ನ್ಯೂಸ್ ನಾಟೌಟ್: ಪ್ರತಿಭಟನೆಯ ವೇಳೆ ಹಲ್ಲೆ ಸೇರಿದಂತೆ ಕಹಿ ಘಟನೆಗಳು ಸಂಭವಿಸುವುದೇ ಹೆಚ್ಚು. ಹೀಗಾಗಿ ಪ್ರತಿಭಟನೆಯ ವೇಳೆ ಅಹಿತಕರ ಘಟನೆಗಳು ನಡೆಯಬಾರದೆನ್ನುವ ಉದ್ದೇಶದಿಂದ ಪೊಲೀಸರು ಕರ್ತವ್ಯದಲ್ಲಿ ತೊಡಗಿಕೊಂಡಿರುತ್ತಾರೆ.
ಆದರೆ ಇದೀಗ ವೈರಲ್ ಆಗಿರುವ ಘಟನೆಯಲ್ಲಿ ಪ್ರತಿಭಟನೆಯ ವೇಳೆ ಮಹಿಳಾ ಪೊಲೀಸ್ ಸಿಬ್ಬಂದಿಯ ಜೊತೆ ವ್ಯಕ್ತಿಯೋರ್ವ ಅಸಭ್ಯವಾಗಿ ವರ್ತಿಸಿದ್ದಾನೆ.
भीमटे को देखो, पुलिसवाली की कमर में हाथ डाल रहा है, आज इसको पूरे 75% आरक्षण मिलेगा 👇😂pic.twitter.com/kXAX8CIA8U
— Sakshi Sonam … 👭 (@Sakshi__Sonam__) April 9, 2025
ಘಟನೆ ನಾಗ್ಪುರದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧ ಪಟ್ಟ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮಹಿಳಾ ಪೊಲೀಸ್ ಸಿಬ್ಬಂದಿ ಪ್ರತಿಭಟನಾ ನಿರತ ವ್ಯಕ್ತಿಯನ್ನು ವಶಕ್ಕೆ ಪಡೆದು ಕರೆದೊಯ್ಯುತ್ತಿದ್ದ ವೇಳೆ, ಹಿಂದಿನಿಂದ ಬಂದ ಮತ್ತೋರ್ವ ವ್ಯಕ್ತಿ ಮಹಿಳಾ ಅಧಿಕಾರಿಯ ಸೊಂಟ ಹಿಡಿದುಕೊಂಡಿದ್ದಾನೆ. ಈಗಾಗಲೇ ಆತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.