ಕ್ರೈಂವೈರಲ್ ನ್ಯೂಸ್

ಪುಷ್ಪಾ ಸಿನಿಮಾನೇ ಇವರಿಗೆ ಸ್ಪೂರ್ತಿ..! ಪುಷ್ಪಾ ಸಿನಿಮಾದಲ್ಲಿ ಹಾಲು ಪೂರೈಸುವ ಟ್ಯಾಂಕರ್‌ನಲ್ಲಿ ರಕ್ತ ಚಂದನ ಸಾಗಾಟ ಮಾಡಿದಂತೆ ಈ ಗ್ಯಾಂಗ್ ಮದ್ಯ ಸಾಗಾಟ ಮಾಡಿದ ರೀತಿಯೇ ರೋಚಕ!

176

ಅಬಕಾರಿ ಪೊಲೀಸರ ರೈಡ್ ನಲ್ಲಿ ಬಯಲಾಯ್ತು ಹೈ-ಟೆಕ್ ಸ್ಮಗ್ಲಿಂಗ್

ನ್ಯೂಸ್ ನಾಟೌಟ್: ಪುಷ್ಪಾ ಸಿನಿಮಾದಲ್ಲಿ ಹಾಲು ಪೂರೈಸುವ ಟ್ಯಾಂಕರ್‌ನಲ್ಲಿ ರಕ್ತ ಚಂದನ ಸಾಗಾಟ ಮಾಡಿದರೆ ಈ ಗ್ಯಾಂಗ್ ಪ್ಲೈವುಡ್ ಸಾಗಿಸುವ ಲಾರಿಯಲ್ಲಿ ಲಿಕ್ಕರ್ ಸ್ಮಗ್ಲಿಂಗ್ ಮಾಡಿದೆ.

ಈ ರೀತಿ ಪುಷ್ಪಾ ಸಿನಿಮಾ ಮಾದರಿಯಲ್ಲಿ ಲಿಕ್ಕರ್ ಸ್ಮಗ್ಲಿಂಗ್ (Liquor Smuggling) ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿ, 54 ಲಕ್ಷ ರೂ. ಮೌಲ್ಯದ ಮದ್ಯವನ್ನು ಅಬಕಾರಿ ಪೊಲೀಸರು ಜಪ್ತಿ ಮಾಡಿಕೊಂಡಿರುವ ಘಟನೆ ಬೆಳಗಾವಿಯಲ್ಲಿ ಬಾನುವಾರ ನಡೆದಿದೆ.ಖಚಿತ ಮಾಹಿತಿ ಮೇರೆಗೆ ಬೆಳಗಾವಿಯ ಸುವರ್ಣಸೌಧ ಬಳಿ ಅಬಕಾರಿ ಪೊಲೀಸರು ದಾಳಿ ನಡೆಸಿದ್ದು ಖದೀಮರ ಕೈಚಳಕಕ್ಕೆ ಅಬಕಾರಿ ಪೊಲೀಸರೇ ಅಚ್ಚರಿ ಪಟ್ಟಿದ್ದಾರೆ.

ಪ್ರಕರಣ ಸಂಬಂಧ ಉತ್ತರ ಪ್ರದೇಶದ ಬನಾರಸ್ ಮೂಲದ ವಿರೇಂದ್ರ ಮಿಶ್ರಾ (34) ಬಂಧನ ಮಾಡಲಾಗಿದೆ. ಪ್ರಕರಣ ಕುರಿತು ಅಬಕಾರಿ ಅಪರ ಆಯುಕ್ತ ಮಂಜುನಾಥ್ ಮಾಹಿತಿ ನೀಡಿದ್ದು ಹೈಟೆಕ್ ಆಗಿ ಗೋವಾದಿಂದ ಲಿಕ್ಕರ್ ಸ್ಮಗ್ಲಿಂಗ್ ಮಾಡುತ್ತಿದ್ದ ವಾಹನದ ಮೇಲೆ ದಾಳಿ ಮಾಡಿದ್ದೇವೆ.

ಇದು ಹೈಪ್ರೋಲ್ ಹಾಗೂ ವಿಶೇಷ ಪ್ರಕರಣವಾಗಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.ಹೈಟೆಕ್ ಲಿಕ್ಕರ್ ಸ್ಮಗ್ಲಿಂಗ್ ಜಾಲ ಭೇದಿಸಿದ ಬೆಳಗಾವಿ ಅಬಕಾರಿ ಪೊಲೀಸರು ಲಾರಿ ಸೇರಿ 54 ಲಕ್ಷ ರೂ. ಮೌಲ್ಯದ ಬೆಳೆಬಾಳುವ ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಕ್ರಮ ಸಾಗಾಟ ಮಾಡುತ್ತಿದ್ದ ಗ್ಯಾಂಗ್ ಗೋವಾದಲ್ಲಿ ಚೀಪ್ ರೇಟ್‌ಗೆ ಮದ್ಯ ಖರೀದಿಸಿ ಅಕ್ರಮವಾಗಿ ಬೇರೆ ರಾಜ್ಯಕ್ಕೆ ಸಾಗಾಟ ಮಾಡುತ್ತಿತ್ತು. ಗೋವಾದಿಂದ ಈ ಮದ್ಯವನ್ನು ಯಾವ ರಾಜ್ಯಕ್ಕೆ ಕಳುಹಿಸಲಾಗುತ್ತಿತ್ತು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

See also  ಬಾಲಕಿಯ ಕೈಬೆರಳಿನ ಬದಲಿಗೆ ನಾಲಿಗೆಗೆ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯ..! ಈ ಬಗ್ಗೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಹೇಳಿದ್ದೇನು..? ಏನಿದು ಎಡವಟ್ಟು..?
  Ad Widget   Ad Widget   Ad Widget   Ad Widget   Ad Widget   Ad Widget   Ad Widget