ಕರಾವಳಿ

ಪುತ್ತೂರು: ಶಾಸಕರೊಂದಿಗಿರುವ ಮಹಿಳೆಯ ಫೋಟೋ ವೈರಲ್,ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ ಮಹಿಳೆ

ನ್ಯೂಸ್ ನಾಟೌಟ್ : ಶಾಸಕರ ಜತೆ ಮಹಿಳೆಯ ಫೊಟೋವೊಂದು ವೈರಲ್ ಆಗಿದ್ದು,ಈ ಕುರಿತಂತೆ ಸಂತ್ರಸ್ತ ಮಹಿಳೆ ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ಕುರಿತು ಸ್ಪಷ್ಟನೆ ನೀಡಿ ಮಾತನಾಡಿದ ಮಹಿಳೆ ‘ಶಾಸಕರ ಜೊತೆಗಿರುವ ಪೊಟೋ ಎಡಿಟ್ ಮಾಡಿದ್ದು ಎಂದಿದ್ದಾರೆ. ನನ್ನ ವೈಯುಕ್ತಿಕ ಫೋಟೋಗಳನ್ನು ಪುತ್ತೂರಿನ ಶಾಸಕರ ಜೊತೆ ಹೊಂದಾಣಿಕೆ ಮಾಡಿಕೊಂಡು ವೈರಲ್ ಮಾಡುತ್ತಿದ್ದಾರೆ.ಇದು ನನಗೆ ಮುಜುಗರವನ್ನುಂಟು ಮಾಡಿದೆ. ನಾನೊಬ್ಬಳು ಮಹಿಳೆ,ನನಗೂ ವೈಯಕ್ತಿಕ ಬದುಕು ಇದೆ ಅನ್ನುವುದನ್ನು ಯೋಚನೆ ಮಾಡದೇ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದು ಎಷ್ಟು ಸರಿ.ಇದರಿಂದಾಗಿ ನನಗೆ ಮತ್ತು ಮನೆ ಮಂದಿಗೆ ತುಂಬಾ ನೋವಾಗಿದೆ.

ಅದನ್ನು ವೈರಲ್ ಮಾಡುವವರ ವಿರುದ್ಧ ಸೂಕ್ತ ಶಿಕ್ಷೆ ಆಗಬೇಕೆಂದು ನೆಕ್ಕಿಲಾಡಿಯ ಮಹಿಳೆಯೊಬ್ಬರು ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ.ಓರ್ವ ಮಹಿಳೆಯಾಗಿ ನನ್ನ ಮೇಲೆ ದೌರ್ಜನ್ಯ ಮಾಡುವುದು ತಪ್ಪು.ನನಗೂ ಶಾಸಕರಿಗೆ ಯಾವುದೇ ರೀತಿಯ ಸಂಬಂಧವಿಲ್ಲ. ಅದೂ ಅಲ್ಲದೆ ಓರ್ವ ಮಹಿಳೆಯ ಮೇಲೆ ಇಷ್ಟು ದೊಡ್ಡ ಆರೋಪ ಸರಿಯಲ್ಲ. ಯಾರು ವೈರಲ್ ಮಾಡಿದ್ದಾರೋ ಅವರಿಗೆ ಸೂಕ್ತ ಶಿಕ್ಷೆ ಆಗಬೇಕು ಎಂದು ಅವರು ಆಗ್ರಹಿಸಿದ್ದಾರೆ.

Related posts

ಸುಬ್ರಹ್ಮಣ್ಯ:ದ.ಕ ಕಾಂಗ್ರೆಸ್‌ ಅಭ್ಯರ್ಥಿಗೆ ದೈವದ ಅಭಯ..!,ಈ ಬಾರಿ ಗೆಲುವಿನ ಮಂದಹಾಸ ಬೀರುವರೇ ಪದ್ಮರಾಜ್‌ ?

ಸುಳ್ಯ: ಅಬ್ಬರದ ಚುನಾವಣಾ ಪ್ರಚಾರ,ಸುಳ್ಯಕ್ಕೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ

ಸಂಪಾಜೆ ಗಡಿಯಲ್ಲಿ ನಕ್ಸಲರು..!ಈ ಸುದ್ದಿ ನಿಜವೇ?