ಕರಾವಳಿಕೊಡಗು

ಜನರೇ ರಾಜ್ಯ ಸರಕಾರದ ಉಚಿತ ಯೋಜನೆಗೆ ಅರ್ಜಿ ಸಲ್ಲಿಸೋ ಮುನ್ನ ಹುಷಾರಾಗಿರಿ..! ಸ್ವಲ್ಪ ಯಾಮಾರಿದ್ರೂ ನಿಮ್ಮ ಬ್ಯಾಂಕ್ ಖಾತೆಗೆ ಬೀಳಬಹುದು ಕನ್ನ..!

ನ್ಯೂಸ್ ನಾಟೌಟ್: ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರದ ಉಚಿತ ಯೋಜನೆಗಳಿಗೆ ಚಾಲನೆ ಸಿಕ್ಕಿದೆ.

ಇದೀಗ ಉಚಿತ ವಿದ್ಯುತ್ ‘ಗೃಹ ಜ್ಯೋತಿ’ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ಆರಂಭವಾಗಿದೆ. ಈ ಯೋಜನೆಗೆ ಜನರು ಅರ್ಜಿ ಸಲ್ಲಿಸುವ ಮೊದಲು ಒಂದಷ್ಟು ವಿಷಯಗಳನ್ನು ತಿಳಿದುಕೊಳ್ಳಬೇಕಿದೆ. ಇದು ರಾಜ್ಯ ಸರಕಾರದ ಯೋಜನೆಯಾಗಿದ್ದು ಉಚಿತವಾಗಿರುತ್ತದೆ. ಇದಕ್ಕೆ ಅರ್ಜಿ ಸಲ್ಲಿಸುವಾಗ ಯಾರಾದರೂ ಹಣ ಕೇಳಿದರೆ ಸಂಬಂಧಪಟ್ಟವರಿಗೆ ದೂರು ನೀಡಬಹುದಾಗಿದೆ. ಕೆಲವು ಕಡೆ ಗ್ರಾಮ ವನ್ ಹಾಗೂ ಸೈಬರ್ ಸೆಂಟರ್‌ಗಳಲ್ಲಿ ದುಪ್ಪಟ್ಟು ಹಣ ದೋಚುತ್ತಿದ್ದಾರೆ ಅನ್ನುವಂತಹ ದೂರುಗಳು ಕೇಳಿ ಬರುತ್ತಿದೆ. ಅಂತಹವರ ವಿರುದ್ಧ ದೂರು ನೀಡಿದರೆ ಸರ್ಕಾರ ಸೂಕ್ತ ಕಾನೂನು ಕ್ರಮಗಳನ್ನು ಜರುಗಿಸಲಿದೆ.

ಸರಕಾರದ ಯೋಜನೆ ಬಂದ ಬೆನ್ನಲ್ಲೇ ಅದನ್ನು ಲಾಭವಾಗಿಸಿಕೊಳ್ಳಲು ಸೈಬರ್ ಕಳ್ಳರು ಪ್ಲಾನ್ ಮಾಡುತ್ತಿದ್ದಾರೆ. ಸಿಕ್ಕಸಿಕ್ಕ ನಕಲಿ ವೆಬ್‌ಸೈಟ್‌ಗಳನ್ನು ಹರಿಯಬಿಟ್ಟಿದ್ದಾರೆ. ಆ ಲಿಂಕ್‌ಗಳನ್ನು ನೀವು ಒತ್ತಿದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಖಾಲಿಯಾಗುತ್ತದೆ. ಇನ್ನೂ ಕೆಲವು ಸೈಬರ್ ವಂಚಕರು ಬೆಸ್ಕಾಂ ಅಧಿಕಾರಿಗಳ ಸೋಗಿನಲ್ಲಿ ಜನರಿಗೆ ಕರೆ ಮಾಡಿ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲ. ಸಂಪರ್ಕ ಕಡಿತ ಮಾಡುವುದಾಗಿ ಬೆದರಿಸಿ ಆನ್​ಲೈನ್​ನಲ್ಲಿ ಬಿಲ್ ಮೊತ್ತ ಸ್ವೀಕರಿಸುವ ನೆಪದಲ್ಲಿ ಬ್ಯಾಂಕ್ ಖಾತೆ ವಿವರ ಪಡೆದು ಅಮಾಯಕರ ಖಾತೆಗೆ ಕನ್ನ ಹಾಕುತ್ತಿರುವ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬಂದಿವೆ. ಆರ್​ಬಿಐ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡಿ ಬ್ಯಾಂಕ್ ಖಾತೆಗೆ ಪಾನ್, ಆಧಾರ್ ಲಿಂಕ್ ಮತ್ತು ಪಾನ್​ಕಾರ್ಡ್​ಗೆ ಆಧಾರ್ ಲಿಂಕ್ ಮಾಡುವಂತೆ ಸಲಹೆ ಕೊಡುವ ನೆಪದಲ್ಲಿ ಸಹ ಸೈಬರ್ ಖದೀಮರು ಕನ್ನ ಹಾಕುತ್ತಿರುವ ವಿಚಾರವೂ ಬೆಳಕಿಗೆ ಬಂದಿದೆ. ಹೀಗಾಗಿ ಜನರು ತಮ್ಮ ಮೊಬೈಲ್‌ಗೆ ಬರುವ ಕರೆ ಅಥವಾ ಒಟಿಪಿಗಳನ್ನು ಪರಿಶೀಲಿಸದೆ ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು ಅನ್ನುವುದು

