಯಾನಿ, ಚಂದ್ರಶೇಖರ್ ಉಪಸ್ಥಿತರಿದ್ದರು.

See also  ಸುಳ್ಯ: ಕೊಡಗಿನ ನೆಲ್ಯಹುದಿಕೇರಿಯಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ..!ಕೆವಿಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget