ಕರಾವಳಿರಾಜಕೀಯ

ಪುತ್ತೂರು ಬ್ಯಾನರ್ ಪ್ರಕರಣ: ಬ್ಯಾನರ್ ಹಾಕಿದವರ ವಿರುದ್ಧ ನಾವು ದೂರು ಕೊಟ್ಟಿಲ್ಲ,ಪೊಲೀಸರ ಮೇಲೆ ಒತ್ತಡ ಹಾಕಿಲ್ಲ –ಕಟೀಲ್

ನ್ಯೂಸ್ ನಾಟೌಟ್: ಪುತ್ತೂರಿನಲ್ಲಿ ಬಿಜೆಪಿ ಮುಖಂಡರ ವಿರುದ್ಧ ಬ್ಯಾನರ್ ಹಾಗೂ ಚಪ್ಪಲಿ ಹಾರ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿದ್ದಾರೆ.ಕಾರ್ಯಕರ್ತರ ಹಲ್ಲೆಯನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ.

ಬ್ಯಾನರ್ ಹಾಕಿದವರ ವಿರುದ್ಧ ನಾವು ದೂರು ನೀಡಿಲ್ಲ. ನಾವು ಪೊಲೀಸರಿಗೆ ಒತ್ತಡ ಹಾಕಿಲ್ಲ, ಕಾಂಗ್ರೆಸ್ ನವರೇ ಹಾಕಿರಬಹುದು.ರಾಜಕಾರಣದಲ್ಲಿ ಟೀಕೆಗಳನ್ನ ಸ್ವೀಕರಿಸಬೇಕು, ಅದಕ್ಕೆ ಉತ್ತರ ಕೊಡುವ ಕಾರ್ಯಕ್ಕೆ ಹೋಗುವುದಿಲ್ಲ. ಟೀಕೆಗಳು ಒಳ್ಳೆಯ ರೀತಿಯಲ್ಲಿ ಇರಬೇಕು ಮತ್ತು ಒಳ್ಳೆಯ ಟೀಕೆಗಳನ್ನು ಸ್ವೀಕರಿಸ್ತೇನೆ. ನಾವು ಯಾವುದೇ ಟೀಕೆಗಳನ್ನು ಸ್ವಾಗತಿಸ್ತೇವೆ ಎಂದು ಪ್ರತಿಕ್ರಿಯೆ ನೀಡಿದರು.

ನಂತರ ಹಿಂದೂ ಮುಖಂಡ ಅರುಣ್ ಪುತ್ತಿಲ ಅವರ ಬಗ್ಗೆ ಮಾತನಾಡಿದ ನಳೀನ್ ಅವರು ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದಾಗಿದೆ. ಅರುಣ್ ಪುತ್ತಿಲ ಬಗ್ಗೆ ಅಪಾರ ಗೌರವ ಇದೆ. ಪುತ್ತೂರಿನ ಬಗ್ಗೆ ಅವಲೋಕನ ಸಭೆ ನಡೀತಿದ್ದು, ಅಲ್ಲಿ ಎಲ್ಲವನ್ನು ಚರ್ಚಿಸಲಾಗುವುದು. ಸಂಘದ ಮತ್ತು ಪಕ್ಷದ ಒಳಗಿನ ಎಲ್ಲವನ್ನೂ ಸರಿ ಮಾಡ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾಧ್ಯಮದ ಜತೆಗೆ ಮಾತನಾಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

Related posts

ಮಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆ, ಗೂಂಡಾ ಕಾಯ್ದೆಯಡಿ ಹಿಂದೂ ಕಾರ್ಯಕರ್ತನ ಬಂಧನ

ಮಂಗಳೂರಿನಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ, ಅನ್ಯಮತೀಯ ಜೋಡಿಗಳ ಮೇಲೆ ಹಿಂದೂ ಕಾರ್ಯಕರ್ತರ ದಾಳಿ

ಶ್ರೀರಾಮನ ಮೌಲ್ಯಗಳೇ ಜಗತ್ತಿಗೆ ಆದರ್ಶ, ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿಕೆ