ಕರಾವಳಿಪುತ್ತೂರುರಾಜಕೀಯ

ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಮಾಡಿದವರನ್ನು ಗಲ್ಲಿಗೇರಿಸಿಯೇ ಸಿದ್ಧ-ಪುತ್ತೂರಿನಲ್ಲಿ ಗರ್ಜಿಸಿದ ಪುತ್ತಿಲ

246

ನ್ಯೂಸ್ ನಾಟೌಟ್ : 11 ವರ್ಷಗಳ ಹಿಂದೆ ಅತ್ಯಾಚಾರ ಮತ್ತು ಕೊಲೆಯಾದ ವಿದ್ಯಾರ್ಥಿನಿ ಸೌಜನ್ಯಳಿಗೆ ನ್ಯಾಯ ಒದಗಿಸಬೇಕು.ಕೊಲೆಗಟುಕರನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸಬೇಕು.ಮುಂದೆ ಇಂತಹ ಪ್ರಕರಣಗಳು ಮರುಕಳಿಸಬಾರದು ಎಂಬ ಉದ್ದೇಶವನ್ನಿಟ್ಟು ಕೊಂಡು ಇಂದಿನ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.ಒಂದು ವೇಳೆ ಪ್ರಕರಣವನ್ನು ಸರಕಾರ ಮರುತನಿಖೆ ಮಾಡಲು ಆದೇಶ ಕೊಡದಿದ್ದರೆ ಸಂಘರ್ಷದ ಹೋರಾಟವಾಗಲಿದೆ ಎಂದು ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಎಚ್ಚರಿಕೆ ನೀಡಿದ್ದಾರೆ.

ಇಂದು ಪುತ್ತೂರಿನಲ್ಲಿ ನಡೆದ ಸೌಜನ್ಯ ಪ್ರಕರಣದ ನ್ಯಾಯಕ್ಕಾಗಿ ನಮ್ಮ ನಡೆ ನ್ಯಾಯದ ಕಡೆ ಪಾದಯಾತ್ರೆಯ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು ಪ್ರಕರಣದಲ್ಲಿ ಸಂತೋಷ್ ರಾವ್ ಎಂಬ ಅಮಾಯಕ ಯುವಕನನ್ನು ಬಂಧಿಸಿ ಶಿಕ್ಷೆ ವಿಧಿಸಲಾಗಿದೆ.ಈತನನ್ನು ಸಿಬಿಐ ವಿಶೇಷ ಕೋರ್ಟ್ ನಿರಪರಾಧಿ ಎಂದು ಹೇಳಿ ಬಿಡುಗಡೆಗೊಳಿಸಿದೆ.ಹಾಗಾದರೆ ನಿಜವಾದ ಆರೋಪಿಗಳು ಯಾರು? ಸೌಜನ್ಯಳನ್ನು ಅತ್ಯಾಚಾರ ಮಾಡಿ ಭೀಕರವಾಗಿ ಕೊಲೆ ಮಾಡಿದವರು ಯಾರು?ನಾವು ಸರಕಾರವನ್ನು ಆಗ್ರಹಿಸುತ್ತಿದ್ದೇವೆ.ಈ ವಿಷಯದಲ್ಲಿ ಮೀನಾ ಮೇಷ ಎನಿಸಬೇಡಿ.ಅಧಿಕಾರಿಗಳನ್ನು ,ಪೊಲೀಸರನ್ನು ಮತ್ತೆ ತನಿಖೆಗೊಳಪಡಿಸಿ ಸೌಜನ್ಯಳ ಸಾವಿಗೆ ನ್ಯಾಯ ಒದಗಿಸಿ.

ಮುಂದಿನ ದಿವಸದಲ್ಲಿ ನ್ಯಾಯ ಸಿಗುತ್ತದೆ ಅನ್ನುವ ವಿಶ್ವಾಸ ನಮಗಿದೆ.ಮತ್ತೆ ಸರಕಾರ ಬೇಳೆ ಬೇಯಿಸುವ ಪ್ರಯತ್ನ ಮಾಡಿದ್ರೆ , ಸೌಜನ್ಯಳ ಹೆಸರಿನಲ್ಲಿ ಸರಕಾರ ಪತನವಾಗಲಿದೆ ಅನ್ನುವ ಮಾತನ್ನು ಹೇಳುತ್ತಿದ್ದೇವೆ. ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಮಾಡಿದವರುನ್ನು ಗಲ್ಲಿಗೇರಿಸಿಯೇ ಸಿದ್ಧ ಎನ್ನುವ ಸಂಕಲ್ಪವನ್ನು ನಾವು ಮಾಡುತ್ತಿದ್ದೇವೆ ಎಂದರು.

See also  ಅಭಿವೃದ್ಧಿ ಕಾರ್ಯವೇ ಶ್ರೀರಕ್ಷೆ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget