ಕ್ರೈಂವೈರಲ್ ನ್ಯೂಸ್ಸಿನಿಮಾ

‘ಪುಷ್ಪ 2’ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯ ಲೀಕ್..! ಕಾನೂನು ಕ್ರಮ ಕೈಗೊಳ್ಳುವಂತೆ ಅಭಿಮಾನಿಗಳ ಒತ್ತಾಯ..!

164

ನ್ಯೂಸ್ ನಾಟೌಟ್: ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ‘ಪುಷ್ಪ 2’ (Pushpa 2) ಇದೇ ಆಗಸ್ಟ್ 6ರಂದು ಬಿಡುಗಡೆಗೆ ಸಿದ್ಧವಾಗಿದೆ. ಸದ್ಯ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ತಂಡ ಬ್ಯುಸಿಯಾಗಿದ್ದರೆ, ಇತ್ತ ಚಿತ್ರೀಕರಣದ ವಿಡಿಯೋಗಳು ಲೀಕ್ ಆಗಿದೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಈ ಸಿನಿಮಾ ಶೂಟಿಂಗ್‌ನಲ್ಲಿ ಫೋನ್ ಬಳಕೆಯನ್ನು ನಿಷೇಧಿಸಲಾಗಿದೆ. ಕಟ್ಟು ನಿಟ್ಟಾಗಿ ನಿಯಮ ಹೇರಿದ್ರೂ ಕೂಡ ಕೆಲವರು ಮೊಬೈಲ್ ಸೆಟ್ ಒಳಗೆ ತೆಗೆದುಕೊಂಡು ಹೋಗಿದ್ದಾರೆ. ಕ್ಲೈಮ್ಯಾಕ್ಸ್ ಹಂತದ ಸೀನ್‌ಗಳನ್ನು ಕದ್ದು ಚಿತ್ರೀಕರಿಸಿದ್ದಾರೆ.

ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ರಕ್ತಸಿಕ್ತವಾದ ವ್ಯಕ್ತಿಯೊಬ್ಬ ಅಲ್ಲು ಅರ್ಜುನ್ (Allu Arjun) ಹೊಡೆಯಲು ಮುಂದಾಗುತ್ತಿರುವ ರೀತಿಯಲ್ಲಿ ಈ ವಿಡಿಯೋ ಇದೆ. ಈ ಕೆಲಸ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಅಭಿಮಾನಿಗಳು ಒತ್ತಾಯಿಸಿದ್ದಾರೆ. ‘ಪುಷ್ಪ 2’ ಚಿತ್ರವು ಇನ್ನೂ 10% ಶೂಟಿಂಗ್ ಬಾಕಿಯಿದೆ. ಬಹುಭಾಷೆಗಳಲ್ಲಿ ಸಿನಿಮಾ ಈ ವರ್ಷದ ಕೊನೆಯಲ್ಲಿ ರಿಲೀಸ್ ಆಗಲಿದೆ.

Click

https://newsnotout.com/2024/07/dakshina-kannada-chikkamagaluru-and-kodagu-under-red-alert/
https://newsnotout.com/2024/07/wayanad-landslide-kannada-news-2-suspence-and-2-nomore-origin-of-karnataka/
https://newsnotout.com/2024/07/dog-over-food-kannada-news-viral-issue-women-got-jailed/
https://newsnotout.com/2024/07/ksrtc-bmtc-kannada-news-ticket-20-increase-issue/
https://newsnotout.com/2024/07/kerala-cm-pinaray-vijayan-and-karnataka-cm-siddaramaih-help-to-wayanad/
See also  ತನ್ನ ಮನೆಯಲ್ಲಿ ಮೊದಲ ಬಾರಿಗೆ ವಿದ್ಯುತ್ ಕಂಡ 70ರ ವೃದ್ಧೆ ! ಪೊಲೀಸ್ ಅಧಿಕಾರಿಗಳಿಗೆ ಸಿಹಿ ಹಂಚಿ ಸಂಭ್ರಮಿಸಿದ ಅಜ್ಜಿ! ಇಲ್ಲಿದೆ ವೈರಲ್ ವಿಡಿಯೋ
  Ad Widget   Ad Widget   Ad Widget   Ad Widget   Ad Widget   Ad Widget   Ad Widget   Ad Widget