ಕ್ರೈಂಬೆಂಗಳೂರು

ದೊಡ್ಡ ದೊಡ್ಡ ಶೋರೂಂಗಳೇ ಇವರ ಟಾರ್ಗೆಟ್,ಲಕ್ಷಾಂತರ ಮೌಲ್ಯದ ಸೀರೆಗಳನ್ನು ಒಳಉಡುಪಿನಲ್ಲಿ ತುಂಬಿಸಿ ಯಾಮಾರಿಸುತ್ತಿದ್ದ ಖತರ್ನಾಕ್ ಕಳ್ಳರ ಗ್ಯಾಂಗ್ ಅರೆಸ್ಟಾಗಿದ್ದೇಗೆ?

ನ್ಯೂಸ್ ನಾಟೌಟ್ :ಖತರ್ನಾಕ್ ಗ್ಯಾಂಗೊಂದು ಸಿನಿಮಾ ಸ್ಟೈಲ್‌ ನಲ್ಲಿ ಸೀರೆ ಕಳ್ಳತನ ಮಾಡುತ್ತಿದ್ದು,ಅವರನ್ನು ಖಾಕಿಪಡೆ ಬಂಧಿಸಿರುವ ಘಟನೆ ವರದಿಯಾಗಿದೆ. ದೊಡ್ಡ ದೊಡ್ಡ ಶೋ ರೂಂಗಳಿಗೆ ಎಂಟ್ರಿ ಕೊಡುತ್ತಿದ್ದ ಈ ಗ್ಯಾಂಗ್, ನಮ್ಮ ಮನೆಯಲ್ಲಿ ಮದುವೆ ಇದೆ ಎಂದು ಕಥೆ ಕಟ್ಟಿ ಫುಲ್ ಬಿಲ್ಡಪ್ ಕೊಟ್ಟು ಸೀರೆಗಳನ್ನು ಎಗರಿಸುತ್ತಿದ್ದರು.

ಹೆಣ್ಣಿಗೆ ರಿಸಪ್ಷನ್ ಇದೆ ನಿಮ್ಮ ಶಾಪ್ ನಲ್ಲಿರು ಗ್ರ್ಯಾಂಡ್ ಸೀರೆ ಕೊಡಿ , ಅತ್ತೆಗೆ ಗ್ರಾಂಡ್ ರೇಷ್ಮೆ ಸೀರೆ ಕೊಡಿ ಎಂದು ಯಾಮಾರಿಸುತ್ತಿದ್ದರು. ಅಮ್ಮನಿಗೆ ಕಾಂಜಿವರಂ ಸೀರೆನೇ ಬೇಕು ಎಂದು ಮಾತಿಗೆ ಇಳಿದು ದೊಡ್ಡ ದೊಡ್ಡ ಅಮೌಂಟಿನ ಸೀರೆಗಳಿಗೆ ಕೈ ಹಾಕುತ್ತಿದ್ದರು.ಕಡಿಮೆ ಬೆಲೆಯ ಸೀರೆಗಳು ಇವರ ಕಣ್ಣಿಗೆ ಹಿಡಿಸುತ್ತಿರಲಿಲ್ಲ.

ಈ ಗ್ಯಾಂಗ್ ಕನಿಷ್ಟ 50-60 ಸೀರೆ ತೆಗೆಸಿ ಗುಡ್ಡೆ ಹಾಕಿಸುತ್ತಿದ್ದರು. ಅದು ಚೆನ್ನಾಗಿದೆ ಇದು ಚೆನ್ನಾಗಿದೆ ಅಂತ ಮಾತನಾಡುತ್ತಲೇ ಒಂದೆರಡು ಸೀರೆಯನ್ನ ತಮ್ಮ ಒಳ ಉಡುಪಿನಲ್ಲಿ ಸೇರಿಸಿ ಬೀಡುತ್ತಿದ್ದರು ಎನ್ನಲಾಗಿದೆ. ತಮ್ಮ ಕೆಲಸ ಆದ ಮೇಲೆ ಸೀರೆ ಚೆನ್ನಾಗಿಲ್ಲ ಇದಕ್ಕೆ ರೇಟ್ ಜಾಸ್ತಿಯಾಯಿತು ಹೇಳಿ ಎಂದು ಅಲ್ಲಿಂದ ಹೊರಡುತ್ತಿದ್ದರು.

