ಕರಾವಳಿ

ನಾಳೆ ಎರಡನೇ ಮದುವೆಯಾಗಲಿರುವ ಪಂಜಾಬ್ ಸಿಎಂ

623

ನ್ಯೂಸ್ ನಾಟೌಟ್: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಸಿಂಗ್ ಮಾನ್ ನಾಳೆ ಎರಡನೇ ವಿವಾಹವಾಗುತ್ತಿದ್ದಾರೆ. ಕುಟುಂಬ ಸದಸ್ಯರು ಮತ್ತು ಸಂಬಂಧಿಕರ ಸಮ್ಮುಖದಲ್ಲಿ ಚಂಡೀಗಡದ ತಮ್ಮ ನಿವಾಸದಲ್ಲಿ ಅವರು, ವೈದ್ಯೆ. ಗುರುಪ್ರೀತ್ ಕೌರ್ ಅವರ ಕೈಹಿಡಿಯಲಿದ್ದಾರೆ.

ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿಯ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಮದುವೆಗೆ ಸಾಕ್ಷಿಯಾಗಲಿದ್ದಾರೆ. ಸುಮಾರು 6 ವರ್ಷಗಳ ಹಿಂದೆ ಮಾನ್ ತಮ್ಮ ಮೊದಲ ಪತ್ನಿಯಿಂದ ವಿಚ್ಚೇದನ ಪಡೆದಿದ್ದರು. ಮಾನ್ ಅವರ ಮೊದಲ ಪತ್ನಿ ಮತ್ತು ಇಬ್ಬರು ಮಕ್ಕಳು ಅಮೆರಿಕ ವಾಸವಿದ್ದಾರೆ. ಇಬ್ಬರೂ ಮಕ್ಕಳು ತಮ್ಮ ತಂದೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭ ಸಮಾರಂಭಕ್ಕೆ ಆಗಮಿಸಿದ್ದರು. ಭಗವಂತ್ ಮಾನ್ ಅವರ ತಾಯಿ ಮತ್ತು ಸಹೋದರಿ, ವಧುವನ್ನು ಆಯ್ಕೆ ಮಾಡಿದ್ದಾರೆ ಎಂದು ವರದಿಯಾಗಿದೆ.

See also  ಸುಳ್ಯ: ಮತ್ತೆ ಮುಂದುವರಿದ ಚಿರತೆ ಹಾವಳಿ,ಜನವಸತಿ ಪ್ರದೇಶದಲ್ಲಿಯೇ ಬಿಂದಾಸ್ ಓಡಾಟ..!ಶರವೇಗದಲ್ಲಿ ಓಡಿ ಸಾಕು ನಾಯಿ,ದನಗಳನ್ನೂ ಬೇಟೆಯಾಡಿದ ಚೀತಾ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget