ಕ್ರೈಂ

ನಿಧಿಗಾಗಿ ಬಾಣಂತಿಯ ಹತ್ಯೆ?

371

ನ್ಯೂಸ್ ನಾಟೌಟ್: ನಿಧಿಯ ಆಸೆಗಾಗಿ ಬಾಣಂತಿಯನ್ನು ಅಮಾವಾಸ್ಯೆಯಂದು ಬಲಿ ಕೊಟ್ಟಿರುವ ಅನುಮಾನ ಹುಟ್ಟಿಸುವ ಘಟನೆ ಕೊಪ್ಪಳ ಜಲ್ಲೆಯ ಗಬ್ಬೂರು ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ನೇತ್ರಾವತಿ ಕುರಿ (26) ಎಂದು ಗುರುತಿಸಲಾಗಿದೆ.

ನೇತ್ರಾವತಿ ಒಂದೂವರೆ ತಿಂಗಳ ಬಾಣಂತಿಯಾಗಿದ್ದು, ಅವರ ಮೃತದೇಹ ಮನೆಯಿಂದ ಅಣತಿ ದೂರದಲ್ಲಿ ಸಂಪೂರ್ಣ ಸುಟ್ಟು ಕರಕಲಾಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸೋಮವಾರ ತಡರಾತ್ರಿ ಅಮಾವಾಸ್ಯೆಯಂದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಮಾವಾಸ್ಯೆ ಹಿನ್ನೆಲೆಯಲ್ಲಿ ನಿಧಿಗಾಗಿ ಆಕೆಯನ್ನು ಸುಟ್ಟು ಕೊಲೆ ಮಾಡಲಾಗಿದೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಕೊಪ್ಪಳ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

See also  ಉಡುಪಿ: ದುರ್ಗಾಪರಮೇಶ್ವರಿ ದೇವಸ್ಥಾನದ ಹಣ ಲೆಕ್ಕಾಚಾರದ ವಿಚಾರದಲ್ಲಿ ಹೊಡೆದಾಟ..! ಜಾತ್ರೆಯ ಮರುದಿನವೇ ಗಲಾಟೆ..!
  Ad Widget   Ad Widget   Ad Widget     Ad Widget   Ad Widget   Ad Widget Ad Widget     Ad Widget   Ad Widget   Ad Widget