ಸದ್ಯ ಈ ಖತರ್ನಾಕ್ ಗ್ಯಾಂಗ್’ಗೆ ಪೊಲೀಸರು ಬುದ್ದಿ ಕಲಿಸಿದ್ದಾರೆ. ಕೇಂದ್ರ ವಿಭಾಗ ಪೊಲೀಸರು ಬಂಧಿಸಿದ್ದು, ಚಳಿ ಬಿಡಿಸಿದ್ದಾರೆ.ಭರತ್, ಸುನೀತಾ, ಶಿವರಾಮ್ ಪ್ರಸಾದ್, ವೆಂಕಟೇಶ್, ರಾಣಿ, ಶಿವಕುಮಾರ್ ಬಂಧಿತರು.ಆಂಧ್ರಪ್ರದೇಶದಿಂದ ಬಂದು ಕಳ್ಳತನಕ್ಕೆ ಇಳಿದಿದ್ದ ಇವರು, ಒಟ್ಟೊಟ್ಟಿಗೆ ಹತ್ತಕ್ಕೂ ಹೆಚ್ಚು ಜನ ಹೋಗಿ ಗುಂಪು ಗುಂಪಾಗಿ ಸೀರೆ ಸ್ಯಾಂಪಲ್ ಗಳನ್ನ ಹಾಕಿಸಿಕೊಂಡು ವಂಚನೆ ಮಾಡುತ್ತಿದ್ದರು.

ಸೀರೆ ಅಂಗಡಿ ಸಿಬ್ಬಂದಿ ಸುಸ್ತಾಗುವವರೆಗೂ ಸೀರೆ ತೆಗೆಸಿ ಆ ಗ್ಯಾಪ್ ನಲ್ಲಿ ಬೆಲೆ ಬಾಳೋ ಸೀರೆಯನ್ನೆ ಕದಿಯುತ್ತಿದ್ದರು. ಹೀಗೆ ಅಶೋಕ ನಗರ, ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಖತರ್ನಾಕ್ ಗಳ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇದೇ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಆರು ಜನರನ್ನ ಲಾಕ್ ಮಾಡಿದ್ದಾರೆ. ಈ ಗ್ಯಾಂಗ್’ನ ಇನ್ನೂ ಮೂರಕ್ಕೂ ಹೆಚ್ಚು ಜನ ಆರೋಪಿಗಳು ಎಸ್ಕೇಪ್ ಆಗಿದ್ದು ಪೊಲೀಸರು ಅವರಿಗಾಗಿ ಬಲೆ ಬೀಸಿದ್ದಾರೆ.

Related posts

ಕಾಸರಗೋಡು: ಸಂಜೆ ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮಗು ದಿಢೀರ್ ನಾಪತ್ತೆ..! ಕೆರೆಯಲ್ಲಿ 3 ವರ್ಷದ ಮಗುವಿನ ಶವ ಪತ್ತೆ..!

ಆಸ್ಪತ್ರೆ ಬಿಲ್‌ ಕಟ್ಟಲು ದುಡ್ಡಿಲ್ಲದೆ ಪತ್ನಿಯನ್ನೇ ಕೊಂದ ಪತಿ..! ಪೊಲೀಸರು ಹೇಳಿದ್ದೇನು..?

ಸಂಪಾಜೆಯಲ್ಲಿ ಮಚ್ಚು ಹಿಡಿದು ಬೆದರಿಸಿ ದರೋಡೆ, ಮಹಿಳೆಯ ತಾಳಿ ಸರವನ್ನೂ ಕಿತ್ತೊಯ್ದ ಕಳ್ಳರು..!