ಕರಾವಳಿಪುತ್ತೂರು

ಪುತ್ತೂರು: ನೆಹರೂ ನಗರದ ಕೋಕೋ ಗುರು ಅಡುಗೆಮನೆಯಲ್ಲಿ ಕಳವು ಪ್ರಕರಣ :ಆರೋಪಿಯ ಹೆಡೆಮುರಿಕಟ್ಟಿದ ಪೋಲೀಸ್ ಇಲಾಖೆ..!

144

ಪುತ್ತೂರು : ಉಂಡ ಮನೆಗೆ ದ್ರೋಹ ಬಗೆದ ಘಟನೆಯೊಂದು ಪುತ್ತೂರಿನಿಂದ ವರದಿಯಾಗಿತ್ತು.ತಾನು ಕೆಲಸ ಮಾಡಿ ಸಂಬಳ ಪಡೆಯುತ್ತಿದ್ದ ಸಂಸ್ಥೆಗೆ ಸಾವಿರಾರು ರೂ.ಉಂಡೆನಾಮ ಹಾಕಿದವನನ್ನು ಕೇವಲ 24 ಗಂಟೆಯೊಳಗೆ ಹೆಡೆಮುರಿ ಕಟ್ಟುವಲ್ಲಿ ಪುತ್ತೂರು ಪೊಲೀಸರು ಇದೀಗ ಯಶಸ್ವಿಯಾಗಿದ್ದಾರೆ.

ನೆಹರೂನಗರದಲ್ಲಿ ಕಾರ್ಯಾಚರಿಸುತ್ತಿರುವ ಕೋಕೋ ಗುರು ಅಡುಗೆಮನೆಯಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಿದ್ದ ಗಣೇಶ್ ಎಂಬಾತ ಸುಮಾರು ೭೦,೦೦೦ ರೂ. ಮತ್ತು ಮೊಬೈಲ್ ನೊಂದಿಗೆ ಪರಾರಿಯಾದ ಬಗ್ಗೆ ವರದಿಯಾಗಿತ್ತು.ಈತ 70000ರೂವನ್ನು ಎಗರಿಸಿದ್ದ ವಿಡಿಯೋ ಕೂಡ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿತ್ತು.ಇದೀಗ ಆರೋಪಿಯನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕ್ಯಾಶಿಯರ್ ಅನ್ನು ಊಟ ಮಾಡಿಬರುವಂತೆ ತಿಳಿಸಿದ ಸಪ್ಲೈಯರ್ ತಾನು ಕ್ಯಾಶ್ ಕೌಂಟರ್ ಅನ್ನು ನೋಡಿಕೊಳ್ಳುವುದಾಗಿ ಹೇಳಿ ಕ್ಯಾಶಿಯರ್ ಅನ್ನು ಊಟಕ್ಕೆಂದು ಕಳುಹಿಸಿದ್ದಾನೆ.ಈ ವೇಳೆ ಈತ ತನ್ನ ಕೈಚಳಕ ಪ್ರದರ್ಶನ ಮಾಡಿದ್ದು,ಬಳಿಕ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.ಘಟನೆಯ ದೃಶ್ಯಾವಳಿ ಸಿಸಿ ಕ್ಯಾಮರಾದಲ್ಲಿ ಸರೆಯಾಗಿತ್ತು.ಈ ಕುರಿತು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿತ್ತು.

See also  ದಕ್ಷಿಣ ಕನ್ನಡ: ನೇತ್ರಾವತಿ ನದಿಯ ನೀರಿನ ಮಟ್ಟ ಭಾರೀ ಪ್ರಮಾಣದಲ್ಲಿ ಏರಿಕೆ..! ನದಿ ತೀರದ ಜನ ಎಚ್ಚರಿಕೆಯಿಂದ ಇರಲು ಜಿಲ್ಲಾಡಳಿತ ಸೂಚನೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget   Ad Widget