ನ್ಯೂಸ್ ನಾಟೌಟ್: ಕಾಲೇಜು ಪ್ರೊಫೆಸರ್ ಒಬ್ಬರು ವಿದ್ಯಾರ್ಥಿಗಳ ಮುಂದೆ ತಮ್ಮ ಡ್ಯಾನ್ಸ್ ಪ್ರತಿಭೆಯನ್ನು (talent) ಪ್ರದರ್ಶಿಸಿ ವೈರಲ್ ಆಗಿದ್ದಾರೆ.
ಬೆಂಗಳೂರಿನ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಸಂಸ್ಥೆಯ ಪ್ರೊಫೆಸರ್ ಪುಷ್ಪರಾಜ್ ಬೀಟ್ ಬಾಕ್ಸ್ ಲಯಕ್ಕೆ ತಕ್ಕಂತೆ ಹಿಪ್-ಹಾಪ್ ಡ್ಯಾನ್ಸ್ ಮಾಡಿದ್ದಾರೆ. ತಮ್ಮ ಕಾಲೇಜಿನ ವಿದ್ಯಾರ್ಥಿಗಳ ಮುಂದೆ ಪ್ರೊಫೆಸರ್ ಸಲೀಸಾಗಿ ಡ್ಯಾನ್ಸ್ ಮಾಡಿದ್ದು, ಇವರ ಈ ಟ್ಯಾಲೆಂಟ್‌ನ್ನು ಶಿಳ್ಳೆ, ಚಪ್ಪಾಳೆ ತಟ್ಟುವ ಮೂಲಕ ವಿದ್ಯಾರ್ಥಿಗಳು ಶ್ಲಾಘಿಸಿದ್ದಾರೆ.
ಹರ್ಷ್ ಗೋಯೆಂಕಾ ಎಂಬವರು ಈ ಕುರಿತ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, “ಬೆಂಗಳೂರಿನ ಕಾಲೇಜು ಪ್ರಾಧ್ಯಾಪಕರ ಮೈಕಲ್ ಜಾಕ್ಸನ್ ಮೂವ್ಸ್” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
A Bengaluru college professor’s Michael Jackson dance moves goes viral…. pic.twitter.com/1RA7TQ2jTL
— Harsh Goenka (@hvgoenka) March 23, 2025
ಮಾರ್ಚ್ 23 ರಂದು ಶೇರ್ ಮಾಡಲಾದ ಈ ವಿಡಿಯೋ 82 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ.
ಇದನ್ನೂ ಓದಿ:ಸಂಸದರ ಸಂಬಳ 24% ಏರಿಕೆ..! ಸಂಸದರ ವೇತನ ಮತ್ತು ಭತ್ಯೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