ಕ್ರೀಡೆ/ಸಿನಿಮಾ

ಪ್ರೊ ಕಬಡ್ಡಿ ಹರಾಜು: ದಾಖಲೆಯ 1.65 ಕೋಟಿ ರೂ.ವಿಗೆ ಪರ್‌ದೀಪ್ ನರ್ವಾಲ್ ಯುಪಿ ಯೋಧಾ ಪಾಲು

ಮುಂಬೈ: ಪ್ರೊ ಕಬಡ್ಡಿ ಎಂಟನೇ ಆವೃತ್ತಿ ಹರಾಜಿನಲ್ಲಿ ತಾರಾ ಆಟಗಾರ ಪರ್‌ದೀಪ್ ನರ್ವಾಲ್ 1.65 ಕೋಟಿ ರೂ.ಗೆ ಯುಪಿ ಯೋಧಾಕ್ಕೆ ಮಾರಾಟಗೊಂಡಿದ್ದಾರೆ. ಪ್ರೊ ಕಬಡ್ಡಿ ಇತಿಹಾಸದಲ್ಲಿಯೇ ಆಟಗಾರನೊಬ್ಬ ಅತೀ ಹೆಚ್ಚು ಮೊತ್ತಕ್ಕೆ ಹರಾಜಾದ ನಿದರ್ಶನ ಇದಾಗಿದೆ. ಆರನೇ ಆವೃತ್ತಿಯ ಪ್ರೊ ಕಬಡ್ಡಿ ಹರಾಜಿನಲ್ಲಿ 1.51 ಕೋಟಿ ರೂ.ವಿಗೆ ಮೋನು ಗೋಯತ್ ಹರಾಜಾಗಿದ್ದು ಇದುವರೆಗಿನ ಅತೀ ಹೆಚ್ಚಿನ ದಾಖಲೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಸಿದ್ಧಾರ್ಥ್ ದೇಸಾಯಿಗೆ 1.30 ಕೋಟಿ ರೂ:

ತೆಲುಗು ಟೈಟಾನ್ಸ್ 1.30 ಕೋಟಿ ರೂ. ಗೆ ಸಿದ್ಧಾರ್ಥ್ ದೇಸಾಯಿ ಅವರನ್ನು ತಮ್ಮ ತಂಡದಲ್ಲಿಯೇ ಉಳಿಸಿಕೊಂಡಿದೆ. ಹಿಂದಿನ ಆವೃತ್ತಿಗಳಲ್ಲಿ ತೆಲುಗು ಪರ ಸಿದ್ಧಾರ್ಥ್ ಮಿಂಚಿನ ಆಟ ಪ್ರದರ್ಶಿಸಿದ್ದರು. ಹರಿಯಾಣ ಸ್ಟೀಲರ್ಸ್ ರೋಹಿತ್ ಗುಲಿಯಾ ಅವರನ್ನು 83 ಲಕ್ಷ ರೂ.ಗೆ ಖರೀದಿಸಿದೆ.

ಗರಿಷ್ಠ ಮೊತ್ತಕ್ಕೆ ಮಾರಾಟಗೊಂಡ ಅಗ್ರ 5 ಭಾರತೀಯರು

  • ಪರ್‌ದೀಪ್ ನರ್ವಾಲ್-ಯುಪಿ ಯೋಧಾ -1.65 ಕೋಟಿ ರೂ.
  • ಸಿದ್ಧಾಥ್ ದೇಸಾಯಿ-ತೆಲುಗು ಟೈಟಾನ್ಸ್ – 1.30 ಕೋಟಿ ರೂ.
  • ಮಂಜಿತ್ – ತಮಿಳ್ ತಲೈವಾಸ್ – 92 ಲಕ್ಷ ರೂ.
  • ಸಚಿನ್‌- ಪಾಟ್ನಾ ಪೈರೇಟ್ಸ್ – 84 ಲಕ್ಷ ರೂ.
  • ರೋಹಿತ್ ಗುಲಿಯಾ – ಹರಿಯಾಣ ಸ್ಟೀಲರ್ಸ್ – 83 ಲಕ್ಷ ರೂ.

ಗರಿಷ್ಠ ಮೊತ್ತಕ್ಕೆ ಮಾರಾಟಗೊಂಡ ಅಗ್ರ 5 ವಿದೇಶಿ ಆಟಗಾರರು

  • ಮೊಹಮ್ಮದ್ರಾಜ್ (ಇರಾನ್) -ಪಾಟ್ನಾ ಪೈರೇಟ್ಸ್-31 ಲಕ್ಷ ರೂ.
  • ಅಬೋಜರ್ (ಇರಾನ್) -ಬೆಂಗಾಲ್‌ ವಾರಿಯರ್ಸ್ – 30.5 ಲಕ್ಷ ರೂ.
  • ಜಾಂಗ್‌ ಕುನ್‌ ಲೀ (ರಿಪಬ್ಲಿಕ್‌ ಆಫ್‌ ಕೊರಿಯಾ)- ಪಾಟ್ನಾ ಪೈರೇಟ್ಸ್- 20.5 ಲಕ್ಷ ರೂ.
  • ಹಾಡಿಒಷ್ಟೊರಕ್ (ಇರಾನ್‌) -ಗುಜರಾತ್‌ – 20 ಲಕ್ಷ ರೂ.
  • ಮೊಹಮ್ಮದ್ ಇಸ್ಮಾಯಿಲ್ (ಇರಾನ್) -ಹರಿಯಾಣ ಸ್ಟೀಲರ್ಸ್ – 13.2 ಲಕ್ಷ ರೂ.

Related posts

ತುಳುನಾಡು ಕರ್ನಾಟಕದಲ್ಲೇ ಇದೆ,ನಮ್ಮನ್ನು ಹೊರಗಿನವರನ್ನಾಗಿ ಮಾಡಬೇಡಿ ಎಂದ ಕಿಚ್ಚ ಸುದೀಪ್..! ಇಲ್ಲಿದೆ ವಿಡಿಯೋ

ಕನ್ನಡದ ಹಿರಿಯ ನಟ ಮಂಡ್ಯ ರಮೇಶ್‌ಗೆ ದಿಢೀರ್ ಅಸ್ವಸ್ಥ, ಆಗಿದ್ದೇನು?

ಪದ್ಮಶ್ರೀ ಪ್ರಶಸ್ತಿಯನ್ನು ಪ್ರಧಾನಿಗೆ ಹಿಂದಿರುಗಿಸುವುದಾಗಿ ಘೋಷಿಸಿದ್ದೇಕೆ ಖ್ಯಾತ ಕುಸ್ತಿಪಟು..? ಭಜರಂಗ್ ಪುನಿಯಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡದ್ದೇನು?