ನ್ಯೂಸ್ ನಾಟೌಟ್:ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಇದೀಗ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರು.ಕೆಲವೇ ಸಮಯದಲ್ಲಿ ಚಿತ್ರರಂಗದಲ್ಲಿ ಬೇರೆ ಯಾವುದೇ ನಟಿ ಮಾಡಿರದ ಸಾಧನೆಯನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ 3 ಸಿನಿಮಾಗಳ ಸಕ್ಸಸ್ ನಿಂದ ಗಲ್ಲಾಪೆಟ್ಟಿಗೆಯಲ್ಲಿ 500 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದ್ದಾರೆ.
ರಶ್ಮಿಕಾ ಮಂದಣ್ಣ ಫಿಲ್ಮ್ ಇಂಡಸ್ಟ್ರೀಗೆ ಲಕ್ಕಿ ನಟಿ ಜತೆಗೆ ಹೀರೋಗಳ ಪಾಲಿಗೂ ಕೂಡ.ಅವರು ಸಿನಿಮಾದಲ್ಲಿ ನಟಿಸುತ್ತಾರೆ ಎಂದರೆ ಆ ಚಿತ್ರ ಹಿಟ್ ಎಂದೇ ಅರ್ಥ. ಇದೀಗ ಅವರು ನಟಿಸಿರುವ ಸತತ 3 ಸಿನಿಮಾಗಳು 500 ಕೋಟಿ ರೂ. ಕ್ಲಬ್ ಮಾಡಿದೆ. ಬ್ಯಾಕ್ ಟು ಬ್ಯಾಕ್ 3 ಸಿನಿಮಾಗಳ ಹಿಟ್ ಮೂಲಕ ಸಕ್ಸಸ್ ಫುಲ್ ನಟಿಯಾಗಿದ್ದಾರೆ.ಹಿಂದಿ ವರ್ಷನ್ ನಲ್ಲಿ ರಣ್ ಬೀರ್ ಕಪೂರ್ ಜೊತೆಗಿನ ‘ಅನಿಮಲ್’ (Animal) 556.36 ಕೋಟಿ ರೂ, ಅಲ್ಲು ಅರ್ಜುನ್ ಜೊತೆಗಿನ ‘ಪುಷ್ಪ 2’ (Pushpa 2) 830 ಕೋಟಿ ರೂ, ವಿಕ್ಕಿ ಕೌಶಲ್ ಜೊತೆಗಿನ ‘ಛಾವಾ’ (Chhaava) 516 ಕೋಟಿ ರೂ. ಕಲೆಕ್ಷನ್ ಯಶಸ್ಸಿನತ್ತ ಮುನ್ನುಗ್ಗುತ್ತಿದೆ. ಇದುವರೆಗೂ ಬೇರೆ ಯಾವುದೇ ನಟಿ ಮಾಡಿರದ ಸಾಧನೆಯನ್ನು ರಶ್ಮಿಕಾ ಮಾಡಿದ್ದಾರೆ.ಅಂದಹಾಗೆ, ’ದಿ ಗರ್ಲ್‌ಫ್ರೆಂಡ್’, ‘ಸಿಕಂದರ್’, ‘ರೈನ್ ಬೋ’, ‘ಪುಷ್ಪ 3’ ಸಿನಿಮಾಗಳು ರಶ್ಮಿಕಾ ಮಂದಣ್ಣ ಕೈಯಲ್ಲಿವೆ.