ಕರಾವಳಿಪುತ್ತೂರು

ಪುತ್ತಿಲ ಪರಿವಾರದಿಂದ ಪುತ್ತೂರಲ್ಲಿ ಆ.14ರಂದು ಸೌಜನ್ಯ ನ್ಯಾಯಕ್ಕಾಗಿ ಹೋರಾಟ, ಸೌಜನ್ಯ ತಾಯಿಗೆ ಮೊದಲ ಆಮಂತ್ರಣ

233

ನ್ಯೂಸ್ ನಾಟೌಟ್ :  2012ರಲ್ಲಿ ಅತ್ಯಾಚಾರವಾಗಿ ಕೊಲೆಯಾದ ಸೌಜನ್ಯ ಪ್ರಕರಣವನ್ನು ಮರುತನಿಖೆ ನಡೆಸಬೇಕೆಂದು ಪುತ್ತೂರಿನಲ್ಲಿ ಆಗಸ್ಟ್ 14 ರಂದು ಪುತ್ತಿಲ ಪರಿವಾರದ ವತಿಯಿಂದ ಪಾದಯಾತ್ರೆ ಹಾಗೂ ರಸ್ತೆ ತಡೆ ಜಾಥ ನಡೆಯಲಿದೆ.

ಈ ಹೋರಾಟಕ್ಕೆ ಸೌಜನ್ಯ ತಾಯಿ ಕುಸುಮಾವತಿಯವರನ್ನು ಪುತ್ತಿಲ ಪರಿವಾರದ ವತಿಯಿಂದ ಇಂದು(ಆಗಸ್ಟ್ 11) ಆಹ್ವಾನಿಸಲಾಗಿದೆ. ಪುತ್ತಿಲ ಪರಿವಾರ ಸೌಜನ್ಯ ಮನೆಗೆ ತೆರಳಿ, ಸೌಜನ್ಯ ಸಮಾಧಿಗೆ ಪ್ರಾರ್ಥನೆ ಸಲ್ಲಿಸಿ, ತಾಯಿಗೆ ಹೋರಾಟದ ಮೊದಲ ಆಮಂತ್ರಣ ನೀಡಿದ್ದಾರೆ.

ತಾಯಿ ಕುಸುಮಾವತಿಯವರಲ್ಲಿ ಪುತ್ತಿಲ ಪರಿವಾರದ ಪ್ರಧಾನ ಕಾರ್ಯದರ್ಶಿ ಉಮೇಶ್ ವೀರಮಂಗಲ ಆಮಂತ್ರನ ಪತ್ರಿಕೆ ನೀಡಿ, 2013ರಲ್ಲೂ ಅರುಣ್ ಕುಮಾರ್ ಪುತ್ತಿಲರು ಹೋರಾಟ ನಡೆಸಿದ್ದಾರೆ. ಈಗ ಮರುತನಿಖೆಗೆ ಆಗ್ರಹಿಸಿ ಪುತ್ತೂರಿನಲ್ಲಿ ಹೋರಾಟ ನಡೆಸಲಿದ್ದೇವೆ. ಈ ಹೋರಾಟದ ಮೊದಲ ಆಮಂತ್ರಣ ನಿಮಗೆ ನೀಡಿ ಆಮಂತ್ರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

ಆ.14 ರಂದು ಬೆಳಿಗ್ಗೆ 9.30 ರಿಂದ ದರ್ಭೆಯಿಂದ ಬಸ್ ನಿಲ್ದಾಣದವರೆಗೆ ಜಾಥ ಹಾಗೂ ರಸ್ತೆ ತಡೆ ನಡೆಯಲಿದೆ. 10 ಗಂಟೆಯಿಂದ 11 ಗಂಟೆಯವರೆಗೆ ಪುತ್ತೂರಿನ ಅಂಗಡಿ ಮಾಲೀಕರು 1 ಗಂಟೆ ಸ್ವಯಂಪ್ರೇರಿತ ಬಂದ್ ನಡೆಸಿ ಸೌಜನ್ಯಳ ನ್ಯಾಯಕ್ಕಾಗಿ ನಡೆಯುವ ಹೋರಾಟದಲ್ಲಿ ಭಾಗವಹಿಸುವಂತೆ ಪುತ್ತಿಲ ಪರಿವಾರ ಕೇಳಿಕೊಂಡಿದೆ ಎನ್ನಲಾಗಿದೆ. ಈ ಸಂದರ್ಭ ಪುತ್ತಿಲ ಪರಿವಾರದ ನಗರ ಅಧ್ಯಕ್ಷರಾದ ಅನಿಲ್ ತೆಂಕಿಲ, ಮನೀಶ್ , ಶನ್ಮಿತ್ ರೈ, ಶರತ್ ವಿಟ್ಲ ಮೊದಲಾದವರು ಹಾಜರಿದ್ದರು.

See also  ನೆಲ್ಲೂರು-ಕೆಮ್ರಾಜೆ: ಪತ್ನಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪತಿ..! ಭೀಕರ ಕೃತ್ಯದ ಬಳಿಕ ತಾನೂ ವಿಷ ಸೇವಿಸಿ ಆತ್ಮಹತ್ಯೆ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget