ಸುಳ್ಯ

ಸುಳ್ಯದಲ್ಲಿ ಅದ್ದೂರಿ ದಸರಾ ಕಾರ್ಯಕ್ರಮಕ್ಕೆ ಸಿದ್ಧತೆ, ಖ್ಯಾತನಾಮರಾದ ವಿಜಯ ಪ್ರಕಾಶ್, ಅರ್ಜುನ್ ಜನ್ಯ, ಗುರುಕಿರಣ್ ಆಗಮಿಸುವ ನಿರೀಕ್ಷೆ

ನ್ಯೂಸ್ ನಾಟೌಟ್: ಸುಳ್ಯದಲ್ಲಿ ವರ್ಷಂಪ್ರತಿ ನಡೆಯುವ ಶ್ರೀ ಶಾರದಾಂಬಾ ದಸರಾ ಈ ಸಲ ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ. ಸುಳ್ಯ ಶ್ರೀ ಶಾರದಾಂಬಾ ದಸರಾ ಸೇವಾ ಟ್ರಸ್ಟ್ , ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು ಹಾಗೂ ಶ್ರೀ ಶಾರದಾಂಬ ಉತ್ಸವ ಸಮಿತಿ ಸುಳ್ಯ ವತಿಯಿಂದ 53ನೇ ವರ್ಷದ ಶ್ರೀ ಶಾರದಾಂಬ ಉತ್ಸವ ‘ಸುಳ್ಯ ದಸರಾ’ ಅ.9ರಿಂದ ಅ. 17ರ ತನಕ ನಡೆಯಲಿದೆ.

ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುಳ್ಯ ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ, ‘ಒಂಭತ್ತು ದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ದಸರಾ ಅದ್ದೂರಿಯಾಗಿ ನಡೆಯಲಿದೆ. ಪ್ರತಿ ವರ್ಷ ಸುಳ್ಯ ನಗರವನ್ನು ದಸರಾ ಸಂದರ್ಭದಲ್ಲಿ ತಳಿರು ತೋರಣಗಳಿಂದ ಹಾಗೂ ಬಂಟಿಂಗ್ಸ್ ಗಳಿಂದ ಅಲಂಕಾರ ಮಾಡುತ್ತಿದ್ದೆವು. ಈ ಬಾರಿ ನಗರ ಪಂಚಾಯತ್ ಆಡಳಿತದ ಸಹಕಾರರೊಂದಿಗೆ ವರ್ತಕರ ಸಹಭಾಗಿತ್ವದಲ್ಲಿ ಪ್ರತಿ ಅಂಗಡಿಗಳನ್ನೂ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡುವಂತೆ ವಿನಂತಿಸಿಕೊಳ್ಳಲಾಗಿದೆ. ಈ ಸಲ 15 ರಿಂದ 20 ಟ್ಯಾಬ್ಲೋ ಇರಲಿದೆ ಅ.16ರಂದು ಸಾಂಸ್ಕೃತಿಕ ಸಮಾರೋಪದ ದಿನವಾಗಿದ್ದು ಖ್ಯಾತ ಗಾಯಕ ವಿಜಯ ಪ್ರಕಾಶ್, ಸಂಗೀತ ನಿರ್ದೇಶಕರಾದ ಗುರುಕಿರಣ್, ಅರ್ಜುನ್ ಜನ್ಯ ರಂತಹ ದಿಗ್ಗಜರನ್ನು ಕರೆತರಲು, ಸ್ಟಾರ್ ಆಕರ್ಷಣೆ ನೀಡಲು ಸಿದ್ಧತೆ ನಡೆಯುತ್ತಿದೆ ಎಂದು ತಿಳಿಸಿದರು.

ಈ ವೇಳೆ ಮಾತನಾಡಿದ ಶ್ರೀ ಶಾರದಾಂಬ ಉತ್ಸವ ಸಮಿತಿ ಅಧ್ಯಕ್ಷ ಡಾ| ಡಿ.ವಿ. ಲೀಲಾಧರ್ , ಈ ಸಲ ಅದ್ದೂರಿಯಾಗಿ ನಡೆಯುವ ದಸರಾಕ್ಕೆ ಎಲ್ಲರ ಸಹಕಾರ ಅಗತ್ಯವಿದೆ, ಎಲ್ಲರೂ ಕುಟುಂಬ ಸಮೇತರಾಗಿ ಭಾಗವಹಿಸಬೇಕು. ಅಲ್ಲದೆ ಅಂತಿಮ ದಿನ ಶೋಭಾಯಾತ್ರೆಯಲ್ಲಿ ತಾಲೂಕಿನ ಜನರು ಭಾಗವಹಿಸಬೇಕು ಎಂದು ತಿಳಿಸಿದರು.

ಶ್ರೀ ಶಾರದಾಂಬ ಉತ್ಸವ ಸಮಿತಿಯ ಗೌರವಾಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ಮಹಿಳಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಶಶಿಕಲಾ ನೀರಬಿದಿರೆ, ಶ್ರೀ ಶಾರದಾಂಬ ಸೇವಾ ಸಮಿತಿಯ ಕೋಶಾಧಿಕಾರಿ ಅಶೋಕ್ ಪ್ರಭು, ಶ್ರೀ ಶಾರದಾಂಬ ಉತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುತ್ತಮೊಟ್ಟೆ, ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ ಖಜಾಂಚಿ ಬೂಡು ರಾಧಾಕೃಷ್ಣ ರೈ, ಶ್ರೀ ಶಾರದಾಂಬ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜು ಪಂಡಿತ್, ಉಪಾಧ್ಯಕ್ಷರಾದ ಡಾ. ಯಶೋದಾ ರಾಮಚಂದ್ರ, ಲತಾ ಮಧುಸೂದನ್, ಹರೀಶ್ ರೈ ಉಬರಡ್ಕ, ಹೇಮಂತ್ ಕಾಮತ್, ಶ್ರೀ ಶಾರದಾಂಬ ಉತ್ಸವ ಸಮಿತಿಯ ಕೋಶಾಧಿಕಾರಿ ಗಣೇಶ್ ಆಳ್ವ, ದಸರಾ ಉತ್ಸವ ಸಮಿತಿಯ ಖಜಾಂಚಿ ಸುನಿಲ್ ಕೇರ್ಪಳ, ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ ಕಾರ್ಯದರ್ಶಿ ಎಂ.ಕೆ. ಸತೀಶ್, ಗೌರವ ಸದಸ್ಯರಾದ ತೀರ್ಥರಾಮ ಜಾಲ್ಸೂರು, ಶಾರದಾಂಬ ಉತ್ಸವ ಸಮಿತಿಯ ಉಪಾಧ್ಯಕ್ಷರಾದ ಸನತ್ ಪೆರಿಯಡ್ಕ, ಸತೀಶ್ ಕೆ.ಜಿ, ಶಿವನಾಥ್ ರಾವ್, ರಂಜಿತ್ ಎನ್.ಆರ್, ಸಂದೇಶ್ ಕುರುಂಜಿ, ಬಾಲಕೃಷ್ಣ ಎಸ್.ಬಿ.ಲ್ಯಾಬ್, ಶಾರದಾಂಬ ಮಹಿಳಾ ಸಮಿತಿಯ ಕಾರ್ಯದರ್ಶಿ ಶ್ರೀದೇವಿ ನಾಗರಾಜ ಭಟ್, ಶೀಲಾ ಅರುಣ ಕುರುಂಜಿ, ಗೌರವ ಸದಸ್ಯೆ ಶೀಲಾ ಅರುಣ ಕುರುಂಜಿ, ಹೇಮಲತಾ ದೇಂಗೋಡಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

Related posts

ಸೌಜನ್ಯ ಅತ್ಯಾಚಾರ,ಕೊಲೆ ಪ್ರಕರಣ(Dharmastala Soujanya Rape and Murder Case):ಆರೋಪಿಗಳನ್ನು ಮಂಜುನಾಥ ಸ್ವಾಮಿ ಕಣ್ಣೆದುರೇ ತೋರಿಸಲಿ,ಧರ್ಮಸ್ಥಳ ಕ್ಷೇತ್ರ ಹಾಗೂ ಖಾವಂದರ ಅಪಪ್ರಚಾರ ಮಾಡಿದ್ರೆ ಹೋರಾಟ -ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಸುಳ್ಯ ಎಚ್ಚರಿಕೆ,ವಿಡಿಯೋ ವೀಕ್ಷಿಸಿ

ಸುಳ್ಯ: ಓಡಬಾಯಿಯಿಂದ ಬೈಕ್ ಕಳವಾದ ಪ್ರಕರಣಕ್ಕೆ ಟ್ವಿಸ್ಟ್,ಜ್ಯೋತಿ ಸರ್ಕಲ್ ನಲ್ಲಿ ಬೈಕ್ ಪತ್ತೆ!,ಓಡಬಾಯಿಯಿಂದ ಜ್ಯೋತಿಸರ್ಕಲ್ ಗೆ ಬೈಕ್ ತಂದಿಟ್ಟವರಾರು?!

ಪಂಜದಲ್ಲಿ ಅಕ್ರಮ ದನ ಸಾಗಾಟ, ಪಿಕಪ್‌ ವಾಹನ ತಡೆದು ಪೊಲೀಸರಿಗೊಪ್ಪಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು