ಕರಾವಳಿಸುಳ್ಯ

ಸುಳ್ಯ ತಾಲೂಕು ಕರ್ನಾಟಕ ಜರ್ನಲಿಸ್ಟ್ ಯೂನಿಯನ್( ರಿ ) ವತಿಯಿಂದ ಆಯೋಜಿಸಿದ ಪತ್ರಿಕಾ ದಿನಾಚರಣೆ

319

ನ್ಯೂಸ್‌ ನಾಟೌಟ್‌: ನಾನು ಮೊದಲೆಲ್ಲ ಪತ್ರಿಕೆಯಲ್ಲಿ ಕ್ರೈಂ ಪುಟವನ್ನು ನೋಡುತ್ತಿರಲಿಲ್ಲ. ಆದರೆ ಈಗ ಪೊಲೀಸ್‌ ಇಲಾಖೆಗೆ ಸೇರಿದ ಬಳಿಕ ಪತ್ರಿಕೆಯಲ್ಲಿ ಮೊದಲು ಅಪರಾಧ ಪುಟಗಳನ್ನೇ ನೋಡಿ ಬಳಿಕ ಉಳಿದ ಸುದ್ದಿಗಳನ್ನು ಓದುವ ಸಂದರ್ಭ ಬಂದಿದೆ.ಕಾಲೇಜು ದಿನಗಳಲ್ಲಿ ವಿದ್ಯಾರ್ಥಿ ಸಂಪಾದಕನಾಗಿ ದುಡಿದಿದ್ದೆ. ಆ ಕಾಲದಲ್ಲಿ ಪತ್ರಿಕೆಗಳಲ್ಲಿ ಬರುವ ಕಟ್ಟಿಂಗ್ ಗಳನ್ನು ಸಂಗ್ರಹಿಸುವ ಜವಾಬ್ದಾರಿ ನನ್ನದಾಗಿತ್ತುಎಂದು ಸುಳ್ಯ ಸಬ್‌ ಇನ್‌ಸ್ಪೆಕ್ಟರ್‌ ಈರಯ್ಯ ದೂಂತೂರು ಹೇಳಿದರು.

ಸುಳ್ಯ ತಾಲೂಕು ಕರ್ನಾಟಕ ಜರ್ನಲಿಸ್ಟ್ ಯೂನಿಯನ್( ರಿ ) ವತಿಯಿಂದ ಆಯೋಜಿಸಿದ ಪತ್ರಿಕಾ ದಿನಾಚರಣೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕಾರ್ಯಕ್ರಮವನ್ನು ದ. ಕ. , ಕೆ. ಜೆ. ಯು ಜಿಲ್ಲಾಧ್ಯಕ್ಷ ಹರೀಶ್ ಬಂಟ್ವಾಳ್ ಉದ್ಘಾಟಿಸಿದರು. ಶಿವಪ್ರಸಾದ್ ಅಲೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಪುತ್ತೂರು ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವ್ಯ ಪಿ.ಆರ್‌. ಉಪನ್ಯಾಸ ನೀಡಿದರು.

ಈ ವೇಳೆ ಸುಳ್ಯ ಹಿರಿಯ ಪತ್ರಕರ್ತ ಗಂಗಾಧರ ಮಟ್ಟಿ ಅವರನ್ನು ಸನ್ಮಾನಿಸಲಾಯಿತು. ತಾಲೂಕಿನ ವಿವಿಧ ಪತ್ರಿಕೆಯ ಪತ್ರಕರ್ತರು, ಮಾಧ್ಯಮ ಮಿತ್ರರು , ವಿದ್ಯಾರ್ಥಿಗಳು, ಜ್ಞಾನ ದೀಪ ಸಂಸ್ಥೆಯ ಸಿಬ್ಬಂದಿ ಭಾಗವಹಿಸಿದ್ದರು.

See also  Harish poonja: ಹರೀಶ್ ಪೂಂಜಾ ಮನೆಯಲ್ಲಿ ವಕೀಲರು ಮತ್ತು ಪೊಲೀಸರ ನಡುವೆ ವಾಕ್ಸಮರ..! ಶಾಸಕರನ್ನು ಅರೆಸ್ಟ್ ಮಾಡುವ ದುಸ್ಸಾಹಸಕ್ಕೆ ಕೈಹಾಕಿದರೆ ಮುಂದಾಗುವುದಕ್ಕೆಲ್ಲ ಸರ್ಕಾರ ಹೊಣೆ ಎಂದ ಬಿ.ವೈ ವಿಜಯೇಂದ್ರ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget