ವೈರಲ್ ನ್ಯೂಸ್

ಏನಿದು ₹81.08 ಲಕ್ಷದ ಐಷಾರಾಮಿ ಸಾರ್ವಜನಿಕ ಶೌಚಾಲಯ..? ಇದು ನಿರ್ಮಾಣವಾಗುತ್ತಿರುವುದೆಲ್ಲಿ..?

156

ನ್ಯೂಸ್ ನಾಟೌಟ್: ಸ್ವಚ್ಛ ಭಾರತ ಮಿಷನ್‌ 2.0 ಯೋಜನೆಯಡಿ ಹು–ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಂದು ಐಷಾರಾಮಿ ಸಾರ್ವಜನಿಕ ಶೌಚಾಲಯ ಹಾಗೂ 18 ಸಾರ್ವಜನಿಕ ಮೂತ್ರಾಲಯ ನಿರ್ಮಾಣವಾಗಲಿದೆ ಎಂದು ವರದಿ ತಿಳಿಸಿದೆ.

ಈ ಕುರಿತು ಈಗಾಗಲೇ ₹81.08 ಲಕ್ಷದ ಟೆಂಡರ್‌ ಕರೆಯಲಾಗಿದ್ದು, ಇದೇ 30ರಂದು ನಡೆಯಲಿರುವ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ಸಿಗುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಹಾಗೂ ಮಹಾನಗರ ಪಾಲಿಕೆ ಅನುದಾನದಲ್ಲಿ ಈ ಶೌಚಾಲಯ ಹಾಗೂ ಮೂತ್ರಾಲಯ ನಿರ್ಮಾಣವಾಗಲಿವೆ. ಧಾರವಾಡದ ಮೀನು ಮಾರುಕಟ್ಟೆ ಬಳಿ ಐಷಾರಾಮಿ ಶೌಚಾಲಯ ನಿರ್ಮಿಸಲು ಸ್ಥಳ ನಿಗದಿಪಡಿಸಲಾಗಿದೆ.

ಮೂತ್ರಾಲಯವನ್ನು ಯಾವ್ಯಾವ ಸ್ಥಳದಲ್ಲಿ ನಿರ್ಮಿಸಬೇಕು ಎನ್ನುವ ಕುರಿತು ಪಾಲಿಕೆ ಅಧಿಕಾರಿಗಳು ಸಮೀಕ್ಷೆ ನಡೆಸಿ, 11 ಸ್ಥಳಗಳನ್ನು ಅಂತಿಮಗೊಳಿಸಿದ್ದಾರೆ. ಸಾರ್ವಜನಿಕ ಮೂತ್ರಾಲಯಗಳಿಲ್ಲದ, ಸಾರ್ವಜನಿಕರಿಗೆ ಅನುಕೂಲವಾಗುವ ಧಾರವಾಡದ ಏಳು ಹಾಗೂ ಹುಬ್ಬಳ್ಳಿಯ 11 ಸ್ಥಳಗಳನ್ನು ಗುರುತಿಸಿ, ಅಂದಾಜು ಪಟ್ಟಿ ಸಿದ್ಧಪಡಿಸಿದ್ದಾರೆ ಎನ್ನಲಾಗಿದೆ.

ಧಾರವಾಡದ ಮಾಳಮಡ್ಡಿ, ಸಪ್ತಾಪುರ, ಪದ್ಮಾವತಿ ಚಿತ್ರಮಂದಿರ, ನೆಹರೂ ನಗರ, ಕೆಲಗೇರಿ, ಶ್ರೀನಗರ ಹಾಗೂ ಹುಬ್ಬಳ್ಳಿಯ ರಾಜೀವಗಾಂಧಿ ಶಾಲೆ ಹಿಂಭಾಗ, ಟೌನ್‌ಹಾಲ್‌ ಮುಂಭಾಗ, ಹಳೇಹುಬ್ಬಳ್ಳಿ ಸೇತುವೆ ಬಳಿ, ಮಂಟೂರು ಮುಖ್ಯರಸ್ತೆ, ಚನ್ನಪೇಟೆ ಹಾಗೂ ಇತರ ಸ್ಥಳಗಳಲ್ಲಿ ಸಾರ್ವಜನಿಕ ಮೂತ್ರಾಲಯ ನಿರ್ಮಾಣವಾಗಲಿದೆ. ಇವುಗಳಿಗೆ ಕೇಂದ್ರ ಸರ್ಕಾರ ₹15.21 ಲಕ್ಷ, ರಾಜ್ಯ ಸರ್ಕಾರ ₹10.14 ಲಕ್ಷ ಹಾಗೂ ಮಹಾನಗರ ಪಾಲಿಕೆ ₹20.74 ಲಕ್ಷ, ಒಟ್ಟು ₹46.08 ಲಕ್ಷ ಅನುದಾನ ನೀಡಲಿದೆ.

ಧಾರವಾಡದ ಮೀನು ಮಾರುಕಟ್ಟೆ ಬಳಿ ₹35 ಲಕ್ಷ ವೆಚ್ಚದ ಐಷಾರಾಮಿ ಶೌಚಾಲಯ ನಿರ್ಮಿಸಲಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ₹8.25 ಲಕ್ಷ, ರಾಜ್ಯ ಸರ್ಕಾರ ₹5.50 ಲಕ್ಷ ಹಾಗೂ ಮಹಾನಗರ ಪಾಲಿಕೆ ₹11.25 ಲಕ್ಷ ಅನುದಾನ ನೀಡಲಿದೆ.
ಈ ಶೌಚಾಲಯ ಐಷಾರಾಮಿ ಸ್ನಾನದ ಗೃಹಗಳು, ಟಚ್‌ಲೆಸ್ ಫ್ಲಶಿಂಗ್, ಸ್ತನ್ಯಪಾನ ಕೊಠಡಿಗಳು ಮತ್ತು ಸ್ವಯಂಚಾಲಿತ ಸ್ಯಾನಿಟರಿ ನ್ಯಾಪ್‌ಕಿನ್ ಇನ್ಸಿನರೇಟರ್‌ ಯಂತ್ರ, ವೀಲಿಂಗ್‌ ಚೇರ್‌ ಒಳಗೊಂಡಿರಲಿದೆ. ಇದನ್ನು ‘ಆಕಾಂಕ್ಷೆಯ ಶೌಚಾಲಯ’ ಎಂದು ಕರೆಯಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

See also  ಜಮೀನಿನಲ್ಲಿ ಲಕ್ಷಾಂತರ ರೂ. ಟೊಮೆಟೊ ಕಳ್ಳತನ!ಮಾರುಕಟ್ಟೆಯಲ್ಲಿ ಸಿಸಿ ಟಿವಿ ಅಳವಡಿಸಿದ ರೈತ..!
  Ad Widget   Ad Widget   Ad Widget   Ad Widget   Ad Widget   Ad Widget   Ad Widget