ಕರಾವಳಿಕ್ರೈಂಪುತ್ತೂರು

ಪುತ್ತೂರು: ಅಂಗನವಾಡಿಗೆ ನುಗ್ಗಿ ಆಮ್ಲೆಟ್‌ ಮಾಡಿ ತಿಂದ ಕಳ್ಳರು.. ! ಟಾಯ್ಲೆಟ್‌ ಬೇಸಿನ್‌ಗೆ ಮಣ್ಣು ತುಂಬಿಸಿ ಕುಕೃತ್ಯ..!

208

ನ್ಯೂಸ್ ನಾಟೌಟ್: ಪುತ್ತೂರಿನ ಕೆಎಸ್ಸಾರ್ಟಿಸಿ ಬಸ್‌ ನಿಲ್ದಾಣದ ಬಳಿ ಇರುವ ನೆಲ್ಲಿಕಟ್ಟೆ ಅಂಗನವಾಡಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳ್ಳರು ನುಗ್ಗಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಅಂಗನವಾಡಿಯ ಬೀಗ ಒಡೆದು ನುಗ್ಗಿದ ಕಳ್ಳರು ಅಂಗನವಾಡಿಯಲ್ಲಿ ದಾಸ್ತಾನಿರಿಸಿದ್ದ ಸುಮಾರು 25ಕ್ಕೂ ಅಧಿಕ ಮೊಟ್ಟೆಗಳನ್ನು ಆಮ್ಲೆಟ್‌ ಮಾಡಿ ತಿಂದು, ಪಾತ್ರೆಗಳನ್ನು ಬೆಂಕಿಯಲ್ಲಿ ಕರಟಿಸಿದ್ದಾರೆ ಹೋಗಿದ್ದಾರೆ ಎನ್ನಲಾಗಿದೆ. ಬಿಸಿಯೂಟದ ಪಾತ್ರೆಗಳನ್ನು ಕಳವು ಮಾಡಿದ್ದಾರೆ. ಅಲ್ಲದೆ ಟಾಯ್ಲೆಟ್‌ ಬೇಸಿನ್‌ಗೆ ಮಣ್ಣು ತುಂಬಿಸಿ ಹೋಗಿದ್ದಾರೆ ಎನ್ನಲಾಗಿದೆ. ಪಕ್ಕದಲ್ಲಿರುವ ಬಿಆರ್‌ಸಿ ಕೇಂದ್ರದ ಬೀಗ ಒಡೆದು ಚಿಲ್ಲರೆ ಹಣ ಕದ್ದೊಯ್ದಿದ್ದಾರೆ. ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎನ್ನಲಾಗಿದೆ.

See also  ಸುಳ್ಯ: ಕ್ರೀಡಾ ಕ್ಷೇತ್ರದಲ್ಲಿ ಮಿಂಚಿದ ಸೈಂಟ್ ಜೋಸೆಫ್ ಪ್ರೌಢ ಶಾಲೆಯ ಪ್ರತಿಭೆ, ಚಕ್ರ ಎಸೆತದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಸಮನ್ಯು ಎಸ್. ಶೆಟ್ಟಿ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget