ಕೊಡಗುಸುಳ್ಯ

ಸುಳ್ಯ : ಪ್ಲಾಟಿಂಗ್ ಭೂದಾಖಲೆ, ಕನ್ವರ್ಶನ್‌ ಸಮಸ್ಯೆ ಶೀಘ್ರ ಬಗೆಹರಿಸದಿದ್ದರೆ ಹೋರಾಟ

315

ನ್ಯೂಸ್ ನಾಟೌಟ್ : ಸಂಪಾಜೆ ವ್ಯಾಪ್ತಿಯ ಜನರ ಮೂಲ ಸೌಕರ್ಯ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ. ಇದು ಮುಂದಿನ ತಲೆಮಾರುಗಳ ಮೇಲೆ ಭಾರಿ ಪರಿಣಾಮ ಬೀರುತ್ತಿದೆ ಎಂದು ಮೂಲಭೂತ ಸೌಕರ್ಯಗಳ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಕೆ.ಪಿ. ಜಾನಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಂಪಾಜೆ ಜನರಿಗೆ ತಮ್ಮ ಭೂದಾಖಲೆಗಳು ಸಂಬಂಧಿಸಿದ ಪ್ಲಾಟಿಂಗ್ , ಕನ್ವರ್ಶನ್ , ನೈನಿಲವೆನ್ ಮಾಡಿಸಲು ಸಮಸ್ಯೆ, ಸಾರ್ವಜನಿಕ ಸ್ಮಶಾನ ಭೂಮಿಯ ಸಮಸ್ಯೆ, ಅಡಿಕೆಗೆ ಹಳದಿ ರೋಗದಿಂದ ರೈತರು , ಕೃಷಿ ಕಾರ್ಮಿಕರ ಸಮಸ್ಯೆ, ತಮಿಳು ಜನಾಂಗದ ನಿವೃತ್ತಿ ಹಾಗೂ ಮೂಲ ಸೌಕರ್ಯಗಳಾದ ಪಡಿತರ , ನಿವೇಶನ , ಸ್ಮಶಾನ, ವಿದ್ಯುತ್ , ಅಗತ್ಯೆಗಳು ಹಾಗೂ ಅರಣ್ಯ ಜಾಗಕ್ಕೆ ಹೊಂದಿರುವ ಜಮೀನಿನ ಸಮಸ್ಯೆ ಪರಿಹರಿಸಲು ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಆದಷ್ಟು ಬೇಗ ಸ್ಪಂದನೆ ನೀಡಬೇಕು ಎಂದರು.

ಮೂಲಭೂತ ಸೌಕರ್ಯಗಳ ಹಿತರಕ್ಷಣಾ ವೇದಿಕೆಯ ಸಂಚಾಲಕ ಸೋಮಶೇಖರ ಕೊಯಿಂಗಾಜೆ ಮಾತನಾಡಿ, ಕೆಲವೇ ದಿನಗಳಲ್ಲಿ ಮಳೆಗಾಲ ಆರಂಭವಾಗಲಿದ್ದು, ಮೊದಲ ಆದ್ಯತೆಯಲ್ಲಿ ಸಂಪಾಜೆ ಕಲ್ಲುಗುಂಡಿಯ ಹೊಳೆಯ ಹೂಳೆತ್ತಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದರು.

ಮಹಮ್ಮದ್ ಕುಂಞಿ , ವೇದಿಕೆಯ ಗೌರವಾಧ್ಯಕ್ಷ ಯು.ಬಿ.ಚಕ್ರಪಾಣಿ , ಉಪಾಧ್ಯಕ್ಷ ಸುಬ್ರಹ್ಮಣ್ಯ ಕದಿಕಡ್ಕ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಲಿಸಿ ಮೊನಾಲಿಸ, ಸದಸ್ಯರಾದ ವಿಮಲಾ ಪ್ರಸಾದ್ , ಶೌವಾದ್ ಗೂನಡ್ಕ, ವೇದಿಕೆ ಪ್ರಧಾನ ಕಾರ್ಯದರ್ಶಿ ವಸಂತ ಗೌಡ ಪೆಲ್ತಡ್ಕ, ಪದಾಧಿಕಾರಿಗಳಾದ ಎ.ಕೆ. ಇಬ್ರಾಹಿಂ, ಜ್ಞಾನಶೀಲನ್‌ರಾಜು, ಸಡಬಾಸ್ಟಿನ್ ಸುದ್ದಿಗೋಷ್ಠಿಯಲ್ಲಿದ್ದರು.

See also  ಸುಳ್ಯ:ತಾ.ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ NMPUCಯ ಹುಡುಗರ ತಂಡ ಪ್ರಥಮ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget