ಕರಾವಳಿ

ಪುನೀತ್ ರಾಜ್‍ಕುಮಾರ್ ಅಭಿಮಾನಿ ಆತ್ಮಹತ್ಯೆ

ನ್ಯೂಸ್ ನಾಟೌಟ್:  ಚಿತ್ರನಟ ಪುನೀತ್ ರಾಜಕುಮಾರ್ ಅವರ ಅಭಿಮಾನಿಯೊಬ್ಬರು ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಪೊಲೀಸ್ ಠಾಣೆ ವ್ಯಾಪ್ತಿಯ ಹೊಸ ಆನಂದೂರು ಗ್ರಾಮದಲ್ಲಿ ಶನಿವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗ್ರಾಮದ ಹರೀಶ್ ಅವರ ಪುತ್ರ ಕಿರಣ್ (22) ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಿರಣ್ ಅಪ್ಪು ಅವರ ಅಪ್ಪಟ ಅಭಿಮಾನಿಯಾಗಿದ್ದು, ತಮ್ಮ‌ ನೆಚ್ಚಿನ ನಟನ ಪ್ರಥಮ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ತಾವೇ ಮುಂದೆ ನಿಂತು ಆಯೋಜಿಸಿದ್ದರು.ಗಂಧದ ಗುಡಿ ಚಿತ್ರದ 25 ಟಿಕೆಟ್‌ಗಳನ್ನು ತಂದು ಸ್ನೇಹಿತರಿಗೆ ಹಂಚಿದ್ದರು. ಪುಣ್ಯ ಸ್ಮರಣೆ ಕಾರ್ಯಕ್ರಮ ಮುಗಿದ ಬಳಿಕ ಮನೆಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆ.ಆರ್.ಎಸ್. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

ಗೋವುಗಳ ರಕ್ಷಣೆಗೆ ಸಾವಿರ ರೂ. ಕೊಟ್ಟು ತಲ್ವಾರ್ ಖರೀದಿಸಿ: ಸಾಧ್ವಿ ಸರಸ್ವತಿ

ಮಂಗಳೂರು: ಮಂಗಳಾದೇವಿ ದೇವಳದಲ್ಲಿ ವ್ಯಾಪಾರ ಧರ್ಮ ದಂಗಲ್‌ ವಿಚಾರ; ಶರಣ್‌ ಪಂಪ್‌ವೆಲ್‌ ವಿರುದ್ಧ ದೂರು ದಾಖಲು

NMC:ಸಾಂಸ್ಕೃತಿಕ ಉತ್ಸವ ಪರಂವಃ-2023,ರೋಟರಿ ಪದವಿ ಪೂರ್ವ ಕಾಲೇಜು: ಚಾಂಪಿಯನ್,ಎನ್ನೆಂಪಿಯುಸಿ ಸುಳ್ಯ: ರನ್ನರ್ಸ್