  • ಬೆಂಗಳೂರು ಒನ್, ಕರ್ನಾಟಕ ಒನ್, ನಾಡ ಕಚೇರಿಯಲ್ಲಿಯೇ ಅರ್ಜಿ ಸಲ್ಲಿಸಿ
  • ಅಧಿಕೃತ ವೆಬ್​ಸೈಟ್ ಸೇವಾಸಿಂಧುವನ್ನೇ ಬಳಸಿ
  • ಅಪರಿಚಿತ ಫೋನ್ ಕರೆ, ಇ-ಮೇಲ್, ಲಿಂಕ್​ಗಳ ಬಗ್ಗೆ ನಿರ್ಲಕ್ಷಿಸಿ. ಇಂಟರ್​ನೆಟ್ ಬಳಸುವ ಮುನ್ನ ಸುರಕ್ಷಿತ ವೆಬ್​ಸೈಟ್ ಪರೀಕ್ಷಿಸಿ
  • ಸಿಕ್ಕ ಸಿಕ್ಕ ಕಡೆ ಸೈಬರ್ ಸೆಂಟರ್ ಬಳಸಬೇಡಿ. ನಿಮ್ಮ ಪರಿಚಿತರ ಕಡೆ ಹೋಗಿ

Related posts

ಸುಳ್ಯ:ವೇಣೂರು ಬಳಿ ಭೀಕರ ಪಟಾಕಿ ಸ್ಪೋಟ ಪ್ರಕರಣ‌:ಆರೋಪಿ ಸುಳ್ಯದಲ್ಲಿ ಬಂಧನ..!ಪಟಾಕಿ ತಯಾರಿಕಾ ಘಟಕಕ್ಕೆ ಅನುಮತಿಯಿದ್ದರೂ ಸೈಯದ್ ಬಶೀರ್ ಬಂಧನವಾಗಿದ್ದೇಕೆ?ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌..

ಉಡುಪಿ:ತನ್ನ ಜಾಗಕ್ಕೆ ದನಗಳು ಪ್ರವೇಶ ಮಾಡುತ್ತವೆಯೆಂದು ಗುಂಡಿಟ್ಟು ಕೊಂದ ಕಟುಕ,4 ಗೋವುಗಳ ಹತ್ಯೆ,15 ದನಗಳು ಗಂಭೀರ;ದನಗಳ ಕೊಂದ ಕಿರಾತಕ ಯಾರು?

ಬಿಜೆಪಿಯ ಸೋಲಿನ ಹೊಣೆ ನನ್ನದು,ಎಂಪಿ ಚುನಾವಣೆಯತ್ತ ಗಮನ ಹರಿಸಿ ಗೆಲ್ಲುತ್ತೇವೆ-ಕಟೀಲ್