ಕ್ರೈಂಪುತ್ತೂರು

ಪುತ್ತೂರು: ಸೋಲಿನ ಭಯದಿಂದ ಬಿಜೆಪಿಯಿಂದ ಐಟಿ ದಾಳಿ : ಕಾಂಗ್ರೆಸ್ ಅಭ್ಯರ್ಥಿ ಅಶೋಕ್‌ ಕುಮಾರ್‌ ರೈ

309

ನ್ಯೂಸ್ ನಾಟೌಟ್: ನಾನು ತೆರಿಗೆ ಪಾವತಿದಾರ. ವರ್ಷಕ್ಕೆ ಕೋಟ್ಯಂತರ ರೂ. ತೆರಿಗೆ ಪಾವತಿಸುತ್ತೇನೆ. ಬಿಜೆಪಿ ಮುಖಂಡರು ಸೋಲಿನ ಹತಾಶೆಯಿಂದ ಬೆಂಗಳೂರಿನ ನನ್ನ ಮನೆ ಮೇಲೆ ಐಟಿ ದಾಳಿಸಿ ಮಾಡಿಸಿದ್ದಾರೆ. ಆದರೆ ಅವರಿಗೆ ಅಲ್ಲಿ ಏನು ಸಿಕ್ಕಿಲ್ಲ. ಬರಿಗೈಯಲ್ಲಿ ವಾಪಸಾಗಿದ್ದಾರೆ ಎಂದು ಪುತ್ತೂರು ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್‌ ಕುಮಾರ್‌ ರೈ ಹೇಳಿದ್ದಾರೆ.

ಪುತ್ತೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪುತ್ತೂರಿನಲ್ಲಿ ಬಿಜೆಪಿ ಅಭ್ಯರ್ಥಿ ಸೋಲುವುದು ಆ ಪಕ್ಷದ ಮುಖಂಡರಿಗೆ ಖಚಿತವಾಗಿದೆ. ಈ ಕಾರಣ ಹತಾಶೆಯಿಂದ ಮೈಸೂರಿನಲ್ಲಿರುವ ನನ್ನ ಸಹೋದರನ ಮನೆ ಮೇಲೆ ಐಟಿ ದಾಳಿ ನಡೆಸಿದ್ದಾರೆ ಎಂದರು.. ನನ್ನ ಸಹೋದರನ ವ್ಯವಹಾರವೇ ಬೇರೆ ಅದೇರೀತಿ ನನ್ನ ಉದ್ಯಮ, ರಾಜಕೀಯ ಕ್ಷೇತ್ರವೇ ಬೇರೆ. ಆತ ತೆರಿಗೆ ಪಾವತಿದಾರ ನನಗೂ ಅವರಿಗೂ ವ್ಯವಹಾರಿಕ ಸಂಬಂಧಗಳಿಲ್ಲ. ನನಗೆ ದೊರೆತಿರುವ ಅಭೂತಪೂರ್ವ ಜನಬೆಂಬಲ ನೋಡಿ ಕಂಗಾಲಾಗಿ ಈ ಐಟಿ ದಾಳಿ ರಾಜಕೀಯ ಆರಂಭಿಸಿದ್ದಾರೆ ಎಂದು ಅಶೋಕ್‌ ಕುಮಾರ್‌ ರೈ ತಿಳಿಸಿದ್ದಾರೆ.

ಡಿ.ವಿ ಸದಾನಂದ ಗೌಡ ನಾನು ಮಿತ್ರನಲ್ಲ ಶತ್ರು ಎಂದಿದ್ದಾರೆ. ಡಿ.ವಿ ಸದಾನಂದ ಗೌಡ ನನಗೆ ಯಾವತ್ತೂ ಶತ್ರು ಅಲ್ಲ. ಆಪ್ತ ಮಿತ್ರರು. ನನಗೆ ಯಾರೂ ಶತ್ರುಗಳಿಲ್ಲ. ಎಲ್ಲರೂ ಮಿತ್ರರೇ ಎಂದರು.

See also  ಇಡ್ಲಿ ತಿನ್ನೋ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಾಣ ಕಳೆದುಕೊಂಡ ವ್ಯಕ್ತಿ..! ಇಡ್ಲಿ ಗಂಟಲಲ್ಲಿ ಸಿಲುಕಿ ಉಸಿರುಗಟ್ಟಿ ಸಾವು..!
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget