ನ್ಯೂಸ್ ನಾಟೌಟ್: ನಾಯಿಮರಿಗಳು ಸಣ್ಣದಿರುವಾಗ ಭಯಂಕರ ಚೇಷ್ಟೆ ಮಾಡುತ್ತವೆ. ಸಿಕ್ಕ ಸಿಕ್ಕ ವಸ್ತುಗಳನ್ನು ಎತ್ತಿಕೊಂಡು ಕಚ್ಚಿ ಹಾಕ್ತವೆ. ಮಾತ್ರವಲ್ಲ ಕೆಲವು ಅಗತ್ಯ ವಸ್ತುಗಳನ್ನು ಕೂಡ ಎತ್ತಿ ಕೊಂಡು ಹೋಗಿ ಎಲ್ಲೋ ಒಂದು ಕಡೆ ಇಟ್ಟಿರುತ್ತೆ.ಹೀಗಾಗಿ ನಾವು ಸ್ವಲ್ಪ ಹುಷಾರಾಗಿರಬೇಕು.ಕೆಲವೊಮ್ಮೆ ಅವುಗಳ ಆಟ ಕೆಲವೊಮ್ಮೆ ಜೀವಕ್ಕೂ ಸಂಚಕಾರ ತರುವ ಮಟ್ಟಕ್ಕೆ ಹೋಗುತ್ತದೆ ಅದೇ ರೀತಿ ಇಲ್ಲೊಂದು ನಾಯಿ ಮರಿ ಕೂಡ ಮನೆಯಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನು ತಿಂದು ತಿಂದು ಬಳಿಕ ಅನಾರೋಗ್ಯಕ್ಕೆ ತುತ್ತಾಗಿದೆ, ಬಳಿಕ ಮನೆಯವರು ನಾಯಿ ಮರಿಯನ್ನು ವೈದ್ಯರ ಬಳಿ ಕರೆದುಕೊಂಡು ಹೋದಾಗ ಶಾಕ್ ಗೆ ಒಳಗಾಗಿದ್ದಾರೆ.
ಈ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಇಲ್ಲಿನ ನಿವಾಸಿಯೊಬ್ಬರು ಸಾಕಿದ ಏಳು ತಿಂಗಳ ನಾಯಿ ಮರಿಯೊಂದು ಮನೆಯಲ್ಲಿ ಚುರುಕಿನಿಂದ ಓಡಾಡುತ್ತಿತ್ತು. ನಾಯಿ ಮರಿ ಒಮ್ಮೆಲೇ ಅನಾರೋಗ್ಯಕ್ಕೆ ತುತ್ತಾಗಿದೆ ಆದರೆ ಮನೆಮಂದಿದೆ ಏನಾಗಿದೆ ಎಂದು ಗೊತ್ತಾಗಲಿಲ್ಲ ಏನೋ ಅರೋಗ್ಯ ಸಮಸ್ಯೆ ಇರಬೇಕು ಎಂದು ವೈದ್ಯರ ಬಳಿಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಅಲ್ಲಿ ನಾಯಿ ಮರಿಯ ಹೊಟ್ಟೆಯನ್ನು ನೋಡಿದ ವೈದ್ಯರಿಗೆ ಶಾಕ್ ಆಗಿದೆ. ಮರಿ ಯಾವುದೇ ವಸ್ತುಗಳನ್ನು ನುಂಗಿರಬೇಕು ಎಂದು ಅನುಮಾನ ಹುಟ್ಟಿದೆ ಅದರಂತೆ ಪರೀಕ್ಷೆಗೆ ಒಳಪಡಿಸಿದಾಗ ಹೊಟ್ಟೆಯಲ್ಲಿ ಬಟ್ಟೆಯ ರೀತಿಯ ವಸ್ತುಗಳು ಇರುವುದು ಪತ್ತೆಯಾಗಿದೆ. ಕೂಡಲೇ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ನಾಯಿ ಮರಿಯ ಹೊಟ್ಟೆಯಲ್ಲಿ 2೪ ಸಾಕ್ಸ್, ಬಟ್ಟೆ, ಸೇರಿ ಮೂವತ್ತಕ್ಕೂ ಹೆಚ್ಚು ವಸ್ತುಗಳನ್ನು ಹೊಟ್ಟೆಯಿಂದ ಹೊರತೆಗೆದಿದ್ದಾರೆ.
View this post on Instagram
View this post on Instagram