Latestರಾಜಕೀಯರಾಜ್ಯವೈರಲ್ ನ್ಯೂಸ್

ಖಾಸಗಿ ಶಾಲೆಗಳಿಗೆ ಸರ್ಕಾರದಿಂದ ಹೊಸ ನಿಯಮ ಜಾರಿ..! ಪೋಷಕರಿಗೆ ಪರೀಕ್ಷೆ ಮಾಡುವಂತಿಲ್ಲ, ಮನಸೋ ಇಚ್ಛೆ ಫೀಸ್‌ ಹಾಕುವಂತಿಲ್ಲ..!

839

ನ್ಯೂಸ್ ನಾಟೌಟ್: ಖಾಸಗಿ ಶಾಲೆಗಳ ದಾಖಲಾತಿಗಾಗಿ ಶಿಕ್ಷಣ ಇಲಾಖೆ ಹೊಸ ನಿಯಮಗಳನ್ನು ಬಿಡುಗಡೆ ಮಾಡಿದೆ. ದಾಖಲಾತಿ ಹೆಸರಲ್ಲಿ ಮಕ್ಕಳು, ಪೋಷಕರಿಗೆ ಕೊಡುತ್ತಿದ್ದ ಕಿರು* ಕುಳ, ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳಲು ಪೋಷಕರಿಗೆ ಎಕ್ಸಾಂ ನಡೆಸುತ್ತಿದ್ದ ಬಗ್ಗೆ ಹಾಗೂ ಮನಸೋ ಇಚ್ಛೆ ಫೀಸ್ ಕೇಳುತ್ತಿದ್ದ ನಿಯಮಗಳಿಗೆ ಇದೀಗ ಶಿಕ್ಷಣ ಇಲಾಖೆ ಕಡಿವಾಣ ಹಾಕಿದೆ.

ಇನ್ಮುಂದೆ ಶಾಲೆಯವರು ಪೋಷಕರಿಗೆ ಸಂದರ್ಶನ ಮಾಡುವಂತಿಲ್ಲ. ಮನಸೋ ಇಚ್ಛೆ ಶುಲ್ಕ ನಿಗದಿ ಮಾಡುವಂತೆಯೂ ಇಲ್ಲ. ಫೀಸ್ ಫಿಕ್ಸ್ ಮಾಡೋದಕ್ಕೂ ಕೂಡ ಇದೀಗ ಸರ್ಕಾರ ಹೊಸ ನಿಯಮ ಘೋಷಣೆ ಮಾಡಿದ್ದು, ಕಡ್ಡಾಯವಾಗಿ ಖಾಸಗಿ ಶಾಲೆಗಳು ನಿಯಮವನ್ನು ಪಾಲನೆ ಮಾಡಬೇಕು ಎಂದು ಎಚ್ಚರಿಕೆ ನೀಡಿದೆ. ನಿಯಮ ಪಾಲನೆ ಮಾಡದಿದ್ದಲ್ಲಿ ಅಂತಹ ಶಾಲೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಶಾಲಾ ಪ್ರವೇಶಕ್ಕಾಗಿ ವಿದ್ಯಾರ್ಥಿಯನ್ನಾಗಲಿ ಅಥವಾ ಅವರ ಪೋಷಕರನ್ನಾಗಲಿ ಪರೀಕ್ಷಿಸುವಂತಿಲ್ಲ. ಪೋಷಕರು ಅಥವಾ ವಿದ್ಯಾರ್ಥಿಗಳಿಗೆ ಸಂದರ್ಶನ ಮಾಡುವಂತಿಲ್ಲ. ಶಾಲೆಗಳು ತಮ್ಮ ಶಾಲಾ ಶುಲ್ಕವನ್ನು ಕಡ್ಡಾಯವಾಗಿ ನೋಟಿಸ್, ಶಾಲಾ ಜಾಲತಾಣ, ಎಸ್‌ ಎಟಿಎಸ್‌ ನಲ್ಲಿ ಪ್ರಕಟಿಸಬೇಕು. ಶುಲ್ಕದ ಸಂಪೂರ್ಣ ಮಾಹಿತಿಯನ್ನು ಶಾಲೆಯ ಮಾಹಿತಿ ಪುಸ್ತಕದಲ್ಲಿ ಮುದ್ರಿಸಬೇಕು. ಶಾಲಾ ಆಡಳಿತ ಮಂಡಳಿಯೂ ತಾವು ಅಧಿಸೂಚಿಸಿದ ಶುಲ್ಕವನ್ನು ಹೊರತುಪಡಿಸಿ ವಿದ್ಯಾರ್ಥಿಗಳು ಅಥವಾ ಪೋಷಕರಿಂದ ಇತರೇ ಯಾವುದೇ ಶುಲ್ಕ ಪಡೆಯುವಂತೆ ಇಲ್ಲ.

ಖಾಸಗಿ ಶಾಲೆಗಳು ಕಡ್ಡಾಯವಾಗಿ 25% ಆರ್‌ ಟಿಇ ಸೀಟು ಮೀಸಲಿಡಬೇಕು. ಎಸ್‌ಸಿ-ಎಸ್‌ಟಿ ವರ್ಗದ ಆಡಳಿತ ಮಂಡಳಿಯ ಶಾಲೆಗಳಲ್ಲಿ ಕಡ್ಡಾಯ 50% ಎಸ್‌ ಸಿ-ಎಸ್‌ ಟಿ ವಿದ್ಯಾರ್ಥಿಗಳು ಇರಬೇಕು. ಸಹ ಶಿಕ್ಷಣ ಹೊಂದಿರುವ ಶಾಲೆಗಳಲ್ಲಿ ಕಡ್ಡಾಯವಾಗಿ ಮೀಸಲಾತಿ ಅನ್ವಯ ಒಟ್ಟು ಪ್ರದೇಶದಲ್ಲಿ 50% ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ನೀಡಬೇಕು ಎಂಬ ನಿಯಮಗಳನ್ನು ಹಾಕಿವೆ.

ಕುಕ್ಕೆ ಸುಬ್ರಹ್ಮಣ್ಯದ ಆದಾಯದಲ್ಲಿ ದಾಖಲೆಯ ಏರಿಕೆ, ರಾಜ್ಯದ ಶ್ರೀಮಂತ ದೇಗುಲ ಎಂಬ ಹೆಗ್ಗಳಿಕೆ..! ಎರಡು ಮತ್ತು ಮೂರನೇ ಸ್ಥಾನ ಯಾವ ದೇವಸ್ಥಾನಕ್ಕೆ..?

ರಜತ್‍ ಮೇಲೆ ನ್ಯಾಯಾಲಯದ ಆದೇಶ ಉಲ್ಲಂಘನೆ ಆರೋಪ..! ಕಿರುತೆರೆ ನಟನಿಗೆ 14 ದಿನ ಜೈಲು..!

See also  ಒಮನ್ ನಲ್ಲಿ 29ನೇ ವರ್ಷದ ಬರ್ತ್ ಡೇ ಆಚರಿಸಿದ ರಶ್ಮಿಕಾ!!ವಿಜಯ್ ಜತೆಗಿದ್ರು ಅನ್ನೋದಕ್ಕೆ ಫೋಟೋ ಹೇಳಿತು ಸಾಕ್ಷಿ!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget