ಕೊಡಗುಕ್ರೈಂ

ಇಸ್ಲಾಂಗೆ ಮತಾಂತರವಾಗಲು ನಕಾರ;ಗರ್ಭಿಣಿಗೆ ವಿಷಕುಡಿಸಿ ಕೊಲೆ,ದುರಂತ ಅಂತ್ಯ ಕಂಡ ಹಿಂದೂ ಯುವತಿಯ ಜೀವನ

209

ನ್ಯೂಸ್ ನಾಟೌಟ್ : ಗರ್ಭಿಣಿಯೋರ್ವಳಿಗೆ ವಿಷಪ್ರಶಾನ ಮಾಡಿಸಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಇದೀಗ ಬೆಳಕಿಗೆ ಬಂದಿದೆ.ವ್ಯಕ್ತಿಯೋರ್ವ ಇಸ್ಲಾಂಗೆ ಮತಾಂತರವಾಗುವಂತೆ ಒತ್ತಡ ಹೇರಿ ಈ ಕೃತ್ಯ ನಡೆಸಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ಲಖಿಂಪುರದ ಸೀಮಾ ಗೌತಮ್(24) ಮೃತಮಹಿಳೆ ಎಂದು ಗುರುತಿಸಲಾಗಿದೆ.

ಈ ಘಟನೆ ನಡೆದಿದ್ದು, ಉತ್ತರ ಪ್ರದೇಶದ ಶಹಜಾನ್​ಪುರ ಎಂಬಲ್ಲಿ. ಈ ಬಗ್ಗೆ ಮೃತ ಮಹಿಳೆ ಸಹೋದರ ಆರೋಪ ಮಾಡಿದ್ದು, ಆಕೆಗೆ ವಿಷಪ್ರಾಶನ ಮಾಡಿಸಿ ಕೊಲೆ ಮಾಡಲಾಗಿದೆ ಎಂದು ಹೇಳಿದ್ದಾನೆ. ನಾವೇದ್ ಹಾಗೂ ಸೀಮಾ ಕಳೆದ ಒಂದೂವರೆ ವರ್ಷದಿಂದ ಲಿವ್​ ಇನ್​ ರಿಲೇಷನ್​ ಶಿಪ್​ನಲ್ಲಿದ್ದರು ಎನ್ನುವ ಮಾಹಿತಿಯಿದೆ. ಬಾಡಿಗೆ ಮನೆಯೊಂದರಲ್ಲಿ ಒಟ್ಟಾಗಿ ವಾಸಿಸುತ್ತಿದ್ದ ವೇಳೆ ಗರ್ಭಿಣಿ ಕೂಡ ಆಗಿದ್ದಳು ಎನ್ನಲಾಗಿದೆ. ಈ ವೇಳೆ ನಾವೇದ್​ ಆಕೆಗೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಒತ್ತಡ ಹೇರುತ್ತಿದ್ದ ಎನ್ನುವ ಅಂಶ ಬೆಳಕಿಗೆ ಬಂದಿದೆ.ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ನಾವೇದ್ ಮತ್ತು ಫರ್ಹಾನ್ ಎಂಬುವರು ಸೀಮಾಳನ್ನು ಆಸ್ಪತ್ರೆಗೆ ಕರೆತಂದಿದ್ದರು. ಆಗ ಅವರಿಬ್ಬರೂ ಮಹಿಳೆಯನ್ನು ನಾವೇದ್ ಪತ್ನಿ ಜೋಯಾ ಸಿದ್ದಿಕಿ ಎಂದು ಆಸ್ಪತ್ರೆಯ ಅಧಿಕಾರಿಗಳಿಗೆ ತಿಳಿಸಿದ್ದರು ಎನ್ನಲಾಗಿದೆ. ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ ಕೂಡಲೇ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರಿಂದ ಮಾಹಿತಿ ಲಭ್ಯವಾಗಿದೆ.

https://www.youtube.com/watch?v=2T3tcZg5Wm8
See also  ಅರಂತೋಡು :ನಿಯಂತ್ರಣ ತಪ್ಪಿ ಬೋಲೆರೊ ಪಲ್ಟಿ, ತಪ್ಪಿದ ಬಾರಿ ಅನಾಹುತ
  Ad Widget   Ad Widget   Ad Widget   Ad Widget   Ad Widget   Ad Widget   Ad Widget