ದೇಶ-ಪ್ರಪಂಚ

166 ಕೋಟಿ ರೂ.ನ ಐಷಾರಾಮಿ ಮನೆಯಲ್ಲೂ ನೀರು ಸೋರಿಕೆ ಸಮಸ್ಯೆ..!ಮನೆ ಸರಿ ಮಾಡಲೆಂದು ಕೋಟಿಗಟ್ಟಲೆ ಖರ್ಚು ಮಾಡಿ,ಮನೆ ಖಾಲಿ ಮಾಡಿದ ಪ್ರಿಯಾಂಕ ದಂಪತಿ..!ಮನೆ ಮಾರಾಟ ಮಾಡಿದವನ ವಿರುದ್ಧ ದೂರು

ನ್ಯೂಸ್‌ ನಾಟೌಟ್‌ : ದುಬಾರಿ ಮನೆಯಲ್ಲಿ ನೀರು ಸೋರಿಕೆ ಸಮಸ್ಯೆ ಕಾಣಿಸಿಕೊಂಡಿದ್ದು,ಇದರಿಂದ ಅಲ್ಲಿ ವಾಸಿಸಲು ಸಾಧ್ಯವಾಗದ ಕಾರಣ ಗ್ಲೋಬಲ್‌ ಐಕಾನ್‌ ಪ್ರಿಯಾಂಕ ಚೋಪ್ರಾ ಹಾಗೂ ಅವರ ಪತಿ ಗಾಯಕ ನಿಕ್‌ ಜೋನಾಸ್‌ ದಂಪತಿ ಮನೆ ಬಿಟ್ಟು ಹೋದ ಪ್ರಸಂಗ ನಡೆದಿದೆ.

ದಂಪತಿ ತಮ್ಮ ಲಾಸ್ ಎಂಜಲೀಸ್ ನ ಸೋರಿಕೆಯಿರುವ ದುಬಾರಿ ಮನೆಯನ್ನು ಖಾಲಿ ಮಾಡಿ ಬೇರೊಂದು ಮನೆಗೆ ಶಿಫ್ಟ್‌ ಆಗಿದ್ದಾರೆಂದು ಹೇಳಾಗಿದೆ.ಮಾತ್ರವಲ್ಲ ಆ ಮನೆಯಲ್ಲಿ ಅನೇಕ ಸಮಸ್ಯೆಗಳಿದ್ದು, ನಮಗೆ ತುಂಬಾ ನಷ್ಟವಾಗಿದೆಯೆಂದು ಮನೆ ಮಾರಾಟ ಮಾಡಿದವನ ವಿರುದ್ಧ ದೂರು ದಾಖಲಿಸಿರುವುದಾಗಿ ವರದಿಯಾಗಿದೆ.ಅವರ ದುಬಾರಿ ಮನೆಯಲ್ಲಿ ನೀರು ಸೋರಿಕೆ ಸಮಸ್ಯೆ ಕಾಣಿಸಿಕೊಂಡಿದ್ದು,ಇದರಿಂದ ಅಲ್ಲಿ ವಾಸಿಸಲು ಸಾಧ್ಯವಾಗದ ಕಾರಣ ದಂಪತಿ ತಮ್ಮ ಮನೆ ಬದಲಾಯಿಸಿದ್ದಾರೆ ಎಂದು ʼಪೇಜ್‌ ಸಿಕ್ಸ್‌ʼ ವರದಿ ತಿಳಿಸಿದೆ.

ದಂಪತಿ ನೀರು ಸೋರಿಕೆಯಿಂದ ಅನುಭವಿಸಿದ ನಷ್ಟಕ್ಕೆ, ದುರಸ್ತಿ ವೆಚ್ಚಗಳಿಗೆ ಮರುಪಾವತಿ ಮಾಡಬೇಕು ಹಾಗೂ ಇತರ ಹಾನಿಗಳಿಗೆ ಪರಿಹಾರವನ್ನು ನೀಡಬೇಕೆಂದು ಮಾರಾಟಗಾರನ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ವರದಿ ತಿಳಿಸಿದೆ.ನೀರಿನ ಸೋರಿಕೆಯಿಂದ $1.5 ಮಿಲಿಯನ್ (12 ಕೋಟಿ ರೂ.) ಸಾಮಾನ್ಯ ಹಾನಿಯಿಂದ ಸುಮಾರು $2.5 ಮಿಲಿಯನ್ (ರೂ. 20 ಕೋಟಿಗಿಂತ ಹೆಚ್ಚು) ನಷ್ಟ ಆಗಿದೆ ಎಂದು ವರದಿ ತಿಳಿಸಿದೆ.

ಪ್ರಿಯಾಂಕಾ ಮತ್ತು ನಿಕ್ ಸೆಪ್ಟೆಂಬರ್ 2019 ರಲ್ಲಿ $ 20 ಮಿಲಿಯನ್ (ರೂ. 166 ಕೋಟಿ) ಗೆ ಐಷಾರಾಮಿ ಮನೆಯನ್ನು ಖರೀದಿಸಿದ್ದರು. ಇದು ಏಳು ಬೆಡ್‌ ರೂಮ್, ಒಂಬತ್ತು ಬಾತ್‌ ರೂಮ್, ಅಡುಗೆಮನೆ, ತಾಪಮಾನ-ನಿಯಂತ್ರಿತ ವೈನ್ ಕೊಠಡಿ, ಒಳಾಂಗಣ ಬಾಸ್ಕೆಟ್‌ಬಾಲ್ ಅಂಕಣ, ಬೌಲಿಂಗ್ ಅಲ್ಲೆ, ಹೋಮ್ ಥಿಯೇಟರ್, ಮನರಂಜನಾ ಕೋಣೆ, ಸ್ಟೀಮ್ ಶವರ್‌ನೊಂದಿಗೆ ಸ್ಪಾ, ಪೂರ್ಣ ಸೇವಾ ಜಿಮ್ ಮತ್ತು ಬಿಲಿಯರ್ಡ್ಸ್ ಕೋಣೆಯನ್ನು ಹೊಂದಿತ್ತು ಎನ್ನಲಾಗಿದೆ.ಸದ್ಯ ನಿಕ್ ಮತ್ತು ಪ್ರಿಯಾಂಕಾ ಯಾವಾಗ ಇಲ್ಲಿಗೆ ಮರಳುತ್ತಾರೆ ಎಂಬುದು ತಿಳಿದಿಲ್ಲ. ವರದಿಯ ಪ್ರಕಾರ, ಸದ್ಯಕ್ಕೆ ಐಷಾರಾಮಿ ಮನೆಯಲ್ಲಿ ಯಾರೂ ವಾಸಿಸುತ್ತಿಲ್ಲ ಮತ್ತು ಅದನ್ನು ಬಾಡಿಗೆಗೆ ನೀಡುತ್ತಿಲ್ಲ ಎಂಬ ಮಾಹಿತಿ ಲಭಿಸಿದೆ.

Related posts

17 ಮಂದಿಯನ್ನು ಬಿಡುಗಡೆ ಮಾಡಿದ ಹಮಾಸ್ ! ಹಮಾಸ್ ಮತ್ತು ಇಸ್ರೇಲ್ ನಡುವಿನ ಒಪ್ಪಂದವೇನು? ಇಲ್ಲಿದೆ ಸಂಪೂರ್ಣ ಮಾಹಿತಿ

ಬಾಕ್ಸಾಫೀಸಲ್ಲಿ ಧೂಳೆಬ್ಬಿಸಿದ ‘ಪಠಾಣ್’,ಮೊದಲ ದಿನವೇ ಕೆಜಿಎಫ್-2 ದಾಖಲೆ ಬ್ರೇಕ್?

ಒಳ ಉಡುಪಿನಲ್ಲಿ 20 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನ ಸಾಗಾಟ,ವಿಮಾನ ನಿಲ್ದಾಣದಲ್ಲೇ ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ಚೋರ..! ವೈರಲ್ ವಿಡಿಯೋ ವೀಕ್ಷಿಸಿ..