Latest

ಸುಳ್ಯ:ವಿಶ್ವ ವಿಖ್ಯಾತ ಹಂಪಿ ಉತ್ಸವದಲ್ಲಿ ಎನ್‌ಎಮ್‌ಸಿಯ ಸಹಾಯಕ ಪ್ರಾಧ್ಯಾಪಕಿಯಿಂದ ಪ್ರಬಂಧ ಮಂಡನೆ, ವಿಜಯನಗರ ಕಾಲದ ಮಹಿಳೆ ಮತ್ತು ಮನೋರಂಜನಾ ಕ್ರೀಡೆಗಳು ವಿಷಯದಡಿ ಪ್ರಬಂಧ ಮಂಡಿಸಿದ ಡಾ. ಅನುರಾಧಾ ಕುರುಂಜಿ

249
Spread the love

ನ್ಯೂಸ್ ನಾಟೌಟ್ : ಅಂತಾರಾಷ್ಟ್ರೀಯ ಖ್ಯಾತಿಯ ವಿಶ್ವ ವಿಖ್ಯಾತ ಹಂಪಿ ಉತ್ಸವವು ಫೆಬ್ರುವರಿ 28 ರಿಂದ ಮಾರ್ಚ್ 2 ರವರೆಗೆ ನಡೆಯುತ್ತಿದೆ. ವಿರೂಪಾಕ್ಷೇಶ್ವರ ದೇವಾಲಯ ವೇದಿಕೆಯಲ್ಲಿ ಮಹಿಳಾ ವಿಚಾರ ಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.ಇದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು, ಲೇಖಕರೂ, ವ್ಯಕ್ತಿತ್ವವವಿಕಸನ ತರಬೇತುದಾರರೂ ಆದ ಡಾ. ಅನುರಾಧಾ ಕುರುಂಜಿಯವರು ಪ್ರಬಂಧ ಮಂಡನೆ ಮಾಡಿದ್ದರು.

ಮಹಿಳಾ ಚಿಂತಕಿ ಶೈಲಜ ಹಿರೇಮಠ್ ಉದ್ಘಾಟಿಸಿದ , ಸಾಹಿತಿಗಳಾದ ಎಸ್ ವಿ ಪಾಟೀಲ್ ಅಧ್ಯಕ್ಷತೆ ವಹಿಸಿದ್ದ ವಿಚಾರ ಗೋಷ್ಠಿಯಲ್ಲಿ ಡಾ. ಅನುರಾಧಾ ಕುರುಂಜಿಯವರು “ವಿಜಯನಗರ ಕಾಲದ ಮಹಿಳೆ ಮತ್ತು ಮನೋರಂಜನಾ ಕ್ರೀಡೆಗಳು” ಎಂಬ ವಿಷಯದ ಕುರಿತು ಪ್ರಬಂಧ ಮಂಡಿಸಿದ್ದರು. ಬಹಳಷ್ಟು ವಿದ್ವಾಂಸರುಗಳನ್ನೊಳಗೊಂಡಂತೆ ಲಕ್ಷೋಪಾದಿಯಲ್ಲಿ ಜನರು ಆಗಮಿಸುವ ಈ ಹಂಪಿ ಉತ್ಸವವು ಹಿಂದಿನ ವಿಜಯನಗರ ಸಾಮ್ರಾಜ್ಯದ ಭವ್ಯತೆಯನ್ನು ಮರು ಸೃಷ್ಟಿಸುವ ಉತ್ಸವವಾಗಿದೆ.

See also  ಇನ್ಮುಂದೆ ಪುರುಷರಿಗೂ ವಿಸ್ತರಣೆಯಾಗಲಿದೆ 'ಶಕ್ತಿ ಯೋಜನೆ' ಸೌಲಭ್ಯ?ಬಸ್‌ನಲ್ಲಿ ಫ್ರೀಯಾಗಿ ಓಡಾಡುವ ಕಾಲ ಸನ್ನಿಹಿತವಾಗಿದೆಯಾ?ಸ್ಪೀಕರ್‌ ಯು.ಟಿ. ಖಾದರ್ ಸಿ.ಎಂ.ಗೆ ಬರೆದ ಪತ್ರದಲ್ಲೇನಿದೆ?
  Ad Widget   Ad Widget   Ad Widget   Ad Widget