ಕರಾವಳಿಪುತ್ತೂರುರಾಜಕೀಯ

ಪುತ್ತೂರು: ಅಶೋಕ್ ರೈ ಬಿರುಸಿನ ಪ್ರಚಾರ, ಕಾಂಗ್ರೆಸ್ ಗೆಲ್ಲುವ ವಿಶ್ವಾಸ

ನ್ಯೂಸ್ ನಾಟೌಟ್ : ಪುತ್ತೂರಿನ ಚುನಾವಣಾ ಕಣ ರಂಗೇರಿದೆ. ಕಾಂಗ್ರೆಸ್‌ನಿಂದ ಪ್ರಬಲ ಸ್ಪರ್ಧಿಯಾಗಿ ಕಣಕ್ಕೆ ಇಳಿದಿರುವ ಅಶೋಕ್ ರೈ ಅವರು ಚುನಾವಣಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.


ಬುಧವಾರ ಪುತ್ತೂರಿನ ಶೇಖಮಲೆ ಅಡಿಕೆ ಗಾರಬಲ್‌ಗೆ ಅಶೋಕ್ ರೈ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು, ಪ್ರತಿ ವರ್ಷ ದೀಪಾವಳಿಯ ದಿನ ಜನರನ್ನು ಕರೆದು ಸೀರೆ ಮತ್ತು ಭೋಜನ ವ್ಯವಸ್ಥೆ ಮಾಡುತ್ತೇನೆ. ಇದು ಕೇವಲ ಪ್ರೀತಿಗಾಗಿ ನಮ್ಮ ನಡುವೆ ಮುಂದೆ ಉಳಿಯುವುದು ಪ್ರೀತಿ ಮಾತ್ರ ಎಂದು ಅಶೋಕ್ ರೈ ತಿಳಿಸಿದ್ದಾರೆ.

ಅಶೋಕ್ ರೈ ಅವರು ಕೌಡಿಚ್ಚಾರ್ ಪಂಚಾಯತ್‌ ವ್ಯಾಪ್ತಿಯಲ್ಲೂ ಬಿರುಸಿನ ಚುನಾವಣಾ ಪ್ರಚಾರವನ್ನು ಮಾಡಿದರು. ಈ ವೇಳೆ ನೂರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಅವರನ್ನು ಪ್ರೀತಿಯಿಂದ ಬರ ಮಾಡಿಕೊಂಡರು.ಈ ವೇಳೆ ಭಾಷಣ ಮಾಡಿದ ಅಶೋಕ್ ರೈ ಅವರು ಈ ಸಲ ಗೆಲುವು ಕಾಂಗ್ರೆಸ್ ನದ್ದೇ ಅನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

Related posts

ಪೊಲೀಸರ ಎದುರಲ್ಲೇ ಕಾಲೇಜು ವಿದ್ಯಾರ್ಥಿಗಳ ನಡುವೆ ಹೊಡೆದಾಟ..! 8 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು

ಕಾರ್ಕಳ: 30 ವಿದ್ಯಾರ್ಥಿನಿಯರ ಲವ್ ಜಿಹಾದ್ ಗೆ ಯತ್ನ

ಅಪಾಯದಲ್ಲಿ ಕೈಪಡ್ಕ ಸೇತುವೆ