Latestಕರಾವಳಿಕೊಡಗು

ಮಡಿಕೇರಿ:ಮುಂಗಾರು ಮಳೆ ಬೇಗನೆ ಆರಂಭವಾಗುವ ಸೂಚನೆ, ಅಪಾಯಕಾರಿ ಸ್ಥಳದಲ್ಲಿರುವ 2656 ಕುಟುಂಬಗಳ 10,864 ಮಂದಿ ಸ್ಥಳಾಂತರಕ್ಕೆ ಸಿದ್ಧತೆ!

542

ನ್ಯೂಸ್‌ ನಾಟೌಟ್: ಮಳೆಗಾಲ ಆರಂಭವಾಗುತ್ತಿದೆ ಎನ್ನುತ್ತಿದ್ದ ಹಾಗೆ ಅಪಾಯಕಾರಿ ಜಾಗದಲ್ಲಿರುವ ಕೆಲವು ಭಾಗದ ಜನರಿಗೆ ಆತಂಕ ಶುರುವಾಗುತ್ತದೆ.ಎಲ್ಲಿ ಗುಡ್ಡ ಕುಸಿತು ಬೀಳುವುದೋ ಎಂಬ ಭಯ ಕಾಡುತ್ತದೆ. ಇದೀಗ ಮಡಿಕೇರಿ ಭಾಗದಲ್ಲಿಯೂ ಜನರ ಆತಂಕವನ್ನು ದೂರ ಮಾಡುವಲ್ಲಿ ಅಲ್ಲಿನ ಜಿಲ್ಲಾಡಳಿತ ಸಿದ್ಧವಾಗಿದೆ.

ಮುಂಜಾಗ್ರತ ಕ್ರಮವಾಗಿ ಅಪಾಯಕಾರಿ ಸ್ಥಳದಲ್ಲಿರುವ ಕುಟುಂಬಗಳ ಸ್ಥಳಾಂತರಕ್ಕೆ ಜಿಲ್ಲಾಡಳಿತ ಯೋಜನೆ ರೂಪಿಸಿದ್ದು, ಅಗತ್ಯಬಿದ್ದರೆ ಒಟ್ಟು 2965 ಕುಟುಂಬಗಳನ್ನು ಹಾಗೂ 10,864 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸಜ್ಜಾಗಿದೆ.2018ರಂದು ಸಂಭವಿಸಿದ ಭೂಕುಸಿತದಿಂದಾಗಿ ಕೊಡಗು ಅಕ್ಷರಶಃ ನಲುಗಿ ಹೋಗಿತ್ತು. ಇದಾದ ಬಳಿಕ ಜಿಲ್ಲೆಯಲ್ಲಿ ಜಿಯೋಲಾಜಿಕಲ್ ಸರ್ವೇ ಆಫ್‌ ಇಂಡಿಯಾದ ಭೂ ವಿಜ್ಞಾನಿಗಳ ತಂಡದಿಂದ ಭೂಕುಸಿತದ ಕುರಿತು ಅಧ್ಯಯನ ನಡೆಸಲಾಗಿತ್ತು. ಇದೀಗ ಪ್ರವಾಹ ಮತ್ತು ಭೂಕುಸಿತ ಅಪಾಯವಿರುವ ಸ್ಥಳಗಳನ್ನು ಗುರುತಿಸಲಾಗಿದೆ. ಈ ಅಧ್ಯಯನ ವರದಿಯ ಆಧಾರದ ಮೇಲೆ ಜಿಲ್ಲೆಯಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ಅಪಾಯಕಾರಿ ಪ್ರದೇಶದಲ್ಲಿ ವಾಸವಿರುವ ಜನರನ್ನು ಸ್ಥಳಾಂತರಿಸುವ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಬಾರಿಯೂ ಜಿಲ್ಲೆಯ ಹಲವು ಪ್ರದೇಶಗಳನ್ನು ಗುರುತಿಸಲಾಗಿದ್ದು, ಅಪಾಯಕಾರಿ ಮಟ್ಟದಲ್ಲಿ ಮಳೆಯಾದರೆ ಅಷ್ಟೂ ಕುಟುಂಬಗಳ ಸ್ಥಳಾಂತರಕ್ಕೆ ಕ್ರಮ ಜಿಲ್ಲಾಡಳಿತ ಕೈಗೊಳ್ಳುತ್ತಿದೆ.

ಇನ್ನು ಕಾಳಜಿ ಕೇಂದ್ರಗಳ ಸ್ಥಾಪನೆಗೂ ಅಂಗನವಾಡಿ ಸೇರಿದಂತೆ ಸೌಲಭ್ಯಗಳಿರುವ ಸಾರ್ವಜನಿಕ ಕಟ್ಟಡಗಳನ್ನು ಗುರುತಿಸಲಾಗಿದೆ. ಈ ನಿಟ್ಟಿನಲ್ಲಿಅಪಾಯಕಾರಿ ಗ್ರಾಮ, ಅಲ್ಲಿನ ಕಾಳಜಿ ಕೇಂದ್ರ, ಕುಟುಂಬಗಳು ಸೇರಿದಂತೆ ಎಷ್ಟು ಜನರನ್ನು ಸ್ಥಳಾಂತರಿಸಬೇಕಾಗಬಹುದು ಎಂಬ ವರದಿಯನ್ನು ತಯಾರಿಸಿರುವ ಜಿಲ್ಲಾಡಳಿತ ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರ ಈ ಸಂಬಂಧ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

ಸ್ಥಳಾಂತರಕ್ಕೆ ಗುರುತಿಸಿರುವ ಸ್ಥಳಗಳ ಪಟ್ಟಿಯಲ್ಲಿ ಮಡಿಕೇರಿ ನಗರಸಭೆ ಸೇರಿದಂತೆ ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಕುಟುಂಬಗಳಿವೆ ಎಂದು ಹೇಳಲಾಗಿದೆ. ಮಡಿಕೇರಿ ನಗರದಲ್ಲಿ ಭೂಕುಸಿತ ಅಪಾಯವಿರುವ ಚಾಮುಂಡೇಶ್ವರಿ ನಗರ, ಇಂದಿರಾ ನಗರ, ಜ್ಯೋತಿ ನಗರ, ಮಂಗಳಾದೇವಿ ನಗರ, ಸುಬ್ರಮಣ್ಯ ನಗರ, ಮಲ್ಲಿಕಾರ್ಜುನ ನಗರ, ಮುತ್ತಪ್ಪ ದೇವಾಲಯದ ಬಳಿ, ತ್ಯಾಗರಾಜ ಕಾಲೋನಿ ಮತ್ತು ಪುಟಾಣಿ ನಗರದ 381 ಕುಟುಂಬಗಳ 1648 ಮಂದಿ ಸ್ಥಳಾಂತರದ ಪಟ್ಟಿಯಲ್ಲಿದ್ದಾರೆ ಎನ್ನಲಾಗಿದೆ.ಕುಶಾಲನಗರದ ಪ್ರವಾಹ ಪೀಡಿತ ಬಡಾವಣೆಗಳ 347 ಕುಟುಂಬಗಳ 1366 ಮಂದಿ ಸ್ಥಳಾಂತರ ಪಟ್ಟಿಯಲ್ಲಿದ್ದಾರೆ.

See also  ಸುಳ್ಯ: ಬಟ್ಟೆ ಒಗೆಯಲು ಪಯಸ್ವಿನಿ ನದಿ ನೀರಿಗಿಳಿದ ಯುವಕ ಸಾವು, ಸತತ 3 ಗಂಟೆ ಕಾರ್ಯಾಚರಣೆ ನಡೆಸಿ ಮೃತ ದೇಹ ಹೊರಕ್ಕೆ ತೆಗೆದ ಸುಳ್ಯದ ಆಂಬ್ಯುಲೆನ್ಸ್ ಚಾಲಕರು
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